ಮಲೇಬೆನ್ನೂರು, ನ. 29- ಬೆಳ್ಳೂಡಿ ಗ್ರಾಮದ ಶ್ರೀ ಉಡಸಲಾಂಬಿಕೆ ದೇವಿಯ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರು ಬಿಡುಗಡೆ ಮಾಡಿದ 2 ಲಕ್ಷ ರೂ.ಗಳ ಡಿಡಿಯನ್ನು ಸಂಸ್ಥೆಯ ಹರಿಹರ ಯೋಜನಾಧಿ ಕಾರಿ ಗಣಪತಿ ಮಾಳಂಜಿಯವರು ದೇವಸ್ಥಾನದ ಕಮಿಟಿಯವರಿಗೆ ನೀಡಿದರು.
ದೇವಸ್ಥಾನ ಕಮಿಟಿ ಅಧ್ಯಕ್ಷ ಬಿ.ಎಂ.ಮರಳಸಿದ್ದಯ್ಯ, ಜಿ.ಹನುಮಂತ ಗೌಡ್ರು, ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಉಮೇಶ್ ಅವರು ವೀರೇಂದ್ರ ಹೆಗ್ಗಡೆಯವರಿಗೆ ಕೃತಜ್ಞತೆ ಸಲ್ಲಿಸಿದರು.
ದೇವಸ್ಥಾನದ ಕಾರ್ಯದರ್ಶಿ ಜಿ.ಎಸ್ ಸುದೀಪ್ ಗೌಡ್ರು, ಬಾತಿ ಮಹೇಶ್ವರಪ್ಪ, ವೀರೇಶ್ ಪೂಜಾರ್, ಗ್ರಾ.ಪಂ ಪಿಡಿಓ ಶಿವಪ್ಪ ಬಿರಾದಾರ್, ಯೋಜನೆಯ ವಲಯ ಮೇಲ್ವಿಚಾರಕರಾದ ಗಂಗಮ್ಮ ಹಾಗೂ ಇತರರು ಈ ವೇಳೆ ಹಾಜರಿದ್ದರು.