ಹರಿಹರ, ನ.28- ನಗರದ ಹಳೆ ಪಿ.ಬಿ. ರಸ್ತೆ ಕೆ.ಇ.ಬಿ. ಮುಂಭಾಗದ ಬೀರೂರು-ಸಮ್ಮಸಗಿ ರಾಜ್ಯ ಹೆದ್ದಾರಿ, ತುಂಗಭದ್ರಾ ಹೊಸ ಸೇತುವೆ ಸಮೀಪದ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟು ಹೋಗಿರುವು ದರಿಂದ ಸಾರ್ವಜನಿಕರಿಗೂ ವಾಹನ ಸವಾರರು ಪ್ರತಿನಿತ್ಯ ತೊಂದರೆಗಳನ್ನು ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಜಯಕರ್ನಾಟಕ ಸಂಘಟನೆ ಮುಖಂಡ ಗೋವಿಂದ ಊರಮ್ಮ ದೇವಿಯ ದರ್ಶನ ಪಡೆದು ದೇವಸ್ಥಾನದ ಮುಂಭಾಗದಿಂದ ದೀರ್ಘ ದಂಡ ನಮಸ್ಕಾರ (ಉರುಳು ಸೇವೆ) ಹಾಕುವ ಮೂಲಕ ಪ್ರತಿಭಟನೆ ನಡೆಸಿದರು.
ದೀರ್ಘದಂಡ ನಮಸ್ಕಾರವನ್ನು ದೇವಸ್ಥಾನದಿಂದ ಪ್ರಾರಂಭ ಮಾಡಿ ತಾಲ್ಲೂಕು ಕಚೇರಿ ಮುಂಭಾಗದ ಮಾರ್ಗವಾಗಿ ಸಂಚರಿಸಿ ಲೋಕೋಪಯೋಗಿ ಇಲಾಖೆ ಕಚೇರಿವರೆಗೆ ದೀರ್ಘ ನಮಸ್ಕಾರವನ್ನು ಮಾಡಲಾಯಿತು.
ಈ ವೇಳೆ ಮಾತನಾಡಿದ ಜಯಕರ್ನಾಟಕ ಸಂಘಟನೆ ಮುಖಂಡ ಗೋವಿಂದ ಲೋಕೋಪಯೋಗಿ ಇಲಾಖೆಯ ಎಇಇ ಶಿವಮೂರ್ತಿಯವರು ಸರ್ಕಾರದಿಂದ ಎರಡು ಕೋಟಿ ಹಣ ಬಿಡುಗಡೆ ಆದರೂ ಸಹ ಹಾಗೂ ಟೆಂಡರ್ ಪ್ರಕ್ರಿಯೆ ರಸ್ತೆ ಕಾಮಗಾರಿಯನ್ನು ಇದುವರೆಗೂ ಪ್ರಾರಂಭ ಮಾಡಿಲ್ಲ. ಕಾಮಗಾರಿ ವಿಳಂಬ ಮಾಡುತ್ತಿರುವ ಹಿನ್ನೆಲೆಯಲ್ಲಿ ಕಾಮಗಾರಿ ಆರಂಭದವರೆಗೆ ತಾಲ್ಲೂಕು ಕಚೇರಿಯ ಮುಂಭಾಗ ಧರಣಿ ಕೊಡಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘಟನೆಯ ಉಪಾಧ್ಯಕ್ಷ ಆನಂದ್ ಎಂ .ಆರ್, ಪ್ರಧಾನ ಕಾರ್ಯದರ್ಶಿ ಸುನಿಲ್ ಸಿ.ಎಚ್., ಶಬರೀಶ, ಸಂಘಟನಾ ಕಾರ್ಯದರ್ಶಿ ಮಧು ಎಂ, ವಿದ್ಯಾರ್ಥಿ ಘಟಕದ ಅಧ್ಯಕ್ಷ ಶ್ರೀನಿವಾಸ್, ಭರತ್, ಚಂದ್ರಪ್ಪ, ಕೋಳಿಬಳಿಕೆರೆ ಅಪ್ಪು, ಪ್ರದೀಪ್, ಮನು, ರಮೇಶ್, ಗಿರೀಶ್, ಹಾಲೇಶ್, ಹರೀಶ್, ಅರುಣ್, ಬೀರೇಶ್, ರಾಜು, ವಿಜಿ, ಸಮಿವುಲ್ಲಾ, ರಂಗನಾಥ, ಆಕಾಶ್, ಆದರ್ಶ, ಸಂದೀಪ್, ವಿಜಯ, ಚರಣ್, ಎಜಾಸಾ ಅಹ್ಮದ್ ಅಲಿ ಉಪಸ್ಥಿತರಿದ್ದರು.