ರಾಣೇಬೆನ್ನೂರು, ಡಿ.6- ಶ್ರೀ ಪಂಚಾಕ್ಷರಿ ಮಾರ್ಷಲ್ ಆರ್ಟ್ಸ್ ಟ್ರಸ್ಟ್ ಸಂಸ್ಥೆಯು, ಬಳ್ಳಾರಿ ವಾಲ್ಮೀಕಿ ಭವನದಲ್ಲಿ ಆಯೋಜಿಸಿದ್ದ 4ನೇ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್‍ಷಿಪ್‍ನಲ್ಲಿ ಶಹರದ ವಿಜಯ ಅಗಡಿ ಮಾರ್ಷಲ್ ಆರ್ಟ್ಸ್ ಸ್ಪೋರ್ಟ್ಸ್ ಕ್ಲಬ್ ಕರಾಟೆ ಪಟುಗಳು ಒಟ್ಟು 16 ಚಿನ್ನ, 13 ಬೆಳ್ಳಿ, 11 ಕಂಚು ಮತ್ತು ಕುಮಿತೆ (ಫೈಟಿಂಗ್) ವಿಭಾಗದಲ್ಲಿ ಒಟ್ಟು 22 ಟ್ರೋಫಿ ಪಡೆದು ಉತ್ತಮ ಸಾಧನೆ ಮಾಡಿರುತ್ತಾರೆ.
ಈ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್‍ಷಿಪ್‍ನಲ್ಲಿ 10 ರಾಜ್ಯಗಳಿಂದ ಸುಮಾರು 1500 ಕರಾಟೆ ಪಟುಗಳು ಭಾಗವಹಿಸಿದ್ದರು. ಚಾಂಪಿಯನ್‍ಷಿಪ್‍ನಲ್ಲಿ ಭಾಗವಹಿಸಿದ್ದ ಶಹರದ ಒಟ್ಟು 40 ಕರಾಟೆ ಪಟುಗಳು ಪದಕ ವಿಜೇತರಾಗಿದ್ದಾರೆ
ಕಟಾ ಮತ್ತು ಕುಮಿತೆ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಉನ್ನತಿ ಕೆ.ಎಮ್, ನಿಶ್ಚಿತಾ ಐ.ಎಂ, ಭರತ್ ಕೆ, ಮೋನಿಕಾ ಆರ್.ಆರ್, ಭುವನ್ ಎಸ್.ಡಬ್ಲೂ, ತರುಣ್ ಕೆ.ಎ, ಜೀವನ್ ಸಿ.ಕೆ, ಅನುಷ್ಕಾ ಟಿ.ಕೆ, ಸಾಯಿ ಸಾನ್ವಿತ್ ಎಂ.ಕೆ, ಯುವರಾಜ್, ವಿಜಯ ಎಂ.ಕೆ, ಅಕ್ಷಯ್ ಕೆ.ಬಿ, ಮನೋಜ್ ಕೆ, ಎ. ಸಲ್ಮಾನ್ ಮತ್ತು ನೇಹಾ ಜಿ.ಎನ್ ಪಡೆದಿರುತ್ತಾರೆ.
ದ್ವಿತೀಯ ಸ್ಥಾನವನ್ನು ಸೃಷ್ಟಿ ಎಸ್.ಬಿ., ಅಕ್ಷತಾ ಎನ್.ಕೆ, ಸಿರಿ ಜಿ.ಜಿ, ಸನ್ನಿಧಿ ವೈ, ಪವನಗೌಡ, ಚಂದನ ಎನ್.ಕೆ, ಪ್ರಣವ್ ಸಿ.ಎಂ, ಹರ್ಷಿತ್ ಆರ್.ಪಿ, ವಿಕ್ಕಿ ಕೆ.ಎಂ, ಮಾಹುಲ್ ಬಿ.ಎನ್, ಸತೀಶ್ ಎಸ್.ಎಲ್, ಮನು ಎಲ್ ಮತ್ತು ಅಮೃತ್ ಎನ್.ಪಿ, ಪಡೆದಿರುತ್ತಾರೆ.
ತೃತೀಯ ಸ್ಥಾನವನ್ನು ಕನಿಷ್ಕ್ ವಿ. ಅಗಡಿ, ಯೋಗೇಶ್ ಎಲ್, ಹರಣಿ ಎನ್.ಸಿ, ಸಂತೋಷ್ ವಿ.ಐ, ಸಿದ್ದಾರ್ಥ್, ಸೋಹನ್ ಎಸ್.ಬಿ, ಸುಬ್ರಮಣ್ಯ ಆರ್.ಪಿ, ಪವನ್ ಎಮ್, ಆದರ್ಶ ಜಿ.ಎನ್, ಆಯುಷ್ ಎನ್.ಪಿ ಮತ್ತು ಕಿಶೋರ್ ಎಸ್.ಹೆಚ್ ಗಳಿಸಿರುತ್ತಾರೆ.
ವಿಜೇತ ವಿದ್ಯಾರ್ಥಿಗಳನ್ನು ತರಬೇತಿದಾರರಾದ ಶಿಹಾನ್ ವಿಜಯ ಅಗಡಿ ಹಾಗೂ ಪಾಲಕರು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.