ಸೋಮೇಶ್ವರ ವಿದ್ಯಾಸಂಸ್ಥೆಯಲ್ಲಿ ಎಸ್ಎಆರ್‌ ಜನ್ಮದಿನೋತ್ಸವ

ಸೋಮೇಶ್ವರ ವಿದ್ಯಾಸಂಸ್ಥೆಯಲ್ಲಿ ಎಸ್ಎಆರ್‌ ಜನ್ಮದಿನೋತ್ಸವ

ದಾವಣಗೆರೆ, ಡಿ. 3-  ಇಲ್ಲಿನ ಸೋಮೇಶ್ವರ ಶಾಲಾ ಆವರಣದಲ್ಲಿ ಸೋಮೇಶ್ವರ ಸಮೂಹ ಸಂಸ್ಥೆ, ರವೀಂದ್ರನಾಥ್ ಅಭಿಮಾನಿ ಬಳಗದಿಂದ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಜನ್ಮದಿನೋತ್ಸವ, ಪ್ರತಿಭಾ ಪುರಸ್ಕಾರ ಮತ್ತು ವೀರ ಭಾರತಿ ನೃತ್ಯ ರೂಪಕ ಪ್ರದರ್ಶನ ಸಮಾರಂಭವನ್ನು ನಡೆಸಲಾಯಿತು.

ಸಂಸದ ಜಿ.ಎಂ. ಸಿದ್ದೇಶ್ವರ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಾ, ಐದು ಬಾರಿ ಶಾಸಕರಾಗಿ, ಏಳು ವರ್ಷ ಸಚಿವರಾಗಿ ಕಾರ್ಯ ನಿರ್ವಹಿಸಿ, ಜಿಲ್ಲೆಯಲ್ಲಿ ಜನರ ಕೆಲಸ ಮಾಡುತ್ತಾ, ಪಕ್ಷ ಕಟ್ಟಿದ ಮುತ್ಸದ್ಧಿ ಎಸ್.ಎ. ರವೀಂದ್ರನಾಥ್ ಎಂದು ಬಣ್ಣಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಗುರುತಿಸಿಕೊಂಡಿರುವ ಸೋಮೇಶ್ವರ ಸಂಸ್ಥೆಯು ದೇಶಭಕ್ತಿ ಬಿಂಬಿಸುವ  ವೀರಭಾರತಿ ನೃತ್ಯ ರೂಪಕ ಪ್ರದರ್ಶನ ಆಯೋಜಿಸಿರುವುದು ಶ್ಲ್ಯಾಘನೀಯ ಎಂದರು.

ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಮಾತನಾಡುತ್ತಾ, ನಾನೇನು ರಾಜಕಾರಣದಲ್ಲಿ ದೊಡ್ಡ ಕೆಲಸ ಮಾಡಿದವನಲ್ಲ. ಇಲ್ಲಿ ನಮ್ಮ ಪಕ್ಷ ಬೆಳೆಯಬೇಕು. ಅದಕ್ಕಾಗಿ ನಾನು ಕೆಲಸ ಮಾಡುತ್ತೇನೆ. ನಿಮ್ಮ ಕೆಲಸ ನೀವು ಮಾಡಿ ಎಂದು ಮಾರ್ಮಿಕವಾಗಿ ಹೇಳಿದರು.

ಮಾಜಿ ಮುಖ್ಯ ಸಚೇತಕ ಡಾ. ಎ.ಹೆಚ್. ಶಿವಯೋಗಿಸ್ವಾಮಿ ಪ್ರತಿಭಾ ಪುರಸ್ಕಾರ ನೀಡಿದರು. ಹುಬ್ಬಳ್ಳಿಯ ಕಲಾಸುಜತ್ರಯ ಸಂಸ್ಥೆ ಕಲಾವಿದರು ವೀರಭಾರತಿ ನೃತ್ಯರೂಪಕ ಪ್ರದರ್ಶಿಸಿದರು. ವೈದ್ಯ ಡಾ. ಮಲ್ಲಿಕಾರ್ಜುನ ಬಾಳೆಕಾಯಿ ಉಪನ್ಯಾಸ ನೀಡಿದರು. 

ಮಾಜಿ ಶಾಸಕರಾದ ಟಿ. ಗುರುಸಿದ್ಧನಗೌಡ, ಪ್ರೊ. ಎನ್. ಲಿಂಗಣ್ಣ, ಸಂಸ್ಥೆಯ ಅಧ್ಯಕ್ಷ ಹೆಚ್.ಆರ್. ಅಶೋಕ ರೆಡ್ಡಿ, ಕಾರ್ಯದರ್ಶಿ ಕೆ.ಎಂ. ಸುರೇಶ್, ಪಾಲಿಕೆ ಸದಸ್ಯ ಕೆ.ಎಂ. ವೀರೇಶ್, ಶ್ರೀನಿವಾಸ್ ದಾಸಕರಿಯಪ್ಪ, ರಾಜನಹಳ್ಳಿ ಶಿವಕುಮಾರ್, ರಾಜಶೇಖರ್, ಕೆ.ಬಿ. ಕೊಟ್ರೇಶ್ ಇತರರು ಈ ಸಂದರ್ಭದಲ್ಲಿದ್ದರು.

error: Content is protected !!