ಜಿಗಳಿ : ನರೇಗಾ ಸಾಮಾಜಿಕ ಲೆಕ್ಕ ಪರಿಶೋಧನೆ ಗ್ರಾಮ ಸಭೆಯಲ್ಲಿ ಜಿ.ಪಂ. ಸಿಇಓ ಸುರೇಶ್ ಬಿ. ಇಟ್ನಾಳ್ ಅಭಿಮತ
ಮಲೇಬೆನ್ನೂರು, ಡಿ.7- ಉದ್ಯೋಗ ಖಾತರಿ ಯೋಜನೆಯಿಂದ ಗ್ರಾಮೀಣ ಜನರ ಜೀವನ ಮಟ್ಟ ಸುಧಾರಿಸಲಿದ್ದು, ಜಾರಿಗೆ ತಂದಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಜಿ.ಪಂ. ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ. ಇಟ್ನಾಳ್ ಹೇಳಿದರು.
ಜಿಗಳಿ ಗ್ರಾಮದ ಗ್ರಾ.ಪಂ. ಕಛೇರಿ ಆವರಣದಲ್ಲಿ ಇಂದು ಹಮ್ಮಿಕೊಂಡಿದ್ದ ಉದ್ಯೋಗ ಖಾತರಿ ಯೋಜನೆಯ 2022-23ನೇ ಸಾಲಿನ 15ನೇ ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನೆ ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪಿಡಿಓ ಕೆ.ಎಸ್. ಉಮೇಶ್ ಸ್ವಾಗತಿಸಿದರು. ತಾ.ಪಂ. ಪ್ರಭಾರ ಇಓ ರಾಮಕೃಷ್ಣಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಪಂ. ಸಾಮಾಜಿಕ ಲೆಕ್ಕಪರಿಶೋಧನೆ ತಂಡದ ದಾಸಪ್ಪರೆಡ್ಡಿ ನರೇಗಾ ವರದಿಯನ್ನು ಸಭೆಗೆ ವಿವರವಾಗಿ ಓದಿ ತಿಳಿಸಿದರು.
ತಾ.ಪಂ. ಸಹಾಯಕ ನಿರ್ದೇಶಕ ಜಿ.ಆರ್. ಸುನಿಲ್, ಜಿ.ಪಂ. ಎಇಇ ಬಿ.ಕೆ. ಹರೀಶ್, ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ರೂಪಾ ಸೋಮಶೇಖರ್, ಉಪಾಧ್ಯಕ್ಷ ವೈ. ಚೇತನ್ಕುಮಾರ್, ಗ್ರಾ.ಪಂ. ಸದಸ್ಯರಾದ ಡಿ.ಎಂ. ಹರೀಶ್, ಎನ್.ಎಂ. ಪಾಟೀಲ್, ಕೆ.ಜಿ. ಬಸವರಾಜ್, ಶ್ರೀಮತಿ ಕರಿಯಮ್ಮ, ಶ್ರೀಮತಿ ಕವಿತಾ ಮಾಕನೂರು ಶಿವು, ಶ್ರೀಮತಿ ವಿನೋದ ಜಿ.ಆರ್. ಹಾಲೇಶ್ಕುಮಾರ್, ಶ್ರೀಮತಿ ರೇಣುಕಾ ಪೂಜಾರ್ ನಾಗರಾಜ್, ಶ್ರೀಮತಿ ಮಂಜುಳಾ ಸಿ.ಎನ್. ಪರಮೇಶ್ವರಪ್ಪ, ಎಂ.ಎಸ್. ಮಲ್ಲನಗೌಡ, ಜಿ. ಬೇವಿನಹಳ್ಳಿ ಹೋಬಳಿ ಆನಂದಗೌಡ, ಪಿ.ಹೆಚ್. ದೇವರಾಜ್, ಕೆ.ಜಿ. ಮಹಾಂತೇಶ್, ಶ್ರೀಮತಿ ಜಯಮ್ಮ ಬಿ.ಕೆ. ರಂಗನಾಥ್, ಶ್ರೀಮತಿ ಆಶಾ ಅಣ್ಣಪ್ಪ, ಶ್ರೀಮತಿ ರೇಣುಕಮ್ಮ ರಂಗಪ್ಪ, ಬಸಾಪುರದ ಎ.ಕೆ. ಹನುಮಂತಪ್ಪ, ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಿ. ಆನಂದಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಜಿ. ಮಂಜುನಾಥ್ ಪಟೇಲ್, ಪಿಎಸಿಎಸ್ ಅಧ್ಯಕ್ಷ ಬಿ.ಎಸ್. ಕುಬೇರಸ್ವಾಮಿ, ಹಾ.ಉ.ಸ. ಸಂಘದ ಅಧ್ಯಕ್ಷ ಜಿ.ಎಂ. ವೀರನಗೌಡ, ಎಸ್ಡಿಎಂಸಿ ಅಧ್ಯಕ್ಷ ಬಿ. ಪ್ರಭಾಕರ್, ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಬಿ.ಎಂ. ದೇವೇಂದ್ರಪ್ಪ, ಎಂ.ವಿ. ನಾಗರಾಜ್, ಎಕ್ಕೆಗೊಂದಿ ರುದ್ರಗೌಡ, ಹೊಳೆಸಿರಿಗೆರೆ ವೈದ್ಯಾಧಿಕಾರಿ ಡಾ. ಚೇತನ್, ಸಿಆರ್ಪಿ ನಂಜುಂಡಪ್ಪ, ಸಿಡಿಪಿಓ ಪೂರ್ಣಿಮಾ, ಸಾಮಾಜಿಕ ಕಾರ್ಯಕ್ರಮದ ಜಿಲ್ಲಾ ವ್ಯವಸ್ಥಾಪಕ ಜಯಪ್ರಕಾಶ್, ತಾಲ್ಲೂಕು ವ್ಯವಸ್ಥಾಪಕರಾದ ಶ್ರೀಮತಿ ವಾಣಿ, ತಾಂತ್ರಿಕ ಇಂಜಿನಿಯರ್ ಬಿ.ಎಸ್. ಸುಜಾತ, ಗ್ರಾ.ಪಂ. ಕಾರ್ಯದರ್ಶಿ ಸುಜಾತ, ಗ್ರಾ.ಪಂ. ಲೆಕ್ಕ ಸಹಾಯಕ ಬಿ. ಮೌನೇಶ್, ಕಂಪ್ಯೂಟರ್ ಆಪರೇಟರ್ ಪ್ರಕಾಶ್, ಸಿಬ್ಬಂದಿಗಳಾದ ಬಸವರಾಜಯ್ಯ, ಮೃತ್ಯುಂಜಯ ಸೇರಿದಂತೆ ಇತರರು ಭಾಗವಹಿಸಿದ್ದರು.