ಹೊನ್ನಾಳಿ ಕಸಬಾ ಸೊಸೈಟಿ ಅಧ್ಯಕ್ಷರಾಗಿ ಬಿ.ಎಲ್.ಕುಮಾರಸ್ವಾಮಿ ಆಯ್ಕೆ

ಹೊನ್ನಾಳಿ ಕಸಬಾ ಸೊಸೈಟಿ ಅಧ್ಯಕ್ಷರಾಗಿ ಬಿ.ಎಲ್.ಕುಮಾರಸ್ವಾಮಿ ಆಯ್ಕೆ

ಹೊನ್ನಾಳಿ, ನ. 24 – ಕಸಬಾ ಸೊಸೈಟಿ ಅಧ್ಯಕ್ಷರಾಗಿ ಚುನಾವಣೆ ಮೂಲಕ ಒಂದು ಮತದ ಅಂತರದಲ್ಲಿ ಬಿ.ಎಲ್. ಕುಮಾರ ಸ್ವಾಮಿ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿ ನವೀನ್‍ಕುಮಾರ್ ತಿಳಿಸಿದರು.

ನಿಕಟಪೂರ್ವ ಅಧ್ಯಕ್ಷ ಜಿನದತ್ತ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಶುಕ್ರವಾರ ಕಸಬಾ ಸೊಸೈಟಿ ಅಧ್ಯಕ್ಷ ಸ್ಥಾನಕ್ಕೆ ಚುನಾವನೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಬಿ.ಎಲ್. ಕುಮಾರಸ್ವಾಮಿ ಹಾಗೂ ಹೆಚ್.ಸಿ. ಪ್ರಕಾಶ್ ಇಬ್ಬರು ನಾಮಪತ್ರ ಸಲ್ಲಿಸಿದ್ದರು. ಬಿ.ಎಲ್. ಕುಮಾರಸ್ವಾಮಿ ಪರವಾಗಿ ಏಳು ಮತಗಳು ಹಾಗೂ ಪ್ರಕಾಶ್ ಪರವಾಗಿ 6 ಮತಗಳು ಚಲಾವಣೆಗೊಂಡವು. 

ಕಸಬಾ ಸೊಸೈಟಿಯ ನಿರ್ದೇಶಕರಾದ ಹನುಮಂತಪ್ಪ, ಜಿನದತ್ತ, ಉಪಾಧ್ಯಕ್ಷ ಪುಟ್ಟುರಾಜು, ನಿರ್ದೇಶಕ ಗುಂಡು, ಚಂದ್ರು, ರಾಣಿ ಸುರೇಶ್, ಸರೋಜಮ್ಮ, ಎಂ.ಸುರೇಶ್, ಕತ್ತಿಗೆ ನಾಗರಾಜ್, ಶಿವಶಂಕರಪ್ಪ, ಈಶ್ವರನಾಯ್ಕ, ಡಿಸಿಸಿ ಪ್ರತಿನಿಧಿ ಲೋಕೇಶಪ್ಪ, ಕಾರ್ಯದರ್ಶಿ ರವಿಕುಮಾರ್, ಸುರೇಶ್ ಇನ್ನಿತರರಿದ್ದರು.

error: Content is protected !!