ದಾವಣಗೆರೆ, ಡಿ.6- ಶಿವಮೊಗ್ಗದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಶಾಲಾ ಶಿಕ್ಷಣ ಇಲಾಖೆಯ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ನಗರದ ಆರ್. ಯೋಗರಾಜ್ ಪ್ರಥಮ ಸ್ಥಾನವನ್ನು ಹಾಗೂ ತುಳಸಿ ಎಸ್.ಎ. ಇವರು ತೃತೀಯ ಸ್ಥಾನ ಪಡೆದಿದ್ದಾರೆ.
ಈ ಇಬ್ಬರು ದೆಹಲಿಯಲ್ಲಿ ನಡೆಯಲಿರುವ ಸ್ಕೂಲ್ ಗೇಮ್ಸ್ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ. ಇವರುಗಳಿಗೆ ತರಬೇತುದಾರರಾದ ಎಸ್. ಯುವರಾಜ್, ರವಿನಾರಾಯಣ್, ಪ್ರವೀಣ್ ಜಿ. ಹಾಗೂ ಬ್ರಹ್ಮ ಚೈತನ್ಯ ಮಂದಿರದ ಅಧ್ಯಕ್ಷ ಪಿ.ಸಿ. ಮಹಾಬಲೇಶ್ ಮತ್ತು ಕಾರ್ಯದರ್ಶಿ ಬಿ.ಎಸ್. ಸುಬ್ರಮಣ್ಯ ಅವರುಗಳು ಅಭಿನಂದಿಸಿದ್ದಾರೆ.