ಖಾಸಗೀಕರಣದ ಭರಾಟೆಯಲ್ಲಿ ಸಾಹಿತ್ಯ, ಕಥೆ, ಕವನ ಉಳಿಯಬೇಕಿದೆ

ಖಾಸಗೀಕರಣದ ಭರಾಟೆಯಲ್ಲಿ ಸಾಹಿತ್ಯ, ಕಥೆ, ಕವನ ಉಳಿಯಬೇಕಿದೆ

ಹರಪನಹಳ್ಳಿ : ಜ್ಞಾನ ಯೋಗಿ’ ಕವನ ಸಂಕಲನ ಬಿಡುಗಡೆಯಲ್ಲಿ  ಜಾನಪದ ವಿದ್ವಾಂಸರಾದ ಡಾ.ಸುಜಾತ ಅಕ್ಕಿ ಕಳಕಳಿ

ಹರಪನಹಳ್ಳಿ, ನ.26- ವಾಸ್ತವದ ಬಗ್ಗೆ ತಿಳಿಹೇಳುವ  ಮಾತಿಗಿಂತ ಕೃತಿ ಲೇಸು ಎನ್ನುವ ಹಾಗೇ ರಾಜಶೇಖರಪ್ಪನವರು ಸರಳ, ಸಜ್ಜನ ವ್ಯಕ್ತಿ ಎಂದು ನೀಲಗುಂದ ಗುಡ್ಡದ ವಿರಕ್ತಮಠದ ಶ್ರೀ ಚನ್ನಬಸವ ಶಿವಯೋಗಿ ಹೇಳಿದರು.

ತಾಲ್ಲೂಕಿನ ನೀಲಗುಂದ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕ, ಸನ್‌ಶೈನ್ ಯುವಕ ಸಂಘ, ಸರ್ವೋದಯ ಹಳೆ ವಿದ್ಯಾರ್ಥಿಗಳ ಸಂಘ, ಕರ್ನಾಟಕ ರಕ್ಷಣಾ ವೇದಿಕೆ ಇವರ ಸಂಯುಕ್ತಾಶ್ರಯದಲ್ಲಿ  ಸಾಹಿತಿ  ಬಣಕಾರ ರಾಜಶೇಖರ್‌ರವರ `ಜ್ಞಾನ ಯೋಗಿ’ ಕವನ ಸಂಕಲನ ಬಿಡುಗಡೆ ಮತ್ತು ಕವಿಗೋಷ್ಟಿ ಕಾರ್ಯ ಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಜ್ಞಾನದ ಹಸಿವು ಉಣಬಡಿಸುವ ಕೆಲಸವನ್ನು ಕಥೆ, ಕವನ, ಸಾಹಿತ್ಯದ ಮೂಲಕ ಇದ್ದು ದುಂದು ವೆಚ್ಚ ಮಾಡದೇ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಿ  ಎಂದರು.

ಜಾನಪದ ವಿದ್ವಾಂಸರಾದ ಡಾ.ಸುಜಾತ ಅಕ್ಕಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ರೈತ ಸಾಹಿತ್ಯ ಹಾಗೂ ಮಹಿಳಾ ಸಾಹಿತ್ಯ ಮುನ್ನೆಲೆಗೆ ಬರಬೇಕು. ಜಾಗತೀಕರಣ, ಖಾಸಗೀಕರಣದ ಭರಾಟೆಯಲ್ಲಿ ಸಾಹಿತ್ಯ, ಕಥೆ, ಕವನಗಳು ಬೆಳೆಯಬೇಕು ಉಳಿಯಬೇಕು. ನಮಗೆ ಯುದ್ಧ ಬೇಕಾಗಿಲ್ಲ, ಅಹಿಂಸೆ ಮತ್ತು ಶಾಂತಿ ಬೇಕಾಗಿದೆ. ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯದಲ್ಲಿ ವೈಚಾರಿಕತೆ ಬಂದಿದೆ. ಕಾಯಕ ಮತ್ತು ದಾಸೋಹದ ಪರಿಕಲ್ಪನೆಯಲ್ಲಿ ಜನರ ಬದುಕಿನ ಬಗ್ಗೆ ಬಸವಣ್ಣ ಚರ್ಚೆ ಮಾಡುತ್ತಾರೆ. ಬರವಣಿಗೆ ಸುಲಭದ ಮಾತಲ್ಲ, ಬರೆದ ಸಾಹಿತಿಗಳಿಗೆ ಗೊತ್ತು ಅದರ ಕಷ್ಟ. ಸಾಹಿತ್ಯ ನಮ್ಮ ಬದುಕು, ಜೀವನದ ಬಗ್ಗೆ ಸಾರಿ ಹೇಳುತ್ತದೆ.

ಮಹಿಳೆಯರಿಗೆ ಬಸವಣ್ಣ ನೀಡಿದ ಮಹತ್ವ ಇಂದು ಸಿಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಸಾಹಿತಿ ಡಿ.ರಾಮನಮಲಿ ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿ ಜ್ಞಾನಯೋಗಿ, ಕವನ ಸಂಕಲನ ಅನೇಕ ವಿಷಯಗಳನ್ನು  ಒಳಗೊಂಡಿದೆ. ಕುವೆಂಪು, ಸ್ವಾಮಿ ವಿವೇಕಾನಂದರ ಬಗ್ಗೆ ತುಂಬಾ ಚೆನ್ನಾಗಿ ಕವನ ಬರೆದಿದ್ದಾರೆ. ಸಮಾಜದ ಆಗುಹೋಗುಗಳನ್ನು ತುಂಬ ಸೊಗಸಾಗಿ ಬರೆದಿದ್ದಾರೆ ಎಂದರು.

ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಅಧ್ಯಕ್ಷ ಜ್ಞಾನಯೋಗಿ ಕವನ ಸಂಕಲನಕಾರ ಬಾಗಳಿ ರಾಜಶೇಖರ್ ಮಾತನಾಡಿ, ಮೊಬೈಲ್ ಬಗ್ಗೆ ಅಪಾರ ಪ್ರೀತಿ ಇದೆ. ನಾವು ಯಾವ ರೀತಿ ಬಳಕೆ ಮಾಡುತ್ತೇವೋ ಅದರ ಮೇಲೆ ಇದ್ದು, ಬಹುಮುಖ್ಯವಾಗಿ ಒಳ್ಳೆಯದಾಗಿ ಉಪಯೋಗಿಸುವ ಕೆಲಸ ಮಾಡಬೇಕು ಎಂದರು.

ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಗೌರವ ಅಧ್ಯಕ್ಷ  ಪೂಜಾರ್ ಷಣ್ಮುಖಪ್ಪ‌ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕರ್ನಾಟಕ  ಚುಟುಕು ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷ ಹಾಲ್ಯಾನಾಯ್ಕ, ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಅಧ್ಯಕ್ಷ ಉಚ್ಚೆಂಗೆಪ್ಪ ಕೆ., ಸಾಹಿತಿಗಳಾದ  ಹೆಚ್.ಎನ್.ಕೊಟ್ರಪ್ಪ, ಸುಭದ್ರಮ್ಮ ಮಾಡ್ಲಗೇರಿ, ತೆಲಗಿಯ ಕೆ.ಎಸ್ ವೀರಭದ್ರಪ್ಪ,  ಇಸ್ಮಾಯಿಲ್  ಎಲಿಗಾರ್, ಕಬ್ಬಳ್ಳಿ ಗೀತಾ, ಮುಖ್ಯ ಶಿಕ್ಷಕ ಪದ್ಮರಾಜ ಜೈನ್, ಸಾಹಿತ್ಯ ‌ಪರಿಷತ್ತು ಗೌರವ ಕಾರ್ಯದರ್ಶಿ ಮಹದೇವಪ್ಪ. ಬಿಎಸ್‌ಎನ್‌ಎಲ್ ನಿವೃತ್ತ ನೌಕರ ಸುಧಾಕರ, ಮುಖಂಡರಾದ ಎಂ.ತಿಮ್ಮೇಶ್, ವಿಠೋಬ ಎಸ್.ಎಚ್, ಪಿ.ಕರಿಬಸಪ್ಪ, ತಿಮ್ಮಲಾಪುರದ ನಾಗರಾಜ್, ನಾಗರಾಜ್‌ ಪಟೇಲ್, ಉದಯ ಬಡಿಗೇರ, ಶಾಂತ ಸೇರಿದಂತೆ ಇತರರು ಇದ್ದರು.

error: Content is protected !!