ಕೃಷಿ ಕ್ಷೇತ್ರದಲ್ಲಿ ಅಧಿಕ ಉದ್ಯೋಗ ಸೃಷ್ಟಿ ಮಾಡಬಹುದು : ಡಾ. ಹುಲ್ಲುನಾಚೇಗೌಡ

ಕೃಷಿ ಕ್ಷೇತ್ರದಲ್ಲಿ ಅಧಿಕ ಉದ್ಯೋಗ ಸೃಷ್ಟಿ ಮಾಡಬಹುದು : ಡಾ. ಹುಲ್ಲುನಾಚೇಗೌಡ

ದಾವಣಗೆರೆ. ಡಿ. 7- ಕೃಷಿ ಕ್ಷೇತ್ರದಲ್ಲಿ ಅಧಿಕವಾಗಿರುವ ಉದ್ಯೋಗಗಳನ್ನು ಸೃಷ್ಟಿ ಮಾಡಬಹುದು. ರೈತರನ್ನು ತಾಂತ್ರಿಕ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಿದರೆ ಮಾತ್ರ ಕೃಷಿ ಕ್ರೇತ್ರದಲ್ಲಿ  ಅಮೂಲಾಗ್ರ ಬದಲಾವಣೆ ಹಾಗು  ಅಭಿವೃದ್ಧಿ ಪಡಿಸಬಹುದು ಎಂದು ಮೈಕ್ರೋಬಿ ಸಮೂಹ ಸಂಸ್ಥೆಗಳ ಛೇರ್ಮನ್ ಡಾ. ಕೆ.ಆರ್. ಹುಲ್ಲುನಾಚೇಗೌಡ ತಿಳಿಸಿದರು.

ಅವರು ನಗರದ ಕುವೆಂಪು ಕನ್ನಡ ಭವನದಲ್ಲಿ ಮೈಕ್ರೋಬಿ ಆಗ್ರೋಟೆಕ್ ಪ್ರೈವೇಟ್. ಲಿ. ಹಾಗು ಶ್ರೀ ಶಿವ ನಾರದಮುನಿ ಕೃಷಿ ಮಾಹಿತಿ ಮತ್ತು ಪರಿಕರ ಮಾರಾಟ ಕೇಂದ್ರದ ವತಿಯಿಂದ  ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡುತ್ತಿದ್ದರು.

ಗ್ರಾಮೀಣ ಭಾಗದ ಯುವಕರನ್ನು ಕೃಷಿ ಉದ್ಯಮದತ್ತ ಸೆಳೆಯಬೇಕು. ಮಣ್ಣಿನ ಫಲವತ್ತತೆಯಿಂದ ಬೆಳೆದಿರುವ ಪದಾರ್ಥಗಳನ್ನು ಮಾರುಕಟ್ಟೆ ಯವರೆಗೂ ತಲುಪಿಸುವ ಡಿಜಿಟಲ್ ತಂತ್ರಜ್ಞಾನದವರೆಗೂ ನಾವು ರೈತರನ್ನು ಪ್ರೋತ್ಸಾಯಿಸುತ್ತೇವೆ. ಉದ್ಯೋಗ ಮೇಳಕ್ಕೆ ಬಂದ ಅಭ್ಯರ್ಥಿಗಳಿಗೆ ಸಂದರ್ಶನ ನಡೆಸಿ ಮೊದಲ ಹಂತದಲ್ಲಿ 17 ಅಭ್ಯರ್ಥಿಗಳಿಗೆ ಉದ್ಯೋಗ ನೀಡಲಾಯಿತು ಎಂದು ತಿಳಿಸಿದರು.

ಮೈಕ್ರೋಬಿ ಫೌಂಡೇಶನ್ ಜಿಲ್ಲಾ ಸಂಚಾಲಕ ಮಹದೇವಪ್ಪ ದಿದ್ದಿಗೆ ಮಾತನಾಡಿದರು.  ಕಾರ್ಯಕ್ರಮ ದಲ್ಲಿ ಚರಣ್ ನಾಯ್ಡು, ರವಿ ಯೋಗರಾಜ್, ವಿಶ್ವನಾಥ್, ಲಿಖಿತ್ ಜ್ಯೋತಿರ್ಮಯಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!