ಜಗಳೂರು, ಡಿ. 7 – ಜಗಳೂರು ತಾಲ್ಲೂ ಕನ್ನು ಪುನಃ ಚಿತ್ರದುರ್ಗ ಜಿಲ್ಲೆಗೆ ಮರುಸೇರ್ಪಡೆ ಗೊಳಿಸಲು ಒತ್ತಾಯಿಸಿ, ಹೋರಾಟ ಸಮಿತಿಯ ನಿಯೋಗದಲ್ಲಿ ತೆರಳಿ ಇಂದು ಜಿಲ್ಲಾಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಲಾಯಿತು.
ಜಗಳೂರು ತಾಲ್ಲೂಕನ್ನು ಚಿತ್ರದುರ್ಗ ಜಿಲ್ಲೆಗೆ ಪುನಃ ಸೇರ್ಪಡೆಗೊಳಿಸಲು ಹೋರಾಟ ಸಮಿತಿ ಯಿಂದ ಹಲವು ಬಾರಿ ಮನವಿ ಸಲ್ಲಿಸಲಾಗಿದೆ.
ಕಂದಾಯ ಸಚಿವರು ಹಾಗೂ ಮುಖ್ಯಮಂತ್ರಿಗಳ ಉಪಕಾರ್ಯದರ್ಶಿಗಳು ಸೇರಿದಂತೆ ಚಿತ್ರದುರ್ಗ ಹಾಗೂ ದಾವಣಗೆರೆ ಎರಡೂ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಂಡು ಸೂಕ್ತ ನಿರ್ದೇಶನ ನೀಡಲು ಸೂಚಿಸಲಾಗಿತ್ತು.
ಆದರೆ ಇದುವರೆಗೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೋರಾಟ ಸಮಿತಿ ಸದಸ್ಯರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಹೆಚ್.ತಿಮ್ಮಾರೆಡ್ಡಿ, ವಕೀಲ ಆರ್. ಓಬಳೇಶ್, ನಾಗಲಿಂಗಪ್ಪ, ಹಿರಿಯ ಮುಖಂಡರಾದ ಬಿ.ಡಿ.ಹನುಮಂತಪ್ಪ ರೆಡ್ಡಿ, ಎಂ.ಓಬಪ್ಪ, ಕೆ.ತಿಮ್ಮರಾಯಪ್ಪ , ಬಂಗಾರಪ್ಪ , ಸಿ.ತಿಪ್ಪೇಸ್ವಾಮಿ, ಖಾಸಿಂಪೀರ್, ಖಾದರ್ ಸಾಬ್, ಪುಟ್ಟಣ್ಣ , ಹನುಮಂತಾಪುರ ರಾಜಪ್ಪ, ಮಹಬೂಬ್ ಆಲಿ, ಕೆ.ಟಿ.ವೀರಸ್ವಾಮಿ, ನೂರ್ ಅಹಮದ್, ರಾಜಣ್ಣ ಮೇಸ್ಟ್ರು ಸತೀಶ್, ಓ. ಮಂಜಣ್ಣ, ಧನ್ಯಕುಮಾರ್, ಮಾದಿಹಳ್ಳಿ ಮಂಜುನಾಥ್ ಮುಂತಾದವರು ಇದ್ದರು.