ಜಿಗಳಿಯಲ್ಲಿ ಸಂವಿಧಾನ ದಿನಾಚರಣೆ

ಜಿಗಳಿಯಲ್ಲಿ ಸಂವಿಧಾನ ದಿನಾಚರಣೆ

ಮಲೇಬೆನ್ನೂರು, ನ.26- ಜಿಗಳಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಸಂವಿಧಾನ ದಿನಾಚರಣೆಯನ್ನು ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಆಚರಿಸಲಾಯಿತು.

ನಂತರ ವಿದ್ಯಾರ್ಥಿಗಳಿಗೆ ಸಂವಿಧಾನ ಪೀಠಿಕೆಯನ್ನು ಬೋಧಿಸಲಾಯಿತು. ಈ ವೇಳೆ ಪ್ರಾಸ್ತಾವಿಕವಾಗಿ ಮಾತನಾಡಿದ ಶಿಕ್ಷಕರಾದ ದೀಪಾ ಅವರು, ಸಂವಿಧಾನವನ್ನು ಯಾವ ರೀತಿ ರಚಿಸಲಾಯಿತು ಎಂಬುದರ ಬಗ್ಗೆ ವಿವರವಾಗಿ ತಿಳಿಸಿದರು.

ಪತ್ರಕರ್ತ ಪ್ರಕಾಶ್, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಜಿ.ಪಿ.ಹನುಮಗೌಡ ಅವರು ಸಂವಿಧಾನದ ಆಶಯ ಕುರಿತು ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ಬಿ.ಪ್ರಭಾಕರ್ ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಎಂಸಿ ಸದಸ್ಯರಾದ ಗಂಗಾಧರಚಾರಿ, ವಿಜಯಭಾಸ್ಕರ್, ಮುಖ್ಯ ಶಿಕ್ಷಕ ಜಿ.ನಾಗೇಶ್, ಶಿಕ್ಷಕರಾದ ಮಲ್ಲಿಕಾರ್ಜುನ್, ಶ್ರೀನಿವಾಸ್ ರೆಡ್ಡಿ, ಕೆ.ಡಿ.ಗುಡ್ಡಪ್ಪ, ಕರಿಬಸಮ್ಮ ಮತ್ತು ಅಡುಗೆ ಸಹಾಯಕರು ಭಾಗವಹಿಸಿದ್ದರು.

error: Content is protected !!