ನಗರ ಪಾಲಿಕೆ ಹೊರಗುತ್ತಿಗೆ ನೌಕರರ ಪ್ರತಿಭಟನೆ

ನಗರ ಪಾಲಿಕೆ ಹೊರಗುತ್ತಿಗೆ ನೌಕರರ ಪ್ರತಿಭಟನೆ

ದಾವಣಗೆರೆ, ನ. 15- ಮಹಾನಗರ ಪಾಲಿಕೆ ಹೊರ ಗುತ್ತಿಗೆ ಘನತ್ಯಾಜ್ಯ ವಿಲೇವಾರಿ ವಾಹನ ಚಾಲಕರು ಸೇರಿದಂತೆ ಹೊರ ಗುತ್ತಿಗೆ ನೌಕರರನ್ನು ನೇರ ಪಾವತಿಗೊಳಪಡಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಹೊರ ಗುತ್ತಿಗೆ ನೌಕರರ ಸಂಘ,  ಮಹಾನಗರ ಪಾಲಿಕೆಯ ಹೊರ ಗುತ್ತಿಗೆ ಘನ ತ್ಯಾಜ್ಯ ವಿಲೇವಾರಿ ವಾಹನ ಚಾಲಕರ ಸಂಘದ ಪದಾಧಿಕಾರಿಗಳು ನಗರದಲ್ಲಿ ಇಂದು ಪ್ರತಿಭಟನೆ ನಡೆಸಿದರು.

ಮಹಾನಗರ ಪಾಲಿಕೆ ಆವರಣದಿಂದ ಸಂಘದ ಪದಾಧಿಕಾರಿಗಳ ಮುಖಂಡತ್ವದಲ್ಲಿ ಪ್ರತಿಭಟನಾಕಾರರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಘೋಷಣೆ ಕೂಗುತ್ತಾ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿ ಕಾರ್ಜುನ್, ಶಾಸಕ ಶಾಮನೂರು ಶಿವಶಂಕರಪ್ಪ ಗೃಹ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಸಂಘದ ರಾಜ್ಯ ಗೌರವಾಧ್ಯಕ್ಷ ಎಂ. ವೀರೇಶ್ ಮಾತನಾಡಿದರು.

ಮನವಿ ಸ್ವೀಕರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮಾತನಾಡಿ, ಬೇಡಿಕೆಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಬಳಿ ಚರ್ಚಿಸಿ, ಸರ್ಕಾರ ಸಹ ಸಕಾರಾತ್ಮಕವಾಗಿ ಸ್ಪಂದಿಸಲಿದ್ದು, ನೌಕರರ ಬೇಡಿಕೆಗಳ ಈಡೇರಿಕೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ಸಂಘದ ಪದಾಧಿಕಾರಿಗಳಾದ ಎನ್. ನೀಲಗಿರಿಯಪ್ಪ, ಎಲ್.ಎಂ.ಹೆಚ್ ಸಾಗರ್, ಎಂ.ಆರ್. ದುಗ್ಗೇಶ್, ಸುರೇಶ್ ಬಿರಾದಾರ್, ಪಿ. ಮಂಜಪ್ಪ, ಹೆಚ್.ಎಂ. ಪ್ರಭಾಕರ್, ಆರ್. ಮಂಜಪ್ಪ, ಪಿ. ಪ್ರಕಾಶ್, ಡಿ.ಮೈಲಾರಿ, ಹೆಚ್.ಎಂ.ಕೊಟ್ರೇಶ್, ಟಿ. ಸಂತೋಷ್, ಟಿ.ಹೆಚ್. ಚಿದಾನಂದ್, ಹೆಚ್. ನವೀನ್, ಹೆಚ್. ಅಜ್ಜಪ್ಪ, ಚಂದ್ರಪ್ಪ ಜಿ.ಹೆಚ್., ರಜನಿಕಾಂತ್, ದ್ಯಾಮಪ್ಪ, ಡಿ. ಮಂಜಪ್ಪ, ಬಿ.ಎಲ್. ಹನುಮಂತಪ್ಪ, ಗಿರೀಶ್ ಗೌಡ, ರಾಧಾಕೃಷ್ಣ, ಕೆಟಿಜೆ ನಗರ ರವಿ ಮತ್ತಿತರರಿದ್ದರು. 

error: Content is protected !!