ಹರಿಹರ : ಕಾಮಗಾರಿ ಪೂರ್ಣ ಆಗುವವರೆಗೂ ಧರಣಿ ಸತ್ಯಾಗ್ರಹ

ಹರಿಹರ : ಕಾಮಗಾರಿ ಪೂರ್ಣ ಆಗುವವರೆಗೂ ಧರಣಿ ಸತ್ಯಾಗ್ರಹ

ಹರಿಹರ, ಡಿ,5- ನಗರದ ಜಯ ಕರ್ನಾಟಕ ಸಂಘಟನೆ ತಾಲ್ಲೂಕು  ಘಟಕದ ವತಿಯಿಂದ ಮಂಗಳವಾರ 9ನೇ ದಿನದ ಧರಣಿ ಸತ್ಯಾಗ್ರಹ ಲೋಕೋಪಯೋಗಿ ಇಲಾಖೆಯ  ಹೆದ್ದಾರಿಯ ಮುಂಭಾಗ ನಡೆಸಲಾಯಿತು. ಈ ವೇಳೆ ಸ್ಥಳಕ್ಕೆ ಆಗಮಿಸಿದ ತಾಲ್ಲೂಕು ದಂಡಾಧಿಕಾರಿ ಬಸವರಾಜಯ್ಯ ಮತ್ತು ಪಿಎಸ್ಐ ದೇವಾನಂದ್ ಮಾತನಾಡಿ, ಸರ್ವೆ ಕಾರ್ಯ ಪೂರ್ಣಗೊಳಿಸಿ ಕಾಮಗಾರಿ ಆರಂಭ ಮಾಡುವುದಾಗಿ ಭರವಸೆ ನೀಡಿದರು.

ಜಯಕರ್ನಾಟಕ ಸಂಘಟನೆಯ ಮುಖಂಡ ಗೋವಿಂದ ಮಾತನಾಡಿ, ನಗರದ ಕೆ.ಇ.ಬಿ. ಮುಂಭಾಗದ ಬೀರೂರು – ಸಮ್ಮಸಗಿ ರಾಜ್ಯ ಹೆದ್ದಾರಿ ತುಂಗಭದ್ರಾ ಹೊಸ ಸೇತುವೆ ಸಮೀಪದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಸಾರ್ವಜನಿಕರು, ವಾಹನ ಸವಾರರರಿಗೆ ತುಂಬಾ ತೊಂದರೆಯಾಗಿದೆ. 

ಅನೇಕ ವರ್ಷಗಳಿಂದ ತೊಂದರೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಜಯ ಕರ್ನಾಟಕ ಸಂಘಟನೆ ವತಿಯಿಂದ ಕಾಮಗಾರಿ ಆಗುವವರೆಗೂ ಧರಣಿ ಸತ್ಯಾಗ್ರಹ ಮುಂದುವರೆಸುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಗೋವಿಂದ್, ಉಪಾಧ್ಯಕ್ಷ ಎಂ. ಆರ್. ಆನಂದ್, ಪ್ರಧಾನ ಕಾರ್ಯದರ್ಶಿ  ಸಿ.ಎಚ್.  ಸುನಿಲ್ ಕುಮಾರ್,  ಭರತ್ ಭಾನುವಳ್ಳಿ, ಅಪ್ಪು ಪ್ರದೀಪ್, ಗಿರೀಶ್ ಸ್ವಾಮಿ, ಅಭಿ, ನಾಗ, ಆಟೋ ಸಂತೋಷ್, ಬಚ್ಚನ್, ಚಂದ್ರಪ್ಪ, ಪ್ರದೀಪ್, ಮೊಹಮ್ಮದ್ ಅಲಿ  ಉಪಸ್ಥಿತರಿದ್ದರು.

error: Content is protected !!