ಕನ್ನಡಿಗರಿಂದಲೇ ಕನ್ನಡ ಕಡೆಗಣನೆಯ ಕೆಲಸವಾಗುತ್ತಿದೆ

ಕನ್ನಡಿಗರಿಂದಲೇ ಕನ್ನಡ ಕಡೆಗಣನೆಯ ಕೆಲಸವಾಗುತ್ತಿದೆ

ಪತ್ರಕರ್ತ ಎಚ್‌.ಬಿ. ಮಂಜುನಾಥ್‌

ದಾವಣಗೆರೆ, ನ. 5- ಕನ್ನಡವನ್ನು ಕಡೆಗಣಿಸುವ ಕೆಲಸ ಬ್ರಿಟಿಷರಿಂದ ಆಗಲಿಲ್ಲ. ನಮ್ಮಗಳ ತಪ್ಪಿನಿಂದ, ಕನ್ನಡಿಗರೇ ಕನ್ನಡವನ್ನು ಕಡೆಗಣಿಸುವಂತಹ ಕೆಲಸ ಆಗುತ್ತಿದೆ. ಎಲ್ಲರೂ ಕನ್ನಡ ಮಾತನಾಡಿದಾಗ ಮಾತ್ರ ಕರ್ನಾಟಕದ ಸಂಸ್ಕಾರ ಉಳಿಯಲು ಸಾಧ್ಯ ಎಂದು ಹಿರಿಯ ಪತ್ರಕರ್ತ  ಎಚ್. ಬಿ. ಮಂಜುನಾಥ್  ಹೇಳಿದರು.

ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ 68ನೇ ಕರ್ನಾಟಕ ರಾಜ್ಯೋತ್ಸವ ಹಾಗೂ 50ನೇ ಸುವರ್ಣ ಸಂಭ್ರಮ   ಕಾರ್ಯಕ್ರಮದಲ್ಲಿ  ಅವರು ಮಾತನಾಡಿದರು.

ನಮ್ಮ ಭಾಷೆಯನ್ನು ಬಿಟ್ಟು ಪರ ಭಾಷೆಯ  ವ್ಯಾಮೋಹ ಜಾಸ್ತಿಯಾಗಿದೆ. ಆದ ಕಾರಣ ಕನ್ನಡಕ್ಕೆ ಇಂತಹ ಸ್ಥಿತಿ ಬಂದಿದೆ ಎಂದರು.

ಡಾ. ಮೋದಿ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ  ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಕುರ್ಕಿ ಮಂಜುನಾಥ್, 1956ರಿಂದ ಕರ್ನಾಟಕದ ಏಕೀಕರಣಕ್ಕಾಗಿ ದುಡಿದ ಮಹನೀಯರನ್ನು ಇಂದಿನ ಯುವ ಪೀಳಿಗೆ ಮರೆಯಬಾರದು.  ರಾಜ್ಯದಲ್ಲಿ ಕನ್ನಡ ಭಾಷೆ ಸದೃಢವಾಗಿದೆ ಎಂದರೆ ಸಾಹಿತಿ, ಬರಹಗಾರರು  ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಅಂತಹ  ಸಂಘಟನೆಗಳು ಕಾರಣ.   ಭಾಷೆಗೆ ಕುತ್ತು ಬರದ ಹಾಗೆ ನೋಡಿಕೊಳ್ಳುತ್ತಿರುವ ಹೋರಾಟಗಾರರನ್ನು  ನಾವು ಮರೆಯಬಾರದು  ಎಂದು ತಿಳಿಸಿದರು. 

ಅಧ್ಯಕ್ಷತೆಯನ್ನು    ಕರವೇ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ ವಹಿಸಿದ್ದರು ಈ ಸಂದರ್ಭದಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಬಸಮ್ಮ. ಮಂಜುಳಾ ಗಣೇಶ್, ಸಾಕಮ್ಮ, ಮಲ್ಲಿಕಾರ್ಜುನ್,  ಗಿರೀಶ್ ಕುಮಾರ್,  ಹನುಮಂತಪ್ಪ,  ಸಂತೋಷ್, ಗಜೇಂದ್ರ,  ಜೈನ್ ಭಾರತಿ,   ಶ್ರೀನಿವಾಸ್ ಚಿನ್ನಿಕಟ್ಟಿ, ಓ ಮಹೇಶ್ವರಪ್ಪ,  ಕೋಮಲ್ ಜೈನ್,  ವಾಸುದೇವ್ ರಾಯ್ಕರ್, ಕೆ.ಜಿ. ಬಸವರಾಜ್, ಸುರೇಶ್, ತುಳಸಿರಾಮ್, ಈಶ್ವರ್,  ಧೀರೇಂದ್ರ, ಗೋಪಾಲ್ ದೇವರಮನಿ,  ಉಮೇಶ್,  ಗೋಪಾಲ್ ರಾಜ್, ನಾಗರಾಜು‌, ಬಸವರಾಜ್, ಅಕ್ಷಯ್ ದಾದಾಪೀರ್, ಆಟೋ ರಫೀಕ್,  ತನ್ವೀರ್ ಮೊದಲಾದವರು ಉಪಸ್ಥಿತರಿದ್ದರು

error: Content is protected !!