ಸಿದ್ರಾಮಯ್ಯ ಆಡಳಿತ ಹದಗೆಟ್ಟಿದೆ : ಮಾಜಿ ಮಂತ್ರಿ ಅಲ್ಕೋಡ ಆರೋಪ

ಸಿದ್ರಾಮಯ್ಯ ಆಡಳಿತ ಹದಗೆಟ್ಟಿದೆ : ಮಾಜಿ ಮಂತ್ರಿ ಅಲ್ಕೋಡ ಆರೋಪ

ರಾಣೇಬೆನ್ನೂರು, ನ.22- ಮುಖ್ಯಮಂತ್ರಿ ಸಿದ್ರಾಮಯ್ಯ ಅವರು ಇಂತಹ ಆಡಳಿತ ಕೊಡುತ್ತಾರೆ ಅನ್ನುವುದು ನಮ್ಮ ಕನಸು ಮನಸ್ಸಿನಲ್ಲಿರಲಿಲ್ಲ ಎಂದು ಮಾಜಿ ಸಚಿವ, ಜೆಡಿಎಸ್ ಮುಖಂಡ ಅಲ್ಕೋಡ ಹನುಮಂತಪ್ಪ ಅವರು ಸರ್ಕಾರದ ಆಡಳಿತದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. 

ಅವರು ಹಾವೇರಿ ಜಿಲ್ಲೆಯಲ್ಲಿ ಬರ ಅಧ್ಯಯನ ನಡೆಸಿ ಇಲ್ಲಿನ ಜೆಡಿಎಸ್ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು.

ಶೇ. 95 ರಷ್ಟು ಮುಂಗಾರಿ ಹಾಗೂ ಹಿಂಗಾರಿ ಬೆಳೆ ನಾಶವಾಗಿದೆ. ರೈತ  ಬಹಳ ಸಂಕಷ್ಟದಲ್ಲಿದ್ದಾನೆ. ಸರ್ಕಾರ ಅವನತ್ತ ಕಣ್ಣು ತೆರದು ನೋಡಿಲ್ಲ. ಪ್ರತಿ ತಾಲ್ಲೂಕಿಗೆ ಬರಗಾಲದ ಪರಿಹಾರ ಬಂದಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಯಾವೊಬ್ಬ ರೈತರಿಗೂ ಹಣ ಕೊಟ್ಟಿಲ್ಲ. ಕಾಗದದಲ್ಲಿ ಅದೃಶ ಇರಬಹುದು ಹಣ ಬಂದಿಲ್ಲ. ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ಹನುಮಂತಪ್ಪ ಆರೋಪಿಸಿದರು.

ಗ್ಯಾರಂಟಿ ಹೆಸರಿನಲ್ಲಿ ಅಭಿವೃದ್ಧಿ ತಡೆದಿರುವ ಸರ್ಕಾರ ತಾವೇ ಹೇಳಿಕೊಂಡಿರುವ ಗ್ಯಾರಂಟಿಗಳನ್ನೂ ಸಹ ಸಮರ್ಪಕವಾಗಿ ಅನುಷ್ಠಾನಕ್ಕೆ ತಂದಿಲ್ಲ. ಉಚಿತ  ಬಸ್ ಸಂಚಾರ ಬಿಟ್ಟರೆ, ಕರೆಂಟ್, ಯಜಮಾನಿಗೆ ಎರಡು ಸಾವಿರ ಹಾಗೂ ಯುವಕರಿಗೆ ಭತ್ಯೆ ಯಾವುದೂ ಇಲ್ಲ. ಕೇವಲ ಸುಳ್ಳು ಹೇಳುತ್ತಾ ಸರ್ಕಾರ ನಡೆಸುತ್ತಿದ್ದಾರೆ. ಜನರ ಈ ಎಲ್ಲಾ ಸಮಸ್ಯೆಗಳ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರು, ಕುಮಾರಸ್ವಾಮಿ ಅವರು ಲೋಕಸಭೆ ಹಾಗೂ ವಿಧಾನಸಭೆಯಲ್ಲಿ ಹೋರಾಟ ಮಾಡಿದರೆ, ಪಕ್ಷ ಬಹಿರಂಗ ಹೋರಾಟ ಮಾಡುತ್ತದೆ ಎಂದು ಮಾಜಿ ಸಚಿವ ಹನುಮಂತಪ್ಪ ಹೇಳಿದರು. 

ಮುಖಂಡರಾದ ಮಂಜುನಾಥ ಗೌಡಶಿವಣ್ಣನವರ ಹಾಗೂ ವೀರಭದ್ರಪ್ಪ ಹಾಲರಬಿ ಜೊತೆಗಿದ್ದರು.

error: Content is protected !!