ಮಲೇಬೆನ್ನೂರಿನ ಎಸ್ಬಿಕೆಎಂ ಶಾಲೆಯ ಅಭಿವೃದ್ಧಿಗೆ ಅನುದಾನ
ಮಲೇಬೆನ್ನೂರು, ನ.21- ನನ್ನ ಶಾಸಕರ ಅನುದಾನದಲ್ಲಿ ಅಭಿವೃದ್ಧಿಯ ಜೊತೆಗೆ ಶಿಕ್ಷಣಕ್ಕೂ ಒತ್ತು ನೀಡುವುದಾಗಿ ಶಾಸಕ ಬಿ.ಪಿ.ಹರೀಶ್ ಹೇಳಿದರು.
ಅವರು ಮಂಗಳವಾರ ಪಟ್ಟಣದ ಶ್ರೀಮತಿ ಬಸಮ್ಮ ಕೆಂಚಪ್ಪ ಮಡಿವಾಳರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮ ದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸರ್ಕಾರದ ಗ್ಯಾರಂಟಿ ಯೋಜನೆಗಳಿಂದಾಗಿ ಅಭಿವೃದ್ಧಿ ಯೋಜನೆಗಳ ಜಾರಿಗೆ ಹಿನ್ನಡೆ ಆಗಿರುವುದರ ಜೊತೆಗೆ ಶಾಸಕರ ಅನುದಾನವೂ ಸಕಾಲಕ್ಕೆ ಬಿಡುಗಡೆಯಾಗಿಲ್ಲ. ಶಾಸಕರ ಅನುದಾನ ಬಂದ ತಕ್ಷಣ ಈ ಶಾಲೆಯ ಅಭಿವೃದ್ಧಿಗೆ ಅನುದಾನ ನೀಡುವುದಾಗಿ ಹರೀಶ್ ಭರವಸೆ ನೀಡಿ, ಶಾಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ವಿದ್ಯಾಸಂಸ್ಥೆಯ ನಿರ್ದೇಶಕ ಡಾ. ಬಿ.ಚಂದ್ರಶೇಖರ್ ಅವರು ಸ್ವಾಗತಿಸಿ, ಶಾಲೆಯ ಅಭಿವೃದ್ಧಿಗೆ ಬೇಕಾದ ಅನುದಾನದ ಬಗ್ಗೆ ಪ್ರಸ್ತಾಪಿಸಿದರು.
ಶಾಲಾ ಮುಖ್ಯಶಿಕ್ಷಕ ದಂಡಿ ತಿಪ್ಪೇಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾಸಂಸ್ಥೆ ಬೆಳೆದು ಬಂದ ದಾರಿಯ ಬಗ್ಗೆ ತಿಳಿಸಿ, ಸಂಸ್ಥೆ ಸುವರ್ಣ ಮಹೋತ್ಸವದ ಸಮೀಪದಲ್ಲಿದೆ ಎಂದರು.
ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ.ವಿಜಯರಾಘವ, ಉಪಾಧ್ಯಕ್ಷ ಬಿ.ಚಿದಾನಂದಪ್ಪ, ಕಾರ್ಯದರ್ಶಿ ಹೆಚ್.ಜಿ.ಚಂದ್ರಶೇಖರ್, ನಿರ್ದೇಶಕರಾದ ಎಂ.ಆರ್.ಮಾರಪ್ಪ, ಹೆಚ್.ಎಸ್.ವೀರಭದ್ರಯ್ಯ, ಎಂ.ಕೆ.ಶಾಂತಮ್ಮ, ಎಂ.ವಿ.ಸಂತೋಷ್, ಪುರಸಭೆ ಸದಸ್ಯರಾದ ಶ್ರೀಮತಿ ವಿಜಯಲಕ್ಷ್ಮಿ, ಕೆ.ಪಿ.ಗಂಗಾಧರ್, ಶ್ರೀಮತಿ ಸುಧಾ ಪಿ.ಆರ್.ರಾಜು, ಬಿ.ಮಂಜುನಾಥ್, ಬೆಣ್ಣೆಹಳ್ಳಿ ಸಿದ್ದೇಶ್, ಪುರಸಭೆ ಮುಖ್ಯಾಧಿಕಾರಿ ಎ.ಸುರೇಶ್, ಹಿರಿಯರಾದ ಎಂ.ಕರಿಬಸಯ್ಯ, ಪೂಜಾರ್ ರೇವಣಪ್ಪ, ಕೊಮಾರನಹಳ್ಳಿಯ ಐರಣಿ ಅಣ್ಣಪ್ಪ, ಮಡಿವಾಳರ ಬಸವರಾಜ್, ಜಿ.ಬೇವಿನಹಳ್ಳಿ ಮಹೇಶ್ವರಪ್ಪ, ಜಿಗಳಿ ಹನುಮಗೌಡ, ಓ.ಜಿ.ಪ್ರಭು, ದಾವಣಗೆರೆ ಕೃಷ್ಣಮೂರ್ತಿ ಸೇರಿದಂತೆ ಇತರರು ಈ ವೇಳೆ ಹಾಜರಿದ್ದರು.