ಮಕ್ಕಳು ಮೊಬೈಲ್, ಜಂಕ್‌ಫುಡ್‌ಗಳಿಂದ ದೂರವಿರಲು ಕರೆ

ಮಕ್ಕಳು ಮೊಬೈಲ್, ಜಂಕ್‌ಫುಡ್‌ಗಳಿಂದ ದೂರವಿರಲು ಕರೆ

ದಾವಣಗೆರೆ, ನ. 20- ಮಕ್ಕಳು ಮೊಬೈಲ್ ಹಾಗೂ ಜಂಕ್‌ಫುಡ್‌ಗಳಿಂದ ದೂರವಿರಬೇಕು. ಪೋಷಕರು ಮಕ್ಕಳ ಓದಿನ ಮೇಲೆ ಒತ್ತಡ ಹೇರದೆ, ಅವರ ಆಸಕ್ತಿಗೆ ತಕ್ಕಂತೆ ಅವರ ಬದುಕನ್ನು ರೂಪಿಸಲು ಬಿಡಬೇಕು ಎಂದು ಆಯುರ್ವೇದ ವೈದ್ಯರಾದ ಶ್ರೀಮತಿ ಲೀಲಾವತಿ ತಿಳಿಸಿದರು.

ನಗರದ ವಿನೂತನ ಮಹಿಳಾ ಸಮಾಜದಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಅವರು ಮಾತನಾಡಿದರು.

ನೂತನ ಮಹಿಳಾ ಸಮಾಜದ ಅಧ್ಯಕ್ಷರಾದ ಶ್ರೀಮತಿ ಚಂದ್ರಿಕಾ ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜನನಿ ಭಾರತಿ, ಮಮತಾ ಜಯಕುಮಾರ್, ಆಶಾ ಹಿರೇಮಠ್, ಪುಷ್ಪಾ ಚೆನ್ನನಗೌಡ, ಯಶೋಧ ಓಂಕಾರಪ್ಪ ದೇಣಿಗೆ ನೀಡಿ ಸಹಕರಿಸಿದರು.

ಗೀತಾ ರೆಡ್ಡಿ, ರತ್ನಾ ರೆಡ್ಡಿ, ಭುವನ ಚಂದ್ರಶೇಖರ್, ಲತಾ ಸತೀಶ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

error: Content is protected !!