37ನೇ ರಾಷ್ಟ್ರೀಯ ಕ್ರೀಡಾಕೂಟ ಶೋಹೇಬ್‌ಗೆ ಚಿನ್ನ-ಆಯಿಷಾಗೆ ಬೆಳ್ಳಿ

37ನೇ ರಾಷ್ಟ್ರೀಯ ಕ್ರೀಡಾಕೂಟ ಶೋಹೇಬ್‌ಗೆ ಚಿನ್ನ-ಆಯಿಷಾಗೆ ಬೆಳ್ಳಿ

ಹರಿಹರ, ನ.16- ಭಾರತೀಯ ಒಲಂಪಿಕ್ ಸಂಸ್ಥೆ ಅಡಿಯಲ್ಲಿ ಜರುಗಿದ 37ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ನಗರದ ಸ್ಕ್ವಾಯ್ ಕ್ರೀಡಾಪಟುಗಳಾದ ಸೈಯದ್ ಶೋಹೇಬ್ ಚಿನ್ನದ ಪದಕ ಮತ್ತು ಆಯಿಷಾ ಪರ್ವಿನ್ ಬೆಳ್ಳಿ ಪದಕ  ಪಡೆದಿರುತ್ತಾರೆ. ಈ ಕ್ರೀಡಾಪಟುಗಳನ್ನು ಜಿಲ್ಲಾಧಿಕಾರಿ ಡಾ.  ಎಂ.ವಿ ವೆಂಕಟೇಶ್  ಅಭಿನಂದಿಸಿದರು. ಈ ಸಂದರ್ಭ ದಲ್ಲಿ ತರಬೇತುದಾರ  ಮೊಹಮ್ಮದ್ ಅಲಿ ಮತ್ತು ಸ್ಕ್ವಾಯ್ ರಾಜ್ಯ ಸಂಸ್ಥೆ  ಅಧ್ಯಕ್ಷ ರವಿಕುಮಾರ್ ಜಿ.ಬಿ, ಕೋಶಾಧ್ಯಕ್ಷ  ಗಿರೀಶ್ ಕೆ.ಬಿ  ಉಪಸ್ಥಿತರಿದ್ದರು.

error: Content is protected !!