ಹರಪನಹಳ್ಳಿ : ವಕೀಲರ ಸಂಘದ ಅಧ್ಯಕ್ಷ ಅಜ್ಜಣ್ಣ
ಹರಪನಹಳ್ಳಿ, ನ. 27- ಇಂದಿನ ವಿದ್ಯಾರ್ಥಿಗಳು ದೇಶದ ಭವಿಷ್ಯದ ಪ್ರಜೆಗಳು. ವಿದ್ಯಾರ್ಥಿಗಳು, ಶಿಕ್ಷಕರು ಹೇಳಿದ ವಿಷಯಗಳ ಬಗ್ಗೆ ಸಂಪೂರ್ಣ ಅಧ್ಯಯನ ಮಾಡಿದರೆ ಸಮಾಜದಲ್ಲಿ ಪ್ರತಿಭವಂತ, ಸೃಜನಶೀಲ ವ್ಯಕ್ತಿಯಾಗಿ ಬೆಳೆಯುವುದಕ್ಕೆ ಸಾಧ್ಯವಾಗುತ್ತದೆ ಎಂದು ವಕೀಲರ ಸಂಘದ ಅಧ್ಯಕ್ಷ ಎಂ.ಅಜ್ಜಣ್ಣ ಹೇಳಿದರು.
ತಾಲ್ಲೂಕಿನ ಗೊವೇರಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಶಿಕ್ಷಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಮಕ್ಕಳ ದಿನಾಚರಣೆ ಕುರಿತು ಕಾನೂನು ಅರಿವು ಕಾರ್ಯಕ್ರಮದಲ್ಲಿ ಸಸಿಗೆ ನೀರು ಏರೆಯುವ ಮೂಲಕ ಉದ್ಘಾಟಸಿ ಬಳಿಕ ಮಾತನಾಡಿದರು.
ವಿದ್ಯಾರ್ಥಿಗಳು ಇತ್ತಿನ ದಿನಮಾನಗಳಲ್ಲಿ ಟಿ.ವಿ. ಮೊಬೈಲ್ ಪೋನ್ಗಳಿಂದ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ದೃಶ್ಯ ಮಾಧ್ಯಮದಿಂದ ದೂರವಿದ್ದು, ಸಮಾಜದಲ್ಲಿ ಉತ್ತಮ ವಿದ್ಯಾರ್ಥಿಯಾಗಿ ಬೆಳೆದಾಗ ಮಾತ್ರ ದೇಶದ ಉತ್ತಮ ನಾಗರಿಕರಾಗಿ ಬಾಳುವುದಕ್ಕೆ ಸಾಧ್ಯವಾಗುತ್ತದೆ ಎಂದರು.
ಶಿಕ್ಷಣ ಕ್ಷೇತ್ರದ ಸಂಯೋಜಕ ಗಿರಿಜ್ಜಿ ಮಂಜುನಾಥ್ ಮಾತನಾಡಿ, ವಿದ್ಯಾರ್ಥಿಗಳು ಈಗಿನಿಂದಲೇ ವೃತ್ತಿ ಜೀವನದ ಗುರಿಯನ್ನು ಇಟ್ಟುಕೊಂಡು ಕನಸು ಕಾಣಬೇಕಾಗಿದೆ. ಸಮಾಜ ದಲ್ಲಿರುವ ನಿಯಮಗಳನ್ನು ಮತ್ತು ದೇಶದ ಶಿಷ್ಟಾಚಾರಗಳನ್ನು ವಿದ್ಯಾರ್ಥಿಗಳು ಚಾಚು ತಪ್ಪದೇ ಪಾಲಿಸಿದಾಗ ಮಾತ್ರ ಕಾನೂನು ಪಾಲನೆ ಮಾಡುವುದಕ್ಕೆ ಸಾಧ್ಯವಾಗುತ್ತದೆ ಎಂದರು.
ವಕೀಲರ ಸಂಘದ ಉಪಾಧ್ಯಕ್ಷ ಕೆ.ವಿರುಪಾಕ್ಷಪ್ಪ ಮಾತನಾಡಿ, ವಿದ್ಯಾರ್ಥಿಗಳು ಮಹಾ ನೀಯರ ಆದರ್ಶದ ಬದುಕನ್ನು ಮತ್ತು ಅವರ ಜೀವನ ಚರಿತ್ರೆ ಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಸರ್ಕಾರಿ ಪ್ರೌಢಶಾಲೆಯ ಮುಖ್ಯಾಶಿಕ್ಷಕ ಎಂ.ಬಿ. ಶಿವಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಕೀಲರಾದ ಎಂ. ಮೃತ್ಯುಂಜಯ ವಿದ್ಯಾರ್ಥಿಗಳಿಗೆ ಕಾನೂನಿನ ಸಲಹೆ ನೀಡಿದರು.
ವಕೀಲರ ಸಂಘದ ಕಾರ್ಯದರ್ಶಿ ಕೆ. ಆನಂದ, ಶಿಕ್ಷಕರಾದ ನಾಗರಾಜ್, ವಕೀಲ ಬಿ.ತಿಪ್ಪೇಶ್, ತಾಲ್ಲೂಕು ಕಾನೂನು ಸೇವಾ ಸಮಿತಿಯ ಸಿಬ್ಬಂದಿಗಳಾದ ಬಾಗಳಿ ಕೊಟ್ರೇಶ್, ಬಸವರಾಜ್ ಮತ್ತು ಶಿಕ್ಷಕರು ಇದ್ದರು.