ದಾವಣಗೆರೆ ಬಾಸ್ಕೆಟ್ ಬಾಲ್ ಕ್ಲಬ್‌ಗೆ ಚಾಂಪಿಯನ್‌ಶಿಪ್

ದಾವಣಗೆರೆ ಬಾಸ್ಕೆಟ್ ಬಾಲ್ ಕ್ಲಬ್‌ಗೆ ಚಾಂಪಿಯನ್‌ಶಿಪ್

ದಾವಣಗೆರೆ, ಡಿ.6- ಕರ್ನಾಟಕ ರಾಜ್ಯ ಬಾಸ್ಕೆಟ್ ಬಾಲ್ ಅಸೋಸಿಯೇಷನ್‌ ಹಾಗೂ ಬಳ್ಳಾರಿ ಜಿಲ್ಲಾ ಬಾಸ್ಕೆಟ್ ಬಾಲ್ ಅಸೋಸಿಯೇಷನ್ ಹಾಗೂ ವೈ.ಸಿ.ಬಿ.ಸಿ. ಕ್ಲಬ್ ಇವರ ಜಂಟಿ ಆಶ್ರಯದಲ್ಲಿ ಬಳ್ಳಾರಿಯಲ್ಲಿ ಇತ್ತೀಚಿಗೆ ನಡೆದ ಕರ್ನಾಟಕ ಬಾಸ್ಕೆಟ್ ಬಾಲ್ ಲೀಗ್ ವಿಭಾಗ ಮಟ್ಟದ ಪಂದ್ಯಾವಳಿಗಳಲ್ಲಿ ದಾವಣಗೆರೆ ಬಾಸ್ಕೆಟ್ ಬಾಲ್ ಕ್ಲಬ್ ಎಲ್ಲಾ ಪಂದ್ಯಗಳಲ್ಲೂ ಜಯ ಸಾಧಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಮೊದಲ ಪಂದ್ಯ ವಿಜಯನಗರ ಎದುರು 61-42 ಅಂಕಗಳು, ಎರಡನೇ ಪಂದ್ಯ ಚಿತ್ರದುರ್ಗ ದುರ್ಗಸ್ ಕ್ಲಬ್ ಎದುರು 61-47 ಅಂಕಗಳು ಮತ್ತು ಲೀಗ್‌ನ ಕೊನೆಯ ಪಂದ್ಯ ಬಳ್ಳಾರಿ ತಂಡ ಎದುರು 67-51 ಅಂಕಗಳ ಪಡೆದಿದೆ. 

ಅಲ್ಲದೇ ಜನವರಿಯಲ್ಲಿ ನಡೆಯುವ ಕರ್ನಾಟಕ ರಾಜ್ಯ ಬಾಸ್ಕೆಟ್ ಬಾಲ್ ಲೀಗ್ ಚಾಂಪಿಯನ್ ಶಿಪ್‌ಗೆ ಅರ್ಹತೆ ಪಡೆದಿದೆ ಎಂದು ಕ್ಲಬ್‌ನ ಕಾರ್ಯದರ್ಶಿ ಆರ್. ವೀರೇಶ್ ತಿಳಿಸಿದ್ದಾರೆ.

ಕ್ಲಬ್‌ ಗೌರವಾಧ್ಯಕ್ಷ ಸಿ.ಶ್ರೀರಾಮ್ ಮೂರ್ತಿ, ಅಧ್ಯಕ್ಷ ಆರ್. ಕಿರಣ್ ಕುಮಾರ್, ಉಪಾಧ್ಯಕ್ಷ ಹಾಗೂ 38ನೇ ವಾರ್ಡ್‌ನ ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್, ಕಾರ್ಯದರ್ಶಿ ಆರ್.ವೀರೇಶ್, ಖಜಾಂಚಿ ಪ್ರಸನ್ನ ಅವರುಗಳು ಎಲ್ಲಾ ಆಟಗಾರರನ್ನು ಅಭಿನಂದಿಸಿದ್ದಾರೆ.

error: Content is protected !!