ಸಿಪಿಐ ದಬ್ಬಾಳಿಕೆ: ಕಾನೂನು ಕ್ರಮಕ್ಕೆ ಒತ್ತಾಯಿಸಿ ವಕೀಲರ ಪ್ರತಿಭಟನೆ

ಸಿಪಿಐ ದಬ್ಬಾಳಿಕೆ: ಕಾನೂನು ಕ್ರಮಕ್ಕೆ ಒತ್ತಾಯಿಸಿ ವಕೀಲರ ಪ್ರತಿಭಟನೆ

ಜಗಳೂರು,ನ.20- ಕಕ್ಷಿದಾರರೊಂದಿಗೆ ಠಾಣೆಗೆ ತೆರಳಿದ್ದ ವಕೀಲರಾದ ಬಿ. ಕೊಟ್ರೇಶ್  ಅವರಿಗೆ ಸ್ಥಳೀಯ ಠಾಣೆಯ ಸರ್ಕಲ್ ಇನ್‌ಸ್ಪೆಕ್ಟರ್ ಶ್ರೀನಿವಾಸ್ ರಾವ್ ಅಗೌರವ ತೋರಿಸಿ, ದಬ್ಬಾಳಿಕೆ ನಡೆಸಿರುವುದನ್ನು ಖಂಡಿಸಿ ಮತ್ತು ಕಾನೂನು ಕ್ರಮಕ್ಕೆ ಆಗ್ರಹಿಸಿ ತಾಲ್ಲೂಕು ನ್ಯಾಯವಾದಿಗಳ ಸಂಘದಿಂದ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.

ನ.17ರಂದು ವಕೀಲರಾದ ಕೊಟ್ರೇಶ್ ಅವರು ಕಕ್ಷಿದಾರರಾದ ಬಸವರಾಜಪ್ಪ, ತಿಪ್ಪೇಸ್ವಾಮಿ ಅವರೊಂ ದಿಗೆ ಠಾಣೆಗೆ ತೆರಳಿದಾಗ ಸರ್ಕಲ್ ಇನ್‌ಸ್ಪೆಕ್ಟರ್ ಅವರು ವಕೀಲರ ವೃತ್ತಿಗೆ ಅಗೌರವ ತರುವಂತ ಅವಹೇಳನಕಾರಿ ಮಾತುಗಳನ್ನಾ ಡಿರುತ್ತಾರೆ. ಇದನ್ನು ತಾಲ್ಲೂಕು ಸಂಘ ಖಂಡಿಸುತ್ತದೆ ಎಂದು ತಾಲ್ಲೂಕು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಇ.ಓಂಕಾರೇಶ್ವರ ತಿಳಿಸಿದರು.

ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿ, ನಂತರ ಮಾತನಾಡಿದ ಅವರು, ಸಂಘದ ಸದಸ್ಯರಾದ ಬಿ. ಕೊಟ್ರೇಶ್ ಅವರು ನೀಡಿದ ಮನವಿಯ ಮೇರೆಗೆ ತಾಲೂಕ ಸಂಘ ತುರ್ತು ಸಭೆ ನಡೆಸಿ,  ಇನ್‌ಸ್ಪೆಕ್ಟರ್ ಅವರ ವರ್ತನೆಯನ್ನು ಖಂಡಿಸಿ ಮತ್ತು ಕಾನೂನು ಕ್ರಮ ಕೈಗೊಳ್ಳಲು ಗೃಹ ಸಚಿವರಿಗೆ ಪತ್ರ ಬರೆಯಲು ಸಂಘದಲ್ಲಿ ಸರ್ವಾನು ಮತದಿಂದ ತೀರ್ಮಾನಿಸಲಾಯಿತು ಎಂದರು.

ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ, ಕೆ.ಎಸ್. ಪಾಟೀಲ್, ಕೆ.ವಿ. ರುದ್ರೇಶ್, ಟಿ.ಬಸವರಾಜ್, ಹಾಲಪ್ಪ, ಸಣ್ಣೋಬಯ್ಯ, ಎ.ತಿಪ್ಪೇಸ್ವಾಮಿ, ಎಂ.ಹೆಚ್.ತಿಪ್ಪೇಸ್ವಾಮಿ, ಅಶೋಕ್, ಶಿವಪ್ರಕಾಶ್, ಬೋರಯ್ಯ, ಕರಿಬಸಪ್ಪ ಮುಂತಾದವರು ಭಾಗವಹಿಸಿದ್ದರು.

error: Content is protected !!