ಹರಿಹರ, ನ.7- ನಗರದ ತುಂಗಭದ್ರಾ ನದಿ ಹತ್ತಿರದ ದರ್ಗಾ ಮುಂಭಾಗದ ಬೀರೂರು- ಸಮ್ಮಸಗಿ ರಸ್ತೆಯನ್ನು ದುರಸ್ತಿ ಪಡಿಸಲು ಮುಂದಾಗದಿದ್ದರೆ ನಾಳೆ ದಿನಾಂಕ 8 ರ ಶುಕ್ರವಾರ ಹರಿಹರ ಬಂದ್ ಮಾಡ ಲಾಗುವುದು ಎಂದು ಜಯಕರ್ನಾಟಕ ಸಂಘಟನೆ ಸೇರಿದಂತೆ, 10 ಕ್ಕೂ ಹೆಚ್ಚು ಸಂಘಟನೆಗಳು ಮುಖಂಡರು ಎಚ್ಚರಿಸಿದ್ದಾರೆ.
ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವೇಳೆ ಜಯಕರ್ನಾಟಕ ಸಂಘಟನೆಯ ಗೋವಿಂದ ಮಂಜುನಾಥ್, ಕಾರ್ಮಿಕ ಮುಖಂಡ ಹೆಚ್.ಕೆ. ಕೊಟ್ರಪ್ಪ, ಡಿ.ಎಸ್.ಎಸ್. ಸಂಘಟನೆ ಕೊಟ್ರೇಶ್, ಹನುಮಂತಪ್ಪ ಕೊತ್ವಾಲ್, ಮಂಜುನಾಥ್ ಕೊಪ್ಪಳ, ಟಿಪ್ಪು ಸುಲ್ತಾನ್ ಸೈನಿಕ ಸೇನೆ ಸಿಕಂದರ್ ಧರವೇಶ್, ಬಿ. ಮುಗ್ದಂ, ರಕ್ಷಣಾ ವೇದಿಕೆಯ ಇಲಿಯಾಸ್ ಆಹ್ಮದ್, ಭಾಗ್ಯಮ್ಮ, ರುದ್ರಗೌಡ, ಶ್ರೀನಿವಾಸ್, ಆಮ್ ಆದ್ಮಿ ಪಕ್ಷದ ಮಲ್ಲೇಶ್ ಮಾತನಾಡಿ, ಬೀರೂರು- ಸಮ್ಮಸಗಿ ರಸ್ತೆ ದುರಸ್ತಿ ಪಡಿಸಲು ಈಗಾಗಲೇ ಇಬ್ಬರು ಶಾಸಕರು ತಮ್ಮ ಅವಧಿಯಲ್ಲಿ ಮಾಡದೇ ಇರುವುದಕ್ಕೆ ಕಾರಣ, ಅವರ ಸ್ವ ಪ್ರತಿಷ್ಟೆಯಿಂದಾಗಿ ಮತ್ತು ದರ್ಗಾದವರು ಸಹ ಅವರ ಪ್ರತಿಷ್ಟೆಯನ್ನು ಮುಂದೆ ತರುವುದರಿಂದ ಈ ಚಿಕ್ಕದಾದ ರಸ್ತೆಯನ್ನು ದುರಸ್ತಿ ಪಡಿಸಲು 8 ವರ್ಷಗಳಿಂದ ಸತತವಾಗಿ ಮುಂದೂಡುತ್ತಾ, ಒಂದಿಲ್ಲೊಂದು ಸಮಸ್ಯೆಗಳು ಬರುತ್ತಿರುವುದು ಸಾಮಾನ್ಯವಾಗಿತ್ತು. ಸರ್ಕಾರ ಕೂಡ ಸಾರ್ವಜನಿಕರಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ 2 ಕೋಟಿ ರೂ.ಹಣ ಬಿಡುಗಡೆ ಮಾಡಿದೆ. ಇದನ್ನು ಮನಗೊಂಡು ಸ್ಥಳೀಯ ಶಾಸಕರು ಮತ್ತು ಅಧಿಕಾರಿಗಳು ಹಣ ವಾಪಸ್ ಹೋಗದಂತೆ ಆದಷ್ಟು ಬೇಗ ರಸ್ತೆಯನ್ನು ದುರಸ್ತಿ ಪಡಿಸಲು ಮುಂದಾಗಬೇಕಿದೆ ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಹಬೀಬ್ ಉಲ್ಲಾ, ತಿಪ್ಪೇಸ್ವಾಮಿ, ಸೈಯದ್ ಸಮೀವುಲ್ಲಾ, ರಾಮಪ್ಪ ಬೇಟೇರ್, ಮಂಜುನಾಥ್, ಶಬ್ಬೀರ್ ಆಹ್ಮದ್ ಅಮಾನುಲ್ಲಾ ಇತರರು ಹಾಜರಿದ್ದರು.