ನವರಾಷ್ಟ್ರ ನಿರ್ಮಿಸಲು ನಾವೆಲ್ಲರೂ ಪಾತ್ರವಹಿಸಬೇಕು : ಸಾದ್ವಿ ದೇವಪ್ರಿಯಾ

ನವರಾಷ್ಟ್ರ ನಿರ್ಮಿಸಲು ನಾವೆಲ್ಲರೂ ಪಾತ್ರವಹಿಸಬೇಕು : ಸಾದ್ವಿ ದೇವಪ್ರಿಯಾ

ರಾಣೇಬೆನ್ನೂರು, ನ. 28 – ಪ್ರಾಚೀನ, ಸನಾತನ, ವೈಭವಯುತ ಭಾರತೀಯ ಸಂಸ್ಕೃತಿಯ ಮೂಲಕ ನವರಾಷ್ಟ್ರ ನಿರ್ಮಿಸಲು ನಾವೆಲ್ಲರೂ ಮಹತ್ತರ ಪಾತ್ರವಹಿಸಬೇಕು ಎಂದು ಹರಿದ್ವಾರದ ಪತಂಜಲಿ ಯೋಗ ಪೀಠದ ಮುಖ್ಯ ಕೇಂದ್ರೀಯ ಪ್ರಭಾರಿ ಸಾದ್ವಿ ದೇವಪ್ರಿಯಾ ಹೇಳಿದರು.

ಅವರು ಶ್ರೀ ಸಿದ್ದೇಶ್ವರ ಸಮುದಾಯ ಭವನದಲ್ಲಿ ಪತಂಜಲಿ ಮಹಿಳಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಯೋಗ ಭಾರತೀಯ ಸಂಸ್ಕೃತಿಯ ಪ್ರತೀಕ, ದೃಷ್ಟಯೋಗದಿಂದ ಎಲ್ಲರನ್ನು ಪ್ರೀತಿಯಿಂದ ಕಾಣಬೇಕು. ಸಹಜಯೋಗ, ಸೂಕ್ಷ್ಮಯೋಗ ಮಹಿಳೆಯರ ಜೀವನದ ದಿನಚರಿ ಆಗಬೇಕು. ಗುರು ಕೃಪೆಯಿಂದ ಶಾಂತಿ, ನೆಮ್ಮದಿ, ಸಮೃದ್ದಿಯ ಬದುಕು ಪಡೆಯಬೇಕು. ತಾಯಿಯ ಶಕ್ತಿಯನ್ನು ಭಗವತಿ ರೂಪವೆಂದು ಪರಿಗಣಿಸಲಾಗುತ್ತಿದ್ದು, ಮಾತೃ ಶಕ್ತಿಯಿಂದ ಸಂಸ್ಕೃತ ದೇಶ ಕಟ್ಟಲು ಸಾಧ್ಯ ಎಂದು ದೇವಪ್ರಿಯಾ ಹೇಳಿದರು.

ರಾಜ್ಯ ಪ್ರಭಾರಿ ಭವರಲಾಲ ಆರ್ಯ, ಆರತಿ ಕಾನಗೋ, ಅಂಜನಾದೇವಿ ಹಂಪಲಿ, ವಜ್ರೇಶ್ವರಿ ಲದ್ವಾ, ಜ್ಯೋತಿ ಜಂಬಗಿ, ಸೀಮಾಶ್ರೀ ಮತ್ತಿತರರಿದ್ದರು. ದಾವಣಗೆರೆ, ಶಿವಮೊಗ್ಗ, ಹಾವೇರಿ, ಗದಗ, ಬಾಗಲಕೋಟೆ, ಕೊಪ್ಪಳ, ರಾಯಚೂರು ಮುಂತಾದ ಜಿಲ್ಲೆಗಳಿಂದ ಸಾವಿರಾರು ಮಹಿಳೆಯರು ಸಮ್ಮೇಳನದಲ್ಲಿ ಭಾಗಿಯಾಗಿದ್ದರು.

error: Content is protected !!