ಮಯೂರ್ ಗ್ಲೋಬಲ್ ಶಾಲೆಯ ಧನ್ವಿಗೆ `ಸೋಮೇಶ್ವರ ಗಾನಸಿರಿ’ ಪ್ರಥಮ ಪ್ರಶಸ್ತಿ

ಮಯೂರ್ ಗ್ಲೋಬಲ್ ಶಾಲೆಯ ಧನ್ವಿಗೆ `ಸೋಮೇಶ್ವರ ಗಾನಸಿರಿ’ ಪ್ರಥಮ ಪ್ರಶಸ್ತಿ

ದಾವಣಗೆರೆ, ನ. 15 – ನಗರದ ಸೋಮೇಶ್ವರ ವಿದ್ಯಾಲಯದಿಂದ ಹಮ್ಮಿ ಕೊಂಡಿದ್ದ `ಸೋಮೇ ಶ್ವರ ಗಾನಸಿರಿ’ ಸಂಗೀತ ಕಾರ್ಯಕ್ರಮದಲ್ಲಿ  ಸ್ಥಳೀಯ ಮಯೂರ್ ಗ್ಲೋಬಲ್ ಶಾಲೆಯ ವಿದ್ಯಾರ್ಥಿನಿ ಕು.ಧನ್ವಿ ಹಿರೇಮಠ ಪ್ರಥಮ ಬಹು ಮಾನದೊಂದಿಗೆ ಶ್ರೀ ಸೋಮೇಶ್ವರ ಗಾನಸಿರಿ-2023 ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಳು.

ನಿಟುವಳ್ಳಿಯಲ್ಲಿರುವ ನೇತ್ರಾವತಿ ಕನ್ವೆನ್ಷನ್ ಹಾಲ್‌ನಲ್ಲಿ ಇಂದು ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸೋಮೇಶ್ವರ ವಿದ್ಯಾಲಯದ ಗೌರವ ಕಾರ್ಯದರ್ಶಿ ಕೆ.ಎಂ.ಸುರೇಶ್ ಧನ್ವಿ ಹಿರೇಮಠ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೆ.ಎಂ.ಸುರೇಶ್, ಕಳೆದ 17 ವರ್ಷಗಳಿಂದ ನಮ್ಮ ಸಂಸ್ಥೆ ಈ ವಿನೂತನ ಸಂಗೀತ ಕಾರ್ಯಕ್ರಮವನ್ನು ಯಶಸ್ವಿ ಯಾಗಿ ನಡೆಸಿಕೊಂಡು ಬರುತ್ತಿದೆ. ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ವಿನೂತನ ಕಾರ್ಯಕ್ರಮ, ಶಾಲೆಗಳಲ್ಲಿರುವ ಪ್ರತಿಭೆಗಳನ್ನು ಹೊರಜಗತ್ತಿಗೆ ಪರಿಚಯಿಸುವ ಕಾರ್ಯಕ್ರಮವಾಗಿದೆ ಎಂದರು.  

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪೋಷಕರಾದ ಶ್ರೀಮತಿ ಜಯಶೀಲಾ ಉದ್ಘಾಟನೆ ಮಾಡಿದರು. ಹಿರಿಯ ವಿದ್ಯಾರ್ಥಿಗಳ ವಿಭಾಗದಲ್ಲಿ 5 ಸಾವಿರ ನಗದು, ಸೋಮೇಶ್ವರ ಗಾನಸಿರಿ ಪ್ರಶಸ್ತಿ, ಫಲಕ ಒಳಗೊಂಡ ಪ್ರಥಮ ಬಹುಮಾನ ಕ್ಕೆ ಮಯೂರ್ ಗ್ಲೋಬಲ್ ಶಾಲೆಯ ಕು. ದಾನವಿ ಆಯ್ಕೆಯಾದರು. ಇನ್ನು 3 ಸಾವಿರ ನಗದು ಪ್ರಶಸ್ತಿ ಫಲಕ ಒಳಗೊಂಡ ದ್ವಿತೀಯ ಬಹುಮಾನ ಕು. ಗೌತಮಿ ಹೆಚ್. ಆರ್. ಪಡೆದರೆ ತೃತೀಯ ಬಹುಮಾನಕ್ಕೆ ಸಮಿತ್ ಎಸ್. ಮುತಾಲಿಕ್, ಧ್ಯಾನ್ ಆಯ್ಕೆಯಾದರು. ಕಿರಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಖುಷಿ ಟಿ. ಪಿ, ದ್ವಿತೀಯ ಸ್ಥಾನ ಕು. ಗಾನವಿ ಹಾಗೂ ತೃತೀಯ ಸ್ಥಾನಕ್ಕೆ ಕು ಅನ್ವಯಿ, ಕು. ಚಿನ್ಮಯಿ ಎ. ಎನ್ ಆಯ್ಕೆಯಾದರು. 

ಈ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕರ್ನಾಟಕ ಸಂಗೀತ ವಿದುಷಿ ಶ್ರೀಮತಿ ರಜನಿ ರಘುನಾಥ್ ಕುಲಕರ್ಣಿ, ವೀಣಾ ವಿದ್ವಾಂಸರಾದ ಶ್ರೀಮತಿ ಗೀತಾ ಮಾಲತೇಶ್ ಆಗಮಿಸಿದ್ದರು. ಈ ವೇಳೆ ಪ್ರಾಂಶುಪಾಲರಾದ ಶ್ರೀಮತಿ ಪ್ರಭಾವತಿ, ಆಡಳಿತಾಧಿಕಾರಿ ಹರೀಶ್ ಬಾಬು ಮತ್ತಿತರರಿದ್ದರು.

error: Content is protected !!