ಮಲೇಬೆನ್ನೂರು, ಡಿ.3- ಇಲ್ಲಿನ ಪುರಸಭೆ, ನಾಡಕಚೇರಿ, ಬೀರಲಿಂಗೇಶ್ವರ ದೇವಸ್ಥಾನ, ಲಯನ್ಸ್ ಶಾಲೆ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಎಸ್ಬಿಕೆಎಂ ಶಾಲೆ, ಬೀರಲಿಂಗೇಶ್ವರ ವಿದ್ಯಾಸಂಸ್ಥೆ ಸೇರಿದಂತೆ ವಿವಿಧೆಡೆ ದಾಸಶ್ರೇಷ್ಠ ಶ್ರೀ ಭಕ್ತ ಕನಕದಾಸರ ಜಯಂತಿಯನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು.
ಪುರಸಭೆ ಹಾಗೂ ನಾಡಕಚೇರಿಯಲ್ಲಿ ಜರುಗಿದ ಜಯಂತಿ ಕಾರ್ಯಕ್ರಮದಲ್ಲಿ ಉಪತಹಶೀಲ್ದಾರ್ ಆರ್.ರವಿ, ಕಂದಾಯ ನಿರೀಕ್ಷಕ ಆನಂದ್, ಪುರಸಭೆ ಸದಸ್ಯರಾದ ನಯಾಜ್, ಸಾಬೀರ್, ಭೋವಿ ಶಿವು, ಷಾ ಅಬ್ರಾರ್, ಬಿ.ಸುರೇಶ್, ಬಿ.ಮಂಜುನಾಥ್, ಕೆ.ಪಿ.ಗಂಗಾಧರ್, ಭೋವಿಕುಮಾರ್, ಪಿ.ಆರ್.ರಾಜು, ಯುಸೂಫ್, ಓ.ಜಿ.ಲೋಕೇಶ್, ತಾ. ಕುರುಬ ಸಮಾಜದ ಅಧ್ಯಕ್ಷ ಪೂಜಾರ್ ಹಾಲೇಶಪ್ಪ, ಜನತಾ ಬಜಾರ್ ನಿರ್ದೇಶಕ ಪಿ.ಹೆಚ್.ಶಿವಕುಮಾರ್, ಶಿಕ್ಷಕ ಹಾಲೇಶ್, ಭೋವಿ ಮಂಜಣ್ಣ, ಪೂಜಾರ್ ಮಹೇಶ್, ಜಿಗಳಿ ಹನುಮಗೌಡ, ಎ.ಕೆ.ನಾಗರಾಜ್, ಗ್ರಾಮ ಲೆಕ್ಕಾಧಿಕಾರಿಗಳಾದ ಅಣ್ಣಪ್ಪ, ಶ್ರೀಧರ್, ಬೋರಯ್ಯ, ಆನಂದತೀರ್ಥ, ಷರೀಫ್ ಸೇರಿದಂತೆ ಇತರರು ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ಬಿ.ಸುರೇಶ್ ಅವರು, ಜಯಂತಿಗೆ ಪುರಸಭೆ, ಅಧಿಕಾರಿಗಳು ಗೈರು ಹಾಜರಾಗಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ
ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಸಿರಿಗೆರೆ ರಾಜಣ್ಣ, ಸಂಘದ ನಿರ್ದೇಶಕರಾದ
ಜಿ.ಮಂಜುನಾಥ್ ಪಟೇಲ್, ಕೆ.ಪಿ.ಗಂಗಾಧರ್, ಯುಸೂಫ್, ಸಿ.ಅಬ್ದುಲ್ ಹಾದಿ, ಶ್ರೀಮತಿ ಚಂದ್ರಮ್ಮ, ಸೈಫುಲ್ಲಾ ಸಾಬ್, ಕೆ.ಜಿ.
ಪರಮೇಶ್ವರಪ್ಪ, ಸಂಘದ ಸಿಇಓ ಸಿದ್ದಪ್ಪ, ಪ್ರಕಾಶ್, ಬಸವರಾಜ್, ಜಾಫರ್ ಭಾಗವಹಿಸಿದ್ದರು.
ಲಯನ್ಸ್ ಕ್ಲಬ್ ಹಾಗೂ ಲಯನ್ಸ್ ಶಾಲೆ ವತಿಯಿಂದ ಆಚರಿಸಿದ ಕನಕದಾಸರ ಜಯಂತಿಯಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಚಿಟ್ಟಕ್ಕಿ ನಾಗರಾಜ್, ಕಾರ್ಯದರ್ಶಿ ಸಿರಿಗೆರೆ ಸಿದ್ದಪ್ಪ, ಲಯನ್ಸ್ ಗೌವರ್ನರ್ ಡಾ.ಟಿ.ಬಸವರಾಜ್, ಮಾಜಿ ಅಧ್ಯಕ್ಷ ಓ.ಜಿ.ರುದ್ರಗೌಡ್ರು, ಉಡೇದರ್ ಸಿದ್ದೇಶ್, ಶಾಲಾ ಮುಖ್ಯಶಿಕ್ಷಕ ಚಂದ್ರಶೇಖರ್ ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.
ಶ್ರೀಮತಿ ಬಸಮ್ಮ ಕೆಂಚಪ್ಪ ಮಡಿವಾಳರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕನಕದಾಸರ ಜಯಂತಿ ಆಚರಣೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಹೆಚ್.ಜಿ.ಚಂದ್ರಶೇಖರ್, ಸದಸ್ಯರಾದ ಎಂ.ಆರ್.ಮಾರಪ್ಪ, ಎಂ.ಕೆ.ಸಂತೋಷ್, ಶಾಲಾ ಮುಖ್ಯ ಶಿಕ್ಷಕ ದಂಡಿ ತಿಪ್ಪೇಸ್ವಾಮಿ, ಶಿಕ್ಷಕರಾದ ರೇವಣಸಿದ್ದಪ್ಪ, ಬಸವರಾಜಪ್ಪ, ಹನುಮಂತಪ್ಪ, ಪ್ರೇಮ ಲೀಲಾ ಬಾಯಿ ಮತ್ತಿತರರು ಭಾಗವಹಿಸಿದ್ದರು.