ಮಲೇಬೆನ್ನೂರು, ಡಿ.6- ಒಡೆಯರ ಬಸವಾಪುರ ಗ್ರಾಪಂ ವ್ಯಾಪ್ತಿಯ ಪಟೇಲ್ ಬಸಪ್ಪ ಎಜುಕೇಶನ್ ಅಸೋಸಿಯೇಷನ್ನ ರಾಜ ರಾಜೇಶ್ವರಿ ವಿದ್ಯಾ ಸಂಸ್ಥೆ ವತಿಯಿಂದ ಮಾಧ್ಯಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಸೃಜನಶೀಲತೆ, ಕ್ರಿಯಾಶೀಲತೆಗೆ ಪ್ರೇರಣೆ ನೀಡುವ ಹಿನ್ನೆಲೆಯಲ್ಲಿ ಬಾಲಕರಿಗೆ ಹಸಿರು ಎಲೆಗಳ ಕಲಾತ್ಮಕ ಚಟುವಟಿಕೆ ಹಾಗೂ ಬಾಲಕಿಯರಿಗೆ ಪೇಪರ್ ಮೂಲಕ ಡ್ರೆಸ್ ಮೇಕಿಂಗ್ ಚಟುವಟಿಕೆ ನಡೆಸಲಾಯಿತು.
ತಮಗೆ ಕೊಟ್ಟ ಅವಧಿಯಲ್ಲಿ ಬಾಲಕರು ಎಲೆಗಳು ಮತ್ತು ಗರಿಗಳ ಮೂಲಕ ಎತ್ತಿನ ಗಾಡಿ, ಹೂ ಕುಂಡಲ, ಚಾಪೆ, ಮೊರ, ತೋರಣ, ವಿವಿಧ ಆಭರಣ, ಕಿರೀಟ ಇತ್ಯಾದಿ ರಚಿಸಿ ಕಲಾ ಪ್ರತಿಭೆ ಮೆರೆದರು.
ಪ್ರೌಢಶಾಲಾ ಬಾಲಕಿಯರು ವಿಧವಿಧದ ಹಳೆಯ ಮತ್ತು ಹೊಸ ವಿನ್ಯಾಸದ ಉಡುಪುಗಳನ್ನು ಪೇಪರ್ ಕಟ್ಟಿಂಗ್ ಮೂಲಕ ತಯಾರಿಸಿ ಪ್ರಾಥಮಿಕ ವಿದ್ಯಾರ್ಥಿನಿಯರಿಗೆ ತೊಡಿಸಿ ಸಂಭ್ರಮಿಸಿದರು.