ಬಸವೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ನಲ್ಲಿ ಕ್ರೀಡಾ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಾಸಕ ಬಸವಂತಪ್ಪ
ಮಾಯಕೊಂಡ, ನ. 22 – ವಿದ್ಯಾರ್ಥಿ ಗಳು, ಕೇವಲ ಪದವಿ ಪಡೆದರೆ ಸಾಲದು, ದುಶ್ಚಟಗಳಿಗೆ ದಾಸರಾಗದೆ ಉನ್ನತವಾದ ಮಾನವೀಯ ಮೌಲ್ಯ ಬೆಳೆಸಿಕೊಂಡು, ಸಮಾಜಕ್ಕೆ ಆಸ್ತಿಯಾಗಬೇಕು, ಎಂದು ಶಾಸಕ ಕೆ.ಎಸ್. ಬಸವಂತಪ್ಪ ಕರೆಕೊಟ್ಟರು.
ಇಲ್ಲಿನ ಸರ್ಕಾರಿ ಬಸವೇಶ್ವರ ಪ್ರಥಮ ದರ್ಜೆ ಕಾಲೇಜ್ನಲ್ಲಿ ಕ್ರೀಡೆ, ಸಾಂಸ್ಕೃತಿಕ, ರಾಷ್ಟ್ರೀಯ ಸೇವಾ ಯೋಜನೆ, ರೆಡ್ ಕ್ರಾಸ್ ಹಾಗೂ ರೋವರ್ಸ್ ಮತ್ತು ರೇಂಜರ್ಸ್ ಚಟುವಟಿಕೆ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚುತ್ತಿದೆ. ಯುವಕರು ಸರ್ಕಾರಿ ನೌಕರಿಗೆ ಕಾಯದೇ, ಸ್ವಯಂ ಉದ್ಯೋಗ ಕಂಡು ಕೊಂಡು ಬದುಕು ಕಟ್ಟಿಕೊಳ್ಳಬೇಕಿದೆ. ರಾಜ್ಯ ಸರ್ಕಾರ ಉನ್ನತ ಶಿಕ್ಷಣಕ್ಕೆ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ. ನಾಲ್ಕು ಗ್ಯಾರಂಟಿ ಈಗಾಲೇ ಜನರ ಕೈಗಿತ್ತಿದ್ದು, ನಿಮ್ಮ ಭವಿಷ್ಯದ ಅಭ್ಯುದಯಕ್ಕಾಗಿ ಯುವ ನಿಧಿ ನೀಡುತ್ತಿದ್ದೇವೆ ಎಂದರು.
ಗ್ರಾಮೀಣ ಪ್ರದೇಶದ ಕಾಲೇಜ್ಗಳ ದಾಖಲಾತಿ ಹೆಚ್ಚಿದ್ದರೆ ಅವುಗಳಿಗೆ ಅಭಿವೃದ್ಧಿಗೂ ಅನುದಾನ ಸಿಗುತ್ತದೆ. ಗ್ರಾಮೀಣ ವಿದ್ಯಾರ್ಥಿ ಗಳು ನಗರದ ಕಾಲೇಜ್ಗೆ ಹೋಗುತ್ತಿರುವುದು ದುರಂತ. ಇಲ್ಲಿ ಸೇವೆ ಸಲ್ಲಿಸಿದ್ದ ಪ್ರಾಧ್ಯಾಪಕ ಆರ್. ಹನುಮಪ್ಪ ಅವರ ನಿಸ್ಪೃಹ ಸೇವೆ, ಅದಕ್ಕೆ ಗ್ರಾಮಸ್ಥರಿಂದ ದೊರೆತ ಗೌರವ ಇಲ್ಲಿನ ಬೋಧಕರಿಗೆ ಆದರ್ಶವಾಗಬೇಕು. ನಿಮ್ಮ ಸೇವೆ ವಿದ್ಯಾರ್ಥಿಗಳಿಗೆ ತಲುಪಬೇಕು. ದೂರ ಶಿಕ್ಷಣ ಕೇಂದ್ರ ಮತ್ತು ತಾಂತ್ರಿಕ ಶಿಕ್ಷಣ ಇಲ್ಲಿಗೆ ದೊರಕಿಸಲು ವಿಶ್ವವಿದ್ಯಾನಿಲಯದ ವರೊಂದಿಗೆ ಚರ್ಚಿಸುತ್ತೇನೆ. ಹಾಸ್ಟೆಲ್ ಮಂಜೂರಾತಿಗೆ ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಇತಿಹಾಸ ಪ್ರಾಧ್ಯಾಪಕ ಡಾ.ಜಿ.ಸಿ. ಸದಾಶಿವಪ್ಪ, ಸಮಾಜದಲ್ಲಿ ಅಶಾಂತಿ, ಅಹಿತಕರ ಘಟನೆ ಹೆಚ್ಚುತ್ತಿದ್ದು, ಯುವ ಪೀಳಿಗೆ ಶಾಂತಿಯ ಮಹತ್ವ ಅರಿಯಬೇಕು. ಕಾಲೇಜಿನ ಅಭಿವೃದ್ದಿಗೆ ಹಾಸ್ಟೆಲ್ ಒದಗಿಸಬೇಕು ಎಂದು ಶಾಸಕರನ್ನು ಕೋರಿದರು.
ಕವಿ, ಲೇಖಕ ಸಂತೆಬೆನ್ನೂರು ಪೈಜ್ನ ಟ್ರಾಜ್ ಉಪನ್ಯಾಸ ನೀಡಿದರು. ಪ್ರಾಂಶುಪಾಲ ರಾದ ತ್ರಿವೇಣಿ, ಎಪಿಎಂಸಿ ಮಾಜಿ ಅಧ್ಯಕ್ಷ ಅಣಜಿ ಎಸ್.ಕೆ. ಚಂದ್ರಶೇಖರಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಇದ್ದರು.