ದಾವಣಗೆರೆ, ಡಿ.2- ಇನ್ವಿಟೇಷನ್ ಕಪ್ ಟೆಿನಿಸ್ ಟೂರ್ನ್‌ಮೆಂಟ್‌ನವರು ಮಕ್ಕಳಿಗಾಗಿ ಏರ್ಪಡಿಸಿದ್ದ ಟೆನಿಸ್ ಸ್ಪರ್ಧೆ ಬಾಲಕ, ಬಾಲಕಿಯರಿಗಾಗಿ ತಲಾ ನಾಲ್ಕು ಕಪ್ ವಿತರಿಸಲಿದ್ದು, ಶಿವಮೊಗ್ಗ, ಬೆಂಗಳೂರು, ಮಂಡ್ಯ, ಮೈಸೂರು, ಬಾಗಲಕೋಟೆ ಹುಬ್ಬಳ್ಳಿ, ಬಿಜಾಪುರ, ದಾವಣಗೆರೆ ಜಿಲ್ಲೆಗಳ ನೂರಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿರುವರು. ಈ ಪಂದ್ಯವನ್ನು ಜಿಲ್ಲಾ ಟೆನಿಸ್ ಅಸೋಸಿಯೇಷನ್ ಅಧ್ಯಕ್ಷ ಡಾ. ಎಸ್. ಎಂ. ಬ್ಯಾಡಗಿ ಅವರು ಇಂದು ಉದ್ಘಾಟಿಸಿದರು.
ಕಾರ್ಯದರ್ಶಿ ಎಸ್.ಎಂ. ಸಮಂತ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ದಾವಣಗೆರೆ ಟೆನಿಸ್ ಅಕಾಡೆಮಿಯವರಿಂದ ನಡೆಯುತ್ತಿರುವ ಈ 13ನೇ ವಾರ್ಷಿಕೋತ್ಸವ ಟೂರ್ನ್‌ಮೆಂಟ್ ಇಂದು ಮುಕ್ತಾಯಗೊಳ್ಳಲಿದ್ದು, ಸಾರ್ವಜನಿಕರು ಉಚಿತವಾಗಿ ವೀಕ್ಷಿಸಿಬಹುದು. ಅದೇ ರೀತಿ ವಯಸ್ಕರ ಟೆನಿಸ್ ಕಪ್ ಪಂದ್ಯವನ್ನು ಇದೇ ದಿನಾಂಕ 8, 9, 10ರಂದು ಟೆನಿಸ್ ಅಕಾಡೆಮಿಯಲ್ಲಿಯೇ ನಡೆಸಲಾಗುವುದು. ಆಸಕ್ತರು ಭಾಗವಹಿಸಬಹುದೆಂದು ಟೆನಿಸ್ ಟೂರ್ನಮೆಂಟ್ ಸಹಕಾರ್ಯದರ್ಶಿ ರಘುನಂದನ್ ಅಂಬರ್‌ಕರ್ ತಿಳಿಸಿದರು.