ಹರಪನಹಳ್ಳಿ, ನ.21- ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಮೊಬೈಲ್ ಕಳ್ಳರಿಂದ ಡಕಾಯಿತಿಗೊಳಗಾದ ಮೊಬೈಲ್ ಫೋನ್ಗಳ ಮಾಲೀಕರು ಪೊಲೀಸ್ ಠಾಣೆಗೆ ದೂರುಗಳನ್ನು ನೀಡಿದ ಹಿನ್ನೆಲೆಯಲ್ಲಿ, ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ತಂತ್ರ ಜ್ಞಾನದ ಮೂಲಕ ಒಟ್ಟು ಹತ್ತು ಮೊಬೈಲ್ ಫೋನ್ ಗಳನ್ನು ಆರೋಪಿಗಳಿಂದ ವಶಪಡಿಸಿಕೊಂಡು ಅವುಗಳನ್ನು ಸೂಕ್ತ ವಿವರಣೆ ನೀಡಿದ ಮೊಬೈಲ್ ಫೋನ್ ಮಾಲೀಕರಿಗೆ ಹಿಂದಿರುಗಿಸಿದ್ದಾರೆ.
ಈ ವೇಳೆ ಹರಪನಹಳ್ಳಿ ಉಪವಿಭಾಗದ ಡಿವೈಎಸ್ಪಿ ವೆಂಕಟಪ್ಪ ನಾಯಕ ಮಾತನಾಡಿ, 2023 ನೇ ಸಾಲಿನಲ್ಲಿ 154 ಮೊಬೈಲ್ಗಳನ್ನು ಸಿಇಐಆರ್ ಪೋರ್ಟಲ್ನಲ್ಲಿ ಬ್ಲ್ಯಾಕ್ ಮಾಡಲಾಗಿದ್ದು, ಅವುಗಳಲ್ಲಿ 34 ಮೊಬೈಲ್ ಗಳನ್ನು ಪತ್ತೆ ಹಚ್ಚಿ ಮಾಲೀಕರಿಗೆ ನಮ್ಮ ಠಾಣೆಯಿಂದ ವಿತರಿಸಲಾಗಿದೆ. ಕಳ್ಳತನವಾದ ಮೊಬೈಲ್ಸ್ ಪತ್ತೆ ಹಚ್ಚುವಲ್ಲಿ ಶ್ರಮಿಸಿದ ಇಲಾಖೆ ಸಿಬ್ಬಂದಿಗಳಾದ ಆನಂದ, ನಾಗರಾಜ್, ಹೆಚ್.ಎಂ ರಾಜಶೇಖರ್ ಹಾಗೂ ಕುಮಾರ್ ನಾಯ್ಕ್ ಅವರುಗಳ ಕಾರ್ಯವನ್ನು ಶ್ಲ್ಯಾಘಿಸಿದ್ದಾರೆ.
ಈ ಸಂದರ್ಭದಲ್ಲಿ ಸಿಪಿಐ ನಾಗರಾಜ್ ಕಮ್ಮಾರ್, ಪಿಎಸ್ಐ ಗಳಾದ ಶಂಭುಲಿಂಗ ಸಿ. ಹಿರೇಮಠ, ವಸಂತಪ್ಪ ಮತ್ತಿತರರು ಹಾಜರಿದ್ದರು.