ನ.30 ರವರೆಗೆ ಭದ್ರಾ ನಾಲೆಯಲ್ಲಿ ನೀರು ಮುಂದುವರೆಕೆಗೆ ರೈತ ಸಂಘದ ಒತ್ತಾಯ

ನ.30 ರವರೆಗೆ ಭದ್ರಾ ನಾಲೆಯಲ್ಲಿ ನೀರು ಮುಂದುವರೆಕೆಗೆ ರೈತ ಸಂಘದ ಒತ್ತಾಯ

ಮಲೇಬೆನ್ನೂರು, ನ.20- ಭದ್ರಾ ಜಲಾಶ ಯದಿಂದ ಬಲದಂಡೆ ನಾಲೆಗೆ ಹರಿಸುತ್ತಿರುವ ನೀರನ್ನು ನವೆಂಬರ್ 30 ರವರೆಗೆ ಮುಂದುವ ರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್ ಮತ್ತು ಹರಿಹರ ತಾ. ರೈತ ಸಂಘದ ಅಧ್ಯಕ್ಷ ಕೋಗುಳಿ ಮಂಜುನಾಥ್ ಒತ್ತಾಯಿಸಿದ್ದಾರೆ.

ಸೋಮವಾರ ಇಲ್ಲಿನ ನೀರಾವರಿ ಇಲಾಖೆ ಕಚೇರಿ ಎದುರು ನೀರು ಮುಂದುವರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ರೈತ ಸಂಘದ ಪದಾಧಿಕಾರಿಗಳು ನಂತರ ಬೈಕ್ ರಾಲಿ ಮೂಲಕ ನಾಡ ಕಚೇರಿಗೆ ತೆರಳಿ ಗ್ರಾಮ ಲೆಕ್ಕಾಧಿಕಾರಿ ಅಣ್ಣಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಬಲದಂಡೆ ನಾಲೆಗೆ ಹರಿಸುತ್ತಿರುವ ನೀರನ್ನು ನ.22ಕ್ಕೆ ಬಂದ್ ಮಾಡುತ್ತಾರೆಂಬ ಮಾಹಿತಿ ಇದ್ದು, ಒಂದು ವೇಳೆ ನ.22ಕ್ಕೆ ನೀರು ಬಂದ್ ಮಾಡಿದರೆ, ಅಚ್ಚುಕಟ್ಟಿನ ಶೇ.25 ರಷ್ಟು ರೈತರ ಭತ್ತದ ಬೆಳೆ ಹಾಳಾಗಲಿದೆ ಎಂದು ಬಲ್ಲೂರು ರವಿಕುಮಾರ್, ಕೋಗುಳಿ ಮಂಜುನಾಥ್ ಅವರು ಸರ್ಕಾರವನ್ನು ಎಚ್ಚರಿಸಿದ್ದಾರೆ.

ರೈತ ಸಂಘದ ಮಲೇಬೆನ್ನೂರು ಹೋಬಳಿ ಅಧ್ಯಕ್ಷ ಕೆ.ಜಿ.ಅಶೋಕ್, ಸಂಚಾಲಕ ಆರ್.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಎಸ್.ಮಂಜುನಾಥ್ ಸೇರಿದಂತೆ ಇನ್ನೂ ಅನೇಕರು ಈ ವೇಳೆ ಹಾಜರಿದ್ದರು.

error: Content is protected !!