ಮಲೇಬೆನ್ನೂರು : ಬೋನಿಗೆ ಬಿದ್ದ ಮುಷ್ಯ

ಮಲೇಬೆನ್ನೂರು : ಬೋನಿಗೆ ಬಿದ್ದ ಮುಷ್ಯ

ಮಲೇಬೆನ್ನೂರು, ನ.23- ಇಲ್ಲಿನ ಶ್ರೀ ಬೀರಲಿಂಗೇಶ್ವರ ಹೆಣ್ಣುಮಕ್ಕಳ ಪ್ರೌಢಶಾಲೆಯ ಕೊಠಡಿಯಲ್ಲಿ ಲಾಕ್ ಆಗಿದ್ದ ಮುಷ್ಯವನ್ನು ಗುರುವಾರ ಬೆಳಿಗ್ಗೆ ಪುರಸಭೆ ಸಿಬ್ಬಂದಿಗಳ ನೆರವಿ ನೊಂದಿಗೆ ಅರಣ್ಯ ಇಲಾಖೆಯ ವರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಜನರಿಗೆ ತೊಂದರೆ ನೀಡುತ್ತಿದ್ದ ಎನ್ನಲಾದ ಈ ಮುಷ್ಯವನ್ನು ಸೆರೆ ಹಿಡಿಯಲು ಪುರಸಭೆ ಹಾಗೂ ಅರಣ್ಯ ಇಲಾಖಯೆವರು ಕಳೆದ ಒಂದು ವಾರದಿಂದಲೂ ಪ್ರಯತ್ನ ನಡೆಸಿದ್ದರು. ಬುಧವಾರ ಬೀರಲಿಂಗೇಶ್ವರ ಪ್ರೌಢಶಾಲೆಯ ಕೊಠಡಿಯಲ್ಲಿ ತರಗತಿ ನಡೆಯುತ್ತಿರುವಾಗಲೇ ಈ ಮುಷ್ಯ ಕೊಠಡಿಯೊಳಗೆ ನುಗ್ಗಿತ್ತು. ಇದರಿಂದ ಗಾಬರಿಗೊಂಡ ವಿದ್ಯಾರ್ಥಿನಿಯರು ಕೊಠಡಿಯಿಂದ ಹೊರಬಂದಾಗ ಮುಷ್ಯವನ್ನು ಅದೇ ಕೊಠಡಿಯಲ್ಲಿ ಕೂಡಿ ಹಾಕಿ ಸೆರೆ ಹಿಡಿಯಲು ಮಾಡಿದ ಪ್ರಯತ್ನ ವಿಳವಾಗಿತ್ತು. 

ಗುರುವಾರ ಬೆಳಿಗ್ಗೆನೇ ಕಾರ್ಯಾಚರಣೆ ಆರಂಭಿಸಿದ ಅರಣ್ಯ ಇಲಾಖೆಯವರು ಮೆಕ್ಕೆಜೋಳದ ತೆನೆ, ಬಾಳೆಹಣ್ಣನ್ನು ಬೋನಿಗೆ ಇಟ್ಟು ಮುಷ್ಯವನ್ನು ಸೆರೆ ಹಿಡಿದು ಶಿವಮೊಗ್ಗಕ್ಕೆ ರವಾನಿಸಿದ್ದಾರೆ. ಪುರಸಭೆ ಹಾಗೂ ಅರಣ್ಯ ಇಲಾಖೆಯವರ ಈ ಕಾರ್ಯವನ್ನು ರೈತ ಮುಖಂಡ ಮುದೇಗೌಡ್ರ ತಿಪ್ಪೇಶ್ ಅಭಿನಂದಿಸಿದ್ದಾರೆ.

ಗುಸ್ತು ಅರಣ್ಯ ಪಾಲಕ ಎಸ್.ಸದನ, ಅರಣ್ಯ ವೀಕ್ಷಕರಾದ ಚಂದ್ರಶೇಖರ್, ರಜಾಕ್, ನೂರ್ ಅಹಮದ್, ಖಲೀಲ್ ಹಾಗೂ ಪುರಸಭೆ ಪೌರ ಕಾರ್ಮಿಕರು ಈ ಕಾರ್ಯಾಚರಣೆಯಲ್ಲಿದ್ದರು.

ಮುಷ್ಯವನ್ನು ಸೆರೆ ಹಿಡಿದಿದ್ದರಿಂದ ಶಾಲಾ ವಿದ್ಯಾರ್ಥಿ ಗಳು ಮತ್ತು ಪಟ್ಟಣದ ನಾಗರಿಕರು ನಿಟ್ಟುಸಿರು ಬಿಟ್ಟಿದ್ದಾರೆ.

error: Content is protected !!