ಮಲೇಬೆನ್ನೂರು, ನ.24- ಕೊಮಾರನಹಳ್ಳಿ ಗ್ರಾಮದಲ್ಲಿ ಗ್ರಾಮದೇವತೆ ಅಮ್ಮನವರ ನೂತನ ದೇವಸ್ಥಾನ ನಿರ್ಮಾಣಕ್ಕೆ ಶುಕ್ರವಾರ ಬೆಳಿಗ್ಗೆ ಗ್ರಾಮಸ್ಥರು ಶಂಕುಸ್ಥಾಪನೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು.
ಗ್ರಾಮದ ಮುಖಂಡರಾದ ಐರಣಿ ಭರಮಪ್ಪ, ಅರಕೆರೆ ಹಾಲೇಶಪ್ಪ, ಐರಣಿ ಪುಟ್ಟಪ್ಪ, ಪೂಜಾರ್ ಕೆಂಚಪ್ಪ, ಜಿ.ಮಂಜುನಾಥ್ ಪಟೇಲ್, ಮಡಿವಾಳರ ಹಲಗಪ್ಪ, ಜಿ.ರಂಗನಾಥ್, ಗುಡಿಯಪ್ಪರ ರಂಗಪ್ಪ, ಐರಣಿ ರೇವಣಸಿದ್ದಪ್ಪ, ಕೆ.ಎಂ.ನಾಗರಾಜಯ್ಯ, ಆಂಜನೇಯ ಗುರುನಾಥಚಾರ್, ಗ್ರಾ.ಪಂ. ಸದಸ್ಯರಾದ ಮಡಿವಾಳರ ಬಸವರಾಜ್, ಶ್ರೀಮತಿ ರೂಪಾ ಗದಿಗೇಶ್, ಕೆ.ರಂಗಪ್ಪ, ಹುಗ್ಗಿ ರಂಗಪ್ಪ, ಕೆ.ರಾಮಚಂದ್ರಚಾರ್, ಮಲ್ಲಣ್ಣರ ಮಂಜಪ್ಪ, ಎಂ.ವೀರಬಸಪ್ಪ, ನವೀನ್ ಪಟೇಲ್, ಬಿ.ಭರಮಪ್ಪ, ಅರಕೆರೆ ನಾಗರಾಜ್, ಐರಣಿ ಮೂರ್ತಿ, ಶ್ರೀಮತಿ ಮಲ್ಲಮ್ಮ ಪಾರಾರ ಹನುಮಂತಪ್ಪ, ಶ್ರೀಮತಿ ಅಕ್ಕಮ್ಮ ಚಂದ್ರಪ್ಪ ಪೂಜಾರ್ ಸೇರಿದಂತೆ ಇನ್ನೂ ಅನೇಕರು ಈ ವೇಳೆ ಹಾಜರಿದ್ದರು.