ಹರಪನಹಳ್ಳಿ, ಡಿ. 7 – ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಶಿಕ್ಷಕರು ಅವರಿಗೆ ಉತ್ತೇಜನ ನೀಡಬೇಕು ಎಂದು ಉಜ್ಜಯಿನಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಎಂ.ಎಂ. ಹರ್ಷವರ್ಧನ್ ತಿಳಿಸಿದರು.
ಪಟ್ಟಣದ ಎಸ್ಯುಜೆಎಂ ಕಾಲೇಜ್ನ ವಿದ್ಯಾರ್ಥಿಗಳು ಈಚೇಗೆ ರಾಮನಗರದಲ್ಲಿ ನಡೆದ ಜ್ಯೂಡೋ ಸ್ಪರ್ಧೆಯಲ್ಲಿ ವಿವಿಧ ವಿಭಾಗಗಳಲ್ಲಿ ಜಯ ಗಳಿಸಿದ್ದು, ಅವರನ್ನು ಸನ್ಮಾನಿಸಿ ಮಾತನಾಡಿದರು.
ಎಸ್ಯುಜೆಎಂ ಪದವಿ ಪೂರ್ವ ಕಾಲೇಜ್ನ ಪ್ರಾಚಾರ್ಯ ಹೆಚ್.ಮಲ್ಲಿಕಾರ್ಜುನ ಮಾತನಾಡಿ, ಜ್ಯೂಡೋ ಸ್ಪರ್ಧೆಯಲ್ಲಿ ಎಸ್ಯುಜೆಎಂ ಕಾಲೇಜ್ನ ವಿದ್ಯಾರ್ಥಿ ಎ. ನಾಗರಾಜ ಗೌಡ 45 ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕ ಪಡೆಯುವ ಮೂಲಕ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಈಚೇಗೆ ರಾಮನಗರದಲ್ಲಿ ನಡೆದ ಜೂಡೋ ಸ್ಪರ್ಧೆಯಲ್ಲಿ ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿದ ಎಸ್ಯುಜೆಎಂ ಕಾಲೇಜಿನ ಎಸ್. ಪ್ರದೀಪ 40 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.
ಸರ್ಕಾರಿ ಪದವಿ ಪೂರ್ವ ಕಾಲೇಜ್ನ ಪ್ರಗತಿ 52 ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕ, ಎಂ. ರಂಜಿತ ಬೆಳ್ಳಿ ಪದಕ ಮತ್ತು ಎಸ್ಎಸ್ಎಚ್ ಜೈನ್ ಕಾಲೇಜ್ನ ವಿದ್ಯಾರ್ಥಿಗಳಾದ ಯು.ಆರ್. ಖಲೀಲ್ ರಹಮಾನ್ ಮತ್ತು ಎಸ್. ರಂಜಿತ ಬೆಳ್ಳಿ ಪದಕ ಪಡೆದು ಗೆಲುವು ಸಾಧಿಸಿ ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ ಎಂದು ಪ್ರಾಚಾರ್ಯ ಮಲ್ಲಿಕಾರ್ಜುನ ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜ್ಞಾನ ಗುರು ವಿದ್ಯಾಪೀಠದ ನಿರ್ದೇಶಕ ಬೂದಿ ಶಿವಕುಮಾರ್, ಉಪನ್ಯಾಸಕ ಹೆಚ್.ಬಿ. ಸೋಮರೆಡ್ಡಿ, ಎಸ್. ಚನ್ನಬಸಪ್ಪ, ಬಿ.ಕೃಷ್ಣಮೂರ್ತಿ, ಎಸ್. ಕೊಟ್ರೇಶ್, ಎಂ. ಚಿಕ್ಕಪ್ರಸಾದ್, ಕೆ. ಬೀರಾ ನಾಯ್ಕ, ಸಿ.ಎಂ. ಪ್ರವೀಣ, ಆತ್ಮಾನಂದ ಮುಂದಿನ ಮನಿ, ಕೆ.ಎಂ. ಶೈಲಜಾ, ಬಿ. ಸುನಿಲ್, ಸಿಬ್ಬಂದಿ ಕಾರ್ಯದರ್ಶಿ ಟಿ.ಎಂ. ಜಯದೀಪ, ಎಂ.ಜಿ. ರುದ್ರಯ್ಯ ಉಪಸ್ಥಿತರಿದ್ದರು. ಹರಪನಹಳ್ಳಿ ಜ್ಯೂಡೋ ತರಬೇತುದಾರ ಡಿ.ಭಾಷಾ ಇದ್ದರು