ಜಿಗಳಿ : ಎನ್ನೆಸ್ಸೆಸ್ ಶಿಬಿರದಲ್ಲಿ ನ್ಯಾಯಾಧೀಶರಾದ ಮಹದೇವ ಕಾನಟ್ಟಿ
ಮಲೇಬೆನ್ನೂರು, ಡಿ.6- ಕಾನೂನನ್ನು ರಕ್ಷಣೆಗಾಗಿ ಬಳಸಬೇಕೇ ಹೊರತು ಅಸ್ತ್ರವಾಗಿ ಬಳಸಬಾರದು ಎಂದು ಹರಿಹರದ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಮಹದೇವ ಕಾನಟ್ಟಿ ಹೇಳಿದರು.
ಅವರು, ಬುಧವಾರ ಜಿಗಳಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹರಿಹರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಹಮ್ಮಿಕೊಂಡಿರುವ ಎನ್ನೆಸ್ಸೆಸ್ ಶಿಬಿರದ 5ನೇ ದಿನದ ಸಂಜೆ ಕಾರ್ಯಕ್ರಮವನ್ನು ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಡಾ. ಅಂಬೇಡ್ಕರ್ ಅವರು ನೀಡಿದ ಸಂವಿಧಾನದಲ್ಲಿ ನೂರಾರು ಕಾನೂನುಗಳು ಜಾರಿಯಲ್ಲಿರುವುದರಿಂದ ದೇಶದಲ್ಲಿ ಸಮಾನತೆ, ಶಾಂತಿ ನೆಲೆಸಿದೆ. ಹಣ ಇಲ್ಲದವರೂ ಕಾನೂನು ನೆರವು ಬೇಕಾದಲ್ಲಿ ಕಾನೂನು ಸೇವಾ ಪ್ರಾಧಿಕಾರವನ್ನು ಸಂಪರ್ಕಿಸಿದರೆ, ನಿಮಗೆ ಉಚಿತವಾಗಿ ಕಾನೂನಿನ ನೆರವು ಸಿಗುತ್ತದೆ.
ಇದೇ ದಿನಾಂಕ 9ರ ಶನಿವಾರ ಲೋಕ ಅದಾಲತ್ ಇದ್ದು, ರಾಜೀ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಲಿದ್ದೇವೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಿ ಎಂದು ನ್ಯಾಯಾಧೀಶರಾದ ಮಹದೇವ ಕಾನಟ್ಟಿ ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ಪಿ.ರುದ್ರಗೌಡ ಮಾತನಾಡಿ, ಮಕ್ಕಳು ಮಾನಸಿಕ ವಿಚಲಿತರಾದಾಗ ಪೋಷಕರು ಅವರ ಭಾವನೆಗಳನ್ನು
ಅರ್ಥ ಮಾಡಿಕೊಂಡರೆ, ಮುಂದಿನ
ತೊಂದರೆಗಳನ್ನು ತಪ್ಪಿಸಬಹುದೆಂದು ಪೋಕ್ಸೋ ಕಾಯ್ದೆ ಬಗ್ಗೆ ತಿಳಿಸಿದರು.
ಹೊನ್ನಾಳಿ ಹಿರೇಕಲ್ಮಠ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಿ.ರಾಮಚಂದ್ರಪ್ಪ, ಗ್ರಾಮದ ಮುಖಂಡ ಕೆ.ಎಸ್.ನಂದ್ಯೆಪ್ಪ, ವಕೀಲ ಜಿ.ಟಿ.ಗೋವಿಂದರಾಜ್ ಮಾತನಾಡಿದರು.
ಗ್ರಾ.ಪಂ. ಮಾಜಿ ಅಧ್ಯಕ್ಷ ಬಿ.ಎಂ.ದೇವೇಂದ್ರಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಿ.ಆನಂದಪ್ಪ, ಕಾಲೇಜಿನ ಪ್ರಾಚಾರ್ಯ ಪ್ರೊ. ಹೆಚ್.ವಿರೂಪಾಕ್ಷಪ್ಪ, ವಕೀಲರಾದ ಜಿ.ಎನ್.ಮಾಲತೇಶ್, ಟಿ.ದೇವರಾಜ್, ಜಿ.ಎಂ.ಅಮೃತ, ಜಿ.ಎಂ.ಬಸವನಗೌಡ, ಬಸವರಾಜ್ ಪಾಟೀಲ್, ಹರಿಹರ ಎಸ್ಜೆವಿಪಿ ಕಾಲೇಜಿನ ಉಪನ್ಯಾಸಕ ಕೆ.ಎನ್.ಮಂಜುನಾಥ್, ದಾವಣಗೆರೆಯ ಆದರ್ಶ ಶಾಲೆಯ ಶಿಕ್ಷಕ ಎ.ಕೆ.ರಮೇಶ್, ಕೆ.ಎನ್.ಹಳ್ಳಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ದೊಡ್ಮನಿ ನಾಗರಾಜ್, ಗ್ರಾ.ಪಂ. ಮಾಜಿ ಅಧ್ಯಕ್ಷ ಎಂ.ವಿ.ನಾಗರಾಜ್, ಗ್ರಾಮದ ನಾಗಸನಹಳ್ಳಿ ಮಹೇಶ್ವರಪ್ಪ, ಬಿ.ಸೋಮಶೇಖರಾಚಾರಿ, ಬೆಣ್ಣೇರ ನಂದ್ಯೆಪ್ಪ, ಎಂ.ಪಿ.ಜಯ್ಯಣ್ಣ, ಎಸ್ಡಿಎಂಸಿ ಅಧ್ಯಕ್ಷ ಬಿ.ಪ್ರಭಾಕರ್, ಬಾಲಕೇಂದ್ರದ ಅಧ್ಯಕ್ಷ ಜಿ.ಆರ್.ಚಂದ್ರಪ್ಪ, ವಿಜಯಭಾಸ್ಕರ್, ಡಿ.ಪಿ.ಚಿದಾನಂದ್, ತೆಲಗಿ ನಾಗರಾಜ್, ಶಿಬಿರದ ಕಾರ್ಯಕ್ರಮಾಧಿಕಾರಿಗಳಾದ ಡಾ. ಬಿ.ಕೆ.ಮಂಜುನಾಥ್, ಡಾ.ಸಿ.ಚಂದ್ರಶೇಖರ್, `ಜನತಾವಾಣಿ’ ಹಿರಿಯ ವರದಿಗಾರ ಜಿಗಳಿ ಪ್ರಕಾಶ್ ಮತ್ತು ಇತರರು ಭಾಗವಹಿಸಿದ್ದರು.