ಉತ್ತಮ ಸಂಸ್ಕಾರ ಶಿಕ್ಷಣದ ಅವಿಭಾಜ್ಯ ಅಂಗ

ಉತ್ತಮ ಸಂಸ್ಕಾರ ಶಿಕ್ಷಣದ ಅವಿಭಾಜ್ಯ ಅಂಗ

ದಾವಣಗೆರೆ, ಡಿ. 7- ಉತ್ತಮ ಸಂಸ್ಕಾರ ಶಿಕ್ಷಣದ ಅವಿಭಾಜ್ಯ ಅಂಗ, ದೈಹಿಕ ಶಿಕ್ಷಕರು ಮಾತ್ರ ಶಾಲಾ ಮಕ್ಕಳಲ್ಲಿ ಇಂತಹ ವ್ಯಕ್ತಿತ್ವ ರೂಪಿಸುವ ಕೆಲಸ ಮಾಡಬಲ್ಲರು.  ಮಕ್ಕಳಿಗೆ ದೈಹಿಕ ಶಿಕ್ಷಣದ ಜೊತೆ ಉತ್ತಮ ಸಂಸ್ಕಾರ ಕೊಟ್ಟು ಅವರ ಬೌದ್ಧಿಕ ಸಾಮರ್ಥ್ಯ ಹೆಚ್ಚಿಸುವ ಕೆಲಸ ಮಾಡಬೇಕು.  ಶಾಲೆಗಳಲ್ಲಿ ದೈಹಿಕ ಶಿಕ್ಷಕರ ಜವಾಬ್ದಾರಿ ಹೆಚ್ಚಿದ್ದು ಮಕ್ಕಳನ್ನು ದೇಶ ನಿಷ್ಠೆಯ, ಕಾಯಕದಲ್ಲಿ ದೈವತ್ವ ಕಂಡು ದೇಶದ ಶ್ರೇಷ್ಠ ಪ್ರಜ್ಞಾವಂತ ಪ್ರಜೆಗಳನ್ನಾಗಿ ರೂಪಿಸಿ ತಾವೂ ಶ್ರೇಷ್ಠರಾಗಬೇಕು ಎಂದು  ಭಾರತ ಸೇವಾದಳ ಜಿಲ್ಲಾಧ್ಯಕ್ಷ ಪ್ರೊ. ಹೆಚ್.ಚನ್ನಪ್ಪ ಪಲ್ಲಾಗಟ್ಟೆ ಅವರು ಕರೆ ನೀಡಿದರು. 

ಭಾರತ ಸೇವಾದಳ ಭವನದಲ್ಲಿ ಭಾರತ ಸೇವಾದಳ, ಜಿಲ್ಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ದಾವಣಗೆರೆ ಉತ್ತರ ವಲಯ ಇವರ ಸಹಯೋಗದಲ್ಲಿ ಇಂದು ಆಯೋಜಿಸಿದ್ದ ದೈಹಿಕ ಶಿಕ್ಷಣ ಶಿಕ್ಷಕರ ಪುನಶ್ಚೇತನ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. 

ಕಾರ್ಯಕ್ರಮವನ್ನು ಉದ್ಘಾಟಿಸಿದ ತಾಲ್ಲೂಕು ದೈಹಿಕ ಶಿಕ್ಷಣ ಅಧಿಕಾರಿ ಮಹಮ್ಮದ್ ಹುಸೇನ್ ಪೀರ್ ಅವರು ಮಾತನಾಡಿ, ದೈಹಿಕ ಶಿಕ್ಷಕರು ಮೊದಲು ತಾವು ಎಲ್ಲಾ ರೀತಿಯ ವ್ಯಾಯಾಮಕ್ಕೆ ಸಂಬಂಧಿಸಿದ ಎಲ್ಲಾ ಪರಿಕರಗಳನ್ನು ಬಳಸುವ ಸಾಮರ್ಥ್ಯ ಹೊಂದ ಬೇಕು ಮತ್ತು ಮಕ್ಕಳಿಗೆ ಉತ್ತಮ ತರಬೇತಿ ನೀಡುವ ಕುರಿತು ಕಾರ್ಯಾಗಾರದಲ್ಲಿ ಭಾಗವಹಿ ಸಿದ್ದ ಶಿಕ್ಷಕರಿಗೆ ಮಾರ್ಗದರ್ಶನ ನೀಡಿದರು. 

ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಕಾರ್ಯದರ್ಶಿ ಸಂತೋಷ್, ತಾಲ್ಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಹಾಲೇಶ್, ಹಿರಿಯ ಭಾರತ ಸೇವಾದಳದ ಸದಸ್ಯರಾದ ನಿವೃತ್ತ ಶಿಕ್ಷಕ ಬಸವರಾಜಪ್ಪ ಕೆ.ಪಿ., ಭಾರತ ಸೇವಾದಳ ಜಿಲ್ಲಾ ಸಮಿತಿಯ ಸದಸ್ಯ ಹೆಚ್. ಹನುಮಂತಪ್ಪ ಹಾಜರಿದ್ದರು. 

ಜಿಲ್ಲಾ ಸಮಿತಿಯ ಶಿಕ್ಷಕ ಸದಸ್ಯ ಕೆ.ಟಿ.ಜಯ್ಯಪ್ಪ, ಟಿ.ಎಸ್.ಕುಮಾರಸ್ವಾಮಿ, ಡಾ.ಲಕ್ಷ್ಮಣ ಮತ್ತು ಭಾರತ ಸೇವಾದಳ ಜಿಲ್ಲಾ ನೂತನ ಸಂಘ ಟಕರಾದ ಫಕ್ಕೀರಗೌಡ ಅವರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯ ನಿರ್ವಹಿಸಿದರು.

ಸೇವಾದಳ ಸರ್ವ ಧರ್ಮ ಪ್ರಾರ್ಥನೆಯ ಬಳಿಕ ತಾಲ್ಲೂಕು ದೈಹಿಕ ಶಿಕ್ಷಕರ ಸಂಘದ ಕಾರ್ಯ ದರ್ಶಿ ಶಿಕ್ಷಕ ಎ.ಆರ್. ಗೋಪಾಲಪ್ಪ ಸ್ವಾಗತಿಸಿದರು.  

error: Content is protected !!