ಗಾಯಾಳುಗಳಿಗೆ ಶಾಸಕ ಬಸವಂತಪ್ಪ ನೆರವು

ಗಾಯಾಳುಗಳಿಗೆ ಶಾಸಕ ಬಸವಂತಪ್ಪ ನೆರವು

ದಾವಣಗೆರೆ, ಡಿ.4- ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಮುಂಭಾಗದ ಶಿರಮ ಗೊಂಡನಹಳ್ಳಿ ಬ್ರಿಡ್ಜ್ ಬಳಿ ಸೋಮವಾರ ಸಂಜೆ ರಸ್ತೆ ಅಪಘಾತ ಸಂಭವಿಸಿದ್ದು, ಗಾಯಗೊಂಡವರನ್ನು ಶಾಸಕ ಕೆ.ಎಸ್.ಬಸವಂತಪ್ಪ ಅವರು ಉಚಿತ ಆಂಬ್ಯುಲೆನ್ಸ್ ಮಾಡಿಸಿ, ಆಸ್ಪತ್ರೆಗೆ ಸಾಗಿಸಲು ನೆರವಾಗಿ ಮಾನವೀಯತೆ ಮೆರೆದಿದ್ದಾರೆ.  ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಬೆಳಗಾವಿ ಅಧಿವೇಶನಕ್ಕೆ ತೆರಳುತ್ತಿದ್ದ  ಬಸವಂತಪ್ಪ ಅವರು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. 

ಬಳಿಕ ಮೃತಪಟ್ಟ ಮಹಿಳೆಯ ಕೊರಳಲ್ಲಿದ್ದ ಚಿನ್ನಾಭರಣಗಳನ್ನು ತೆಗೆದು ಅವರ ಸಂಬಂಧಿಕರಿಗೆ ಹಸ್ತಾಂತರ ಮಾಡಿಸಿದ್ದಾರೆ. ನಂತರ ಚಿಗಟೇರಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳ ಆರೋಗ್ಯ ವಿಚಾರಿಸಿ, ವೈದ್ಯರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ. ಬಳಿಕ ಅಧಿವೇಶನಕ್ಕೆ ತೆರಳಿದ್ದಾರೆ.

error: Content is protected !!