ಮಕ್ಕಳಿಗೆ ಮನೆಯಿಂದಲೇ ಉತ್ತಮ ಸಂಸ್ಕಾರ ಕಲಿಸಬೇಕು

ಮಕ್ಕಳಿಗೆ ಮನೆಯಿಂದಲೇ ಉತ್ತಮ ಸಂಸ್ಕಾರ ಕಲಿಸಬೇಕು

ಜಿಗಳಿ : ಎನ್ನೆಸ್ಸೆಸ್ ಶಿಬಿರದಲ್ಲಿ ಪೋಷಕರಿಗೆ ಬಿಇಓ ಹನುಮಂತಪ್ಪ ಕಿವಿಮಾತು

ಮಲೇಬೆನ್ನೂರು, ಡಿ.7- ಮಕ್ಕಳಿಗೆ ಶಿಕ್ಷಣ ಕೊಡಿಸಿದರೆ ಸಾಲದು. ಶಾಲೆಯಲ್ಲಿ ಕಲಿಸುವ ಶಿಕ್ಷಣದ ಜೊತೆಗೆ ಮನೆಯಲ್ಲಿ ಉತ್ತಮ ಸಂಸ್ಕಾರವನ್ನೂ ಕಲಿಸಬೇಕೆಂದು ಹರಿಹರ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಹನುಮಂತಪ್ಪ ಪೋಷಕರಿಗೆ ಹೇಳಿದರು.

ಅವರು ಗುರುವಾರ ಜಿಗಳಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹರಿ ಹರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಹಮ್ಮಿಕೊಂಡಿರುವ ಎನ್ನೆಸ್ಸೆಸ್ ಶಿಬಿರದ 6ನೇ ದಿನದ ಸಂಜೆ ಕಾರ್ಯ ಕ್ರಮವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳು ಶಿಕ್ಷಣದ ಜೊತೆಗೆ ಸಂಸ್ಕಾರವನ್ನೂ ಕಲಿತರೆ ಸಮಾಜದಲ್ಲಿ ಉತ್ತಮ ನಾಗರಿಕರಾಗಿ, ಶಿಕ್ಷಕರಾಗಿ, ಅಧಿಕಾರಿಗಳಾಗಿ, ವೈದ್ಯರಾಗಿ, ವಕೀಲರಾಗಿ, ರಾಜಕಾರಣಿಯಾಗಿ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸಂಸ್ಕಾರವನ್ನು ಮನೆಯಿಂದಲೇ ಕಲಿಸಿ ಎಂದು ಮತ್ತೊಮ್ಮೆ ಪೋಷಕರಿಗೆ ತಿಳಿಸಿದರು.

ಹರಿಹರ ತಾ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಚಂದ್ರಪ್ಪ ಮಾತನಾಡಿ, ವಿದ್ಯಾರ್ಥಿಗಳಿಗೆ ಸೇವಾ ಮನೋಭಾವನೆ ಮೂಡಿಸಬೇಕೆಂಬ ಉದ್ದೇಶದಿಂದಲೂ ಎನ್ನೆಸ್ಸೆಸ್ ಶಿಬಿರಗಳನ್ನು ಆಯೋಜಿಸಲಾಗಿದೆ.

ಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಜಿ.ಆನಂದಪ್ಪ, ಗ್ರಾ.ಪಂ. ಮಾಜಿ ಅಧ್ಯಕ್ಷ ಎಂ.ವಿ.ನಾಗರಾಜ್, ಶ್ರೀರಂಗನಾಥ ಬಾಲಕೇಂದ್ರದ ಅಧ್ಯಕ್ಷ ಜಿ.ಆರ್.ಚಂದ್ರಪ್ಪ, ಎಸ್‌ಜೆವಿಪಿ ಕಾಲೇಜಿನ ಉಪನ್ಯಾಸಕ ಕೆ.ಎನ್.ಮಂಜುನಾಥ್, ಶಾಲೆಯ ಶಿಕ್ಷಕ ಜಿ.ಬಿ.ಮಲ್ಲಿಕಾರ್ಜುನ್ ಮಾತನಾಡಿದರು.

ಎಸ್‌ಡಿಎಂಸಿ ಅಧ್ಯಕ್ಷ ಬಿ.ಪ್ರಭಾಕರ್  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಗ್ರಾಮದ ಮುಖಂಡರಾದ ಕೊಟ್ರಯ್ಯ, ಕೆ.ಷಣ್ಮುಖಪ್ಪ, ಎಸ್‌ಡಿಎಂಸಿ ಉಪಾಧ್ಯಕ್ಷೆ ಶ್ರೀಮತಿ ರೇಣುಕಮ್ಮ ನಿಂಗಪ್ಪ, ಸದಸ್ಯರಾದ ವಿಜಯಭಾಸ್ಕರ್, ತೆಲಗಿ ನಾಗರಾಜ್, ಕೆ.ಆಂಜನೇಯ, ಶ್ರೀಮತಿ ರತ್ನಮ್ಮ ಬಸವರಾಜ್, ಶ್ರೀಮತಿ ಸುನೀತಾ ಟಿ.ನಾಗರಾಜ್, ಶ್ರೀಮತಿ ಪ್ರಿಯಾ ಟಿ.ಮಧು, ಶ್ರೀಮತಿ ಮಂಜುಳಾ ಮಾಲತೇಶ್, ಶ್ರೀಮತಿ ನೂರ್‌ಜಾನ್ ಚಮನ್‌ಸಾಬ್, ಶ್ರೀಮತಿ ಶೀಲಾ ಹನುಮಂತಪ್ಪ, ಟಿ.ಎಸ್.ಗದಿಗೇಶ್, ಡಿ.ಪಿ.ಚಿದಾನಂದ್, ಶಿಕ್ಷಕ ಕೆ.ಡಿ.ಗುಡ್ಡಪ್ಪ, ಪತ್ರಕರ್ತ ಪ್ರಕಾಶ್, ಶಿಬಿರದ  ಕಾರ್ಯಕ್ರಮಾಧಿಕಾರಿಗಳಾದ ಡಾ. ಬಿ.ಕೆ.ಮಂಜುನಾಥ್, ಡಾ.ಸಿ.ಚಂದ್ರಶೇಖರ್ ಹಾಗೂ  ಇತರರು ಭಾಗವಹಿಸಿದ್ದರು.

error: Content is protected !!