ಲಯನ್ಸ್‌ ಜಿಲ್ಲೆಯಲ್ಲಿ `ಬೆಳಕು’ ಸೇವಾ ಕಾರ್ಯಕ್ರಮಗಳು ಜಾರಿಗೆ

ಲಯನ್ಸ್‌ ಜಿಲ್ಲೆಯಲ್ಲಿ `ಬೆಳಕು’ ಸೇವಾ ಕಾರ್ಯಕ್ರಮಗಳು ಜಾರಿಗೆ

ಮಲೇಬೆನ್ನೂರಿನಲ್ಲಿ ಲಯನ್ಸ್‌ ಗೌರರ್‌ ಡಾ. ಮೇರಿಕಾರ್ನ್‌ನೆಲಿಯೇ  

ಮಲೇಬೆನ್ನೂರು, ಡಿ.1- ಲಯನ್ಸ್‌ ಜಿಲ್ಲೆ 324-ಡಿ4 ರಲ್ಲಿ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಮತ್ತು ಉಡುಪಿ ಕಂದಾಯ ಜಿಲ್ಲೆಗಳಿದ್ದು, 118 ಕ್ಲಬ್‌ಗಳು ಮತ್ತು 3143 ಲಯನ್ಸ್ ಸದಸ್ಯರಿದ್ದಾರೆ ಎಂದು ಲಯನ್ಸ್‌ ಜಿಲ್ಲಾ ಗೌರರ್‌ ಡಾ. ಮೇರಿಕಾರ್ನ್‌ನೆಲಿಯೋ ತಿಳಿಸಿದರು.

ಗುರುವಾರ ಪಟ್ಟಣದ ಲಯನ್ಸ್‌ ಕ್ಲಬ್‌ಗೆ ತಮ್ಮ ಅಧಿಕೃತ ಭೇಟಿ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಜಗತ್ತಿನ 210 ಕ್ಕೂ ಹೆಚ್ಚು ದೇಶಗಳಲ್ಲಿ 47 ಸಾವಿರ ಕ್ಲಬ್‌ಗಳನ್ನು ಮತ್ತು 14 ಲಕ್ಷ ಸದಸ್ಯರನ್ನು ಹೊಂದಿರುವ ಲಯನ್ಸ್‌ ಅಂತರರಾಷ್ಟ್ರೀಯ ಸಂಸ್ಥೆಯು ವಿಶ್ವಸಂಸ್ಥೆ ಯಿಂದ ಮಾನ್ಯತೆ ಪಡೆದಿರುವ ಏಕೈಕ ಸೇವಾ ಸಂಸ್ಥೆಯಾಗಿದೆ. 

ಭಾರತದಲ್ಲೇ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಲಯನ್ಸ್‌ ಸಂಸ್ಥೆಯು ಅಂಧತ್ವ ನಿವಾರಣೆ, ಪರಿಸರ ಸಂರಕ್ಷಣೆ, ಶಿಕ್ಷಣ, ರಕ್ತದಾನ ಶಿಬಿರ, ಗ್ರಾಮೀಣಾಭಿವೃದ್ಧಿಗೆ ಒತ್ತು ನೀಡಿ ಕೆಲಸ ಮಾಡುತ್ತಾ ಬಂದಿದೆ. 

ನಾವು ಈ ವರ್ಷ ಲಯನ್ಸ್‌ ಜಿಲ್ಲೆ 324-ಡಿ4ರಲ್ಲಿ `ಬೆಳಕು’ ಎಂಬ ಹೆಸರಿನಡಿ ವಿವಿಧ ಸೇವಾ ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ. ಅಂಧತ್ವ, ರಕ್ತದಾನ ಶಿಬಿರ, ಪರಿಸರ ಕಾಳಜಿ, ಶಿಕ್ಷಣದ ಜೊತೆಗೆ ಹದಿಹರೆಯದ ಮಕ್ಕಳಿಗೆ ಕಾನೂನಿನ ಅರಿವು ಮೂಡಿಸುವುದು ಮತ್ತು ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ಸಹಕಾರ, ಕನ್ನಡದ ಏಳಿಗೆಗೆ ವಿಶೇಷ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದೇವೆ. 

ಜೊತೆಗೆ ವಿವಿಧತೆಯಲ್ಲಿ ಏಕತೆ ಹಾಗೂ ದುರ್ಬಲರ ಏಳಿಗೆಗಾಗಿ ವಿಶೇಷ ಆದ್ಯತೆ ನೀಡಿ ಕೆಲಸ ಮಾಡುತ್ತಿದ್ದೇವೆ. 

ಈ ನಿಟ್ಟಿನಲ್ಲಿ ಮಲೇಬೆನ್ನೂರು ಲಯನ್ಸ್‌ ಕ್ಲಬ್‌ ಕಳೆದ 44 ವರ್ಷಗಳಿಂದ ನಿರಂತರ ಸೇವೆ ಮೂಲಕ ಲಯನ್ಸ್‌ ಜಿಲ್ಲೆಯಲ್ಲಿ ಅತ್ಯುತ್ತಮ ಕ್ಲಬ್‌ ಆಗಿ ಕೆಲಸ ಮಾಡುತ್ತಿದ್ದು, ಈ ಕ್ಲಬ್‌ನ ಡಾ. ಟಿ. ಬಸವರಾಜ್‌ ಅವರು ಲಯನ್ಸ್‌ ಜಿಲ್ಲಾ ಗೌರ್ನರ್‌ ಆಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ, ಓ.ಜಿ. ರುದ್ರಗೌಡ್ರು ಲಯನ್ಸ್‌ ಜಿಲ್ಲೆಯ ಸಂಪುಟ ಕಾರ್ಯದರ್ಶಿ ಹಾಗೂ ಖಜಾಂಚಿ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ದಾವಣಗೆರೆ ಮತ್ತು ಉಡುಪಿ ಜಿಲ್ಲೆಗಳಲ್ಲಿ ರಕ್ತನಿಧಿ ಕೇಂದ್ರಗಳನ್ನು ಸ್ಥಾಪಿಸಿ, ಕಳೆದ 4 ತಿಂಗಳಲ್ಲಿ 6600 ಯೂನಿಟ್‌ ರಕ್ತದಾನ ಮಾಡಿದ್ದೇವೆ. 

ಚಳ್ಳಕೆರೆಯ ಸರ್ಕಾರಿ ಆಸ್ಪತ್ರೆಗೆ 12 ಲಕ್ಷ ರೂ. ವೆಚ್ಚದ ಡಯಾಲಿಸಿಸ್‌ ಘಟಕ ನೀಡಿದ್ದೇವೆ ಎಂದು ಡಾ. ಮೇರಿಕರ್ನ್‌ನೆಲಿಯೋ ತಿಳಿಸಿದರು.

 ಇದೇ ವೇಳೆ ಬಸಾಪುರದ ಗುರಯ್ಯ ಅವರು ಲಯನ್ಸ್‌ ಶಾಲೆೆ 12 ಡೆಸ್ಕ್‌ಗಳನ್ನು ಕೊಡುಗೆಯಾಗಿ ನೀಡಿದರು.

ಲಯನ್ಸ್‌ ಮಾಜಿ ಗೌರರ್‌ ಡಾ. ಟಿ. ಬಸವರಾಜ್‌, ಲಯನ್ಸ್‌ ಕ್ಲಬ್‌ ಅಧ್ಯಕ್ಷ ಚಿಟ್ಟಕ್ಕಿ ನಾಗರಾಜ್‌, ಕಾರ್ಯದರ್ಶಿ ಸಿರಿಗೆರೆ ಸಿದ್ದಪ್ಪ, ಖಜಾಂಚಿ ಭರಳ್ಳಿ ಮಂಜುನಾಥ್‌, ಲಯನ್ಸ್‌ ಸಂಪುಟ ಕಾರ್ಯದರ್ಶಿ ರವಿರಾಜ್‌ ನಾಯಕ್‌, ಮಾಜಿ ಅಧ್ಯಕ್ಷರಾದ ಓ.ಜಿ. ರುದ್ರಗೌಡ್ರು, ಎನ್‌.ಜಿ. ಶಿವಾಜಿ ಪಾಟೀಲ್‌, ಎನ್‌. ಶಿವನಗೌಡ್ರು, ಎನ್‌.ಜಿ. ಬಸವನಗೌಡ್ರು, ಶ್ರೀಮತಿ ರೂಪಾ ಪಾಟೀಲ್‌, ಉಡೇದರ್‌ ಸಿದ್ದೇಶ್‌, ಲಯನ್ಸ್‌ ಶಾಲಾ ಮುಖ್ಯಶಿಕ್ಷಕ ಚಂದ್ರಶೇಖರ್‌, ಸುದ್ಧಿಗೋಷ್ಠಿಯಲ್ಲಿದ್ದರು.

error: Content is protected !!