ಹರಿಹರ : ಅಂಗನವಾಡಿ ವೇತನ ಹೆಚ್ಚಳಕ್ಕೆ ಮನವಿ

ಹರಿಹರ : ಅಂಗನವಾಡಿ ವೇತನ ಹೆಚ್ಚಳಕ್ಕೆ ಮನವಿ

ಹರಿಹರ, ನ. 17- ತಾಲ್ಲೂಕು ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರ ಸಂಘದ ವತಿಯಿಂದ  ತಾಲ್ಲೂಕು ಶಿಶು ಅಭಿವೃದ್ಧಿ ಮತ್ತು ಕುಟುಂಬ ಕಲ್ಯಾಣ ಇಲಾಖೆ  ಅಧಿಕಾರಿ  ಪೂರ್ಣಿಮಾ  ಅವರಿಗೆ ಮನವಿ ಸಲ್ಲಿಸಿ ತಮ್ಮ  ವೇತನ ಹೆಚ್ಚಿಸುವಂತೆ ಒತ್ತಾಯಿಸಲಾಯಿತು.

ಅಲ್ಲದೇ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ   ಗುಣಮಟ್ಟದ ಆಹಾರ ಪದಾರ್ಥಗಳನ್ನು ವಿತರಿಸುವಂತೆಯೂ ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ತಾಲ್ಲೂಕು  ಸಂಘದ ಅಧ್ಯಕ್ಷೆ  ಬಿ.ಎಸ್. ನಿರ್ಮಲ, ಪ್ರಧಾನ ಕಾರ್ಯದರ್ಶಿ ಎಸ್.ಬಿ. ಲಲಿತಮ್ಮ, ಉಪಾಧ್ಯಕ್ಷರಾದ ಸುಧಾ ನಂದಿಗುಡಿ, ಗೀತಾ ಬೆಳ್ಳೂಡಿ, ಸುಜಾತ ಇತರರು ಹಾಜರಿದ್ದರು.

error: Content is protected !!