ದುಬೈ : ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಿರಂತನ ತಂಡ

ದುಬೈ : ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಿರಂತನ ತಂಡ

ದಾವಣಗೆರೆ, ನ.22- ಕರ್ನಾಟಕ ಸಂಘ ದುಬೈ ಅವರಿಂದ ಇದೇ ನ.26ರ ಭಾನುವಾರ 68ನೇ ಕರ್ನಾಟಕ ರಾಜ್ಯೋತ್ಸವ ಹಮ್ಮಿ ಕೊಂಡಿದ್ದು, ಈ ಕಾರ್ಯಕ್ರಮದಲ್ಲಿ ಚಿರಂತನ ಅಕಾಡೆಮಿ ಕಲಾವಿದರು ಮಹಿಷ ಮರ್ಧಿನಿ ನೃತ್ಯ ರೂಪಕ ಹಾಗೂ ಜಾನಪದ ಶೈಲಿಯ ನೃತ್ಯಗಳನ್ನು ಪ್ರಸ್ತುತ ಪಡಿಸಲಿದ್ದಾರೆ ಎಂದು ಕಾರ್ಯದರ್ಶಿ ಮಾಧವ್ ಪದಕಿ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಚಿರಂತನದ 22 ಕಲಾವಿದರನ್ನೊಳಗೊಂಡು ದಾವಣ ಗೆರೆಯಿಂದ ಸುಮಾರು 40 ಕಲಾದವಿದರು ದುಬೈಗೆ ತೆರಳುತ್ತಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನೃತ್ಯ ಗುರು ಡಾ.ಸಂಜಯ್ ಶಾಂತಾರಾಮ್ ಹಾಗೂ ತಂಡದಿಂದ  `ಕರ್ನಾಟಕ ದರ್ಶನ ‘ವಿಶೇಷ ನೃತ್ಯ ರೂಪಕ ಪ್ರದರ್ಶನಗೊಳ್ಳಲಿದೆ. 

ಮಜಾ ಟಾಕೀಸ್ ಹಾಗೂ ಗಿಚ್ಚಿ ಗಿಲಿ ಗಿಲಿ ಹಾಗೂ ಕಾಂತಾರಾ ಖ್ಯಾತಿಯ  ಹಾಸ್ಯ ಕಲಾವಿದರ ಹಾಸ್ಯ ಕಾರ್ಯಕ್ರಮಗಳು ಇರಲಿವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು
ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹಾಗೂ ಸಂಸದೆ ಸುಮಲತಾ ಅಂಬರೀಶ್, ಕರ್ನಾಟಕ ಎನ್‌ಆರ್‌ಐ ಫೋರಂನ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ಸೇರಿದಂತೆ 200ಕ್ಕೂ ಹೆಚ್ಚು ಕಲಾವಿದರು ಮತ್ತು ಅತಿಥಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು. 

ಪತ್ರಿಕಾಗೋಷ್ಠಿಯಲ್ಲಿ ರಕ್ಷಾ ರಾಜಶೇಖರ್, ವೆಂಕಟೇಶ್, ಗಿರಿಜಾ ಇದ್ದರು.

error: Content is protected !!