ಮಲೇಬೆನ್ನೂರು, ಡಿ. 3 – ಪಟ್ಟಣದ ಒಡೆಯರ ಬಸವಾಪುರ ಗ್ರಾ.ಪಂ. ವ್ಯಾಪ್ತಿಯ ಪಟೇಲ್ ಬಸಪ್ಪ ಎಜುಕೇಶನ್ ಅಸೋಸಿಯೇಶನ್ನ ರಾಜ ರಾಜೇಶ್ವರಿ ವಿದ್ಯಾ ಸಂಸ್ಥೆಯ ವತಿಯಿಂದ ಮಕ್ಕಳ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳ ಪ್ರತಿಭಾ ಶಕ್ತಿ, ಕ್ರಿಯಾತ್ಮಕ ಶಕ್ತಿ , ಕಲ್ಪನಾ ಶಕ್ತಿಯ ಬೆಳವಣಿಗೆಗೆ ಪೂರಕವಾದ ಚಟುವಟಿಕೆ ಹಮ್ಮಿಕೊಳ್ಳಲಾಗಿತ್ತು.
ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ವಿವಿಧ ವೇಷಭೂಷಣ ತೊಟ್ಟು ಭಾಗವಹಿಸಿದ್ದರು. ಮಾಧ್ಯಮಿಕ ವಿದ್ಯಾರ್ಥಿಗಳು ವಿವಿಧ ಹೂವು, ಎಲೆ, ಹಣ್ಣುಗಳ ರೀತಿ ತಮ್ಮನ್ನು ಅಲಂಕರಿಸಿಕೊಂಡು ಪ್ರದರ್ಶಿಸಿದರೆ, ಪ್ರೌಢಶಾಲಾ ವಿದ್ಯಾರ್ಥಿಗಳು ವಿವಿಧ ರೀತಿಯ ಪೇಪರ್ ಕ್ರಾಫ್ಟ್ ಹಾಗೂ ಹೂವಿನ ಹಾರ ತಯಾರಿಸಿ ತಮ್ಮ ಪ್ರತಿಭಾ ನೈಪುಣ್ಯತೆ ಪ್ರದರ್ಶಿಸಿದರು. ಸಂಸ್ಥೆಯ ಕಾರ್ಯದರ್ಶಿ ಜಿ.ಬಿ. ಶಿವಾನಂದಪ್ಪ, ಪ್ರಾಂಶುಪಾಲ ಶ್ರೀಮತಿ ಸುಜಾತ ಶಿವಾನಂದಪ್ಪ, ಮುಖ್ಯೋಪಾಧ್ಯಾಯರಾದ ಶಶಿಧರ್ ಎಸ್. ಮತ್ತು ಇತರರು ಹಾಜರಿದ್ದರು.