ಹೊನ್ನಾಳಿ : ಕ್ಯಾಂಡಲ್ ಹಚ್ಚಿ ಪರಿನಿರ್ವಾಣ ದಿನಾಚರಣೆ

ಹೊನ್ನಾಳಿ : ಕ್ಯಾಂಡಲ್ ಹಚ್ಚಿ ಪರಿನಿರ್ವಾಣ ದಿನಾಚರಣೆ

ಹೊನ್ನಾಳಿ, ಡಿ. 6 – ದೇಶದ ಪ್ರಥಮ ಕಾನೂನು ಸಚಿವರಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್‌ ಅವರು ಸಮಾಜಕ್ಕೆ ನೀಡಿದ ಕೊಡುಗೆ ಸಾಧನೆಯನ್ನು ಅವರು ನಿಧನ ಹೊಂದಿದ ಈ ದಿನ ಸ್ಮರಿಸುವ ನಿಟ್ಟಿನಲ್ಲಿ ಮಹಾಪರಿ ನಿರ್ವಾಣ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಪ್ರಜಾಪರಿವರ್ತನಾ ವೇದಿಕೆ ರಾಜ್ಯ ಕಾರ್ಯಾಧ್ಯಕ್ಷ ಎ.ಡಿ. ಈಶ್ವರಪ್ಪ ಹೇಳಿದರು.

ಪ್ರಜಾಪರಿವರ್ತನಾ ವೇದಿಕೆ ವತಿಯಿಂದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕ್ಯಾಂಡಲ್ ಹಚ್ಚುವ ಮೂಲಕ ಅಂಬೇಡ್ಕರ್‌ ರವರ ಮಹಾಪರಿನಿರ್ವಾಣ ದಿನದ ಕುರಿತು ಅವರು ಮಾತನಾಡಿದರು.

ಸಂವಿಧಾನ ಶಿಲ್ಪಿ, ವಿಶ್ವಜ್ಞಾನಿ, ಭಾರತ ರತ್ನ ಅಂಬೇಡ್ಕರ್‌ ಅವರನ್ನು ಕೇವಲ ಪ್ರತಿಮೆ ನಿರ್ಮಾಣ, ಸರ್ಕಲ್‍ಗಳ ರಚನೆ, ಜಯಂತಿ ಆಚರಣೆಗೆ ಸೀಮಿತಿಗೊಳಿಸದೇ ಅವರ ಆಚಾರ-ವಿಚಾರಗಳ ಮಹತ್ವ ಅರಿಯಬೇಕಿದೆ ಎಂದರು.

ಪ್ರಜಾಪರಿವರ್ತನಾ ವೇದಿಕೆಯಿಂದ ಬರುವ ದಿನಗಳಲ್ಲಿ `ಅಂಬೇಡ್ಕರ್‌ ಅಭಿಮಾನಿಗಳ ಮನೆಯಲ್ಲಿ ಭಾವಚಿತ್ರ, ಮನದಲ್ಲಿ ಅಂಬೇಡ್ಕರ್‌’ ಎಂಬ ಭಾವನೆ ಮೂಡಿಸಲು ಅನೇಕ ರೀತಿಯ ಕಾರ್ಯಯೋಜನೆಗೆ ಪಣ ತೊಟ್ಟಿದ್ದು ಅಂಬೇಡ್ಕರ್ ಅಭಿಮಾನಿಗಳು ಕತ್ತಲಿನಿಂದ ಬೆಳಕಿನವರೆಗೆ ಸಾಗುವ ಕಾರ್ಯ ಯಶಸ್ವಿಗೊಳಿಸಲು ಸಹಕರಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ಅರಕೆರೆ, ಕಾರ್ಯದರ್ಶಿ ಲೋಕೇಶ್, ಸಿದ್ದಪ್ಪ ಸಿಂಗಟಗೆರೆ, ಸಾಸ್ವೆಹಳ್ಳಿ ಅಧ್ಯಕ್ಷ ಶಿವಮೂರ್ತಿ, ನ್ಯಾಮತಿ ಅಧ್ಯಕ್ಷ ಜಗದೀಶ್, ಹುರಳಹಳ್ಳಿ ಮಹೇಶ, ನಾಗರಾಜ್, ಕಲ್ಕೇರಿ ನಾಗಣ್ಣ, ಮಹಿಳಾ ಪದಾಧಿಕಾರಿಗಳಾದ ಸಿಂಗಟಗೆರೆ ಗೌರಮ್ಮ, ಕುರುವ ಮಮತ, ದೊಡ್ಡೇರಹಳ್ಳಿ ಸವಿತ, ಹರಳಹಳ್ಳಿ ರೇಖಾ ಇನ್ನಿತರರಿದ್ದರು.

error: Content is protected !!