ಜಗಳೂರು ಕೇಂದ್ರಕ್ಕೆ ನ್ಯಾ. ಸದಾಶಿವ ಆಯೋಗ ವರದಿ ಸಲ್ಲಿಸಲು ಒತ್ತಾಯ

ಜಗಳೂರು ಕೇಂದ್ರಕ್ಕೆ ನ್ಯಾ. ಸದಾಶಿವ ಆಯೋಗ ವರದಿ ಸಲ್ಲಿಸಲು ಒತ್ತಾಯ

ಜಗಳೂರು, ನ.15- ಪರಿಶಿಷ್ಟ ಜಾತಿ ಒಳಮೀಸಲು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾ. ಎ.ಜೆ.ಸದಾಶಿವ ಆ ಯೋಗ ಸಲ್ಲಿಸಿರುವ ವರದಿಯನ್ನು ಬೆಳಗಾವಿ ಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶ ನದಲ್ಲಿ ಷೆಡ್ಯೂಲ್ 9ರಲ್ಲಿ ಸೇರಿಸಿ, ತಕ್ಷಣ ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ದಲಿತ ಮುಖಂಡ ಶಂಭುಲಿಂಗಪ್ಪ ಆಗ್ರಹಿಸಿದರು. 

ಪಟ್ಟಣದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪರಿಶಿಷ್ಟರ ಮೀಸಲಾತಿ ಸೌಲಭ್ಯಗಳನ್ನು ಬಲಿಷ್ಟರು ಮಾತ್ರ ಪಡೆದುಕೊಳ್ಳುತ್ತಿದ್ದಾರೆ. ಮಾದಿಗ ಮತ್ತು ಛಲವಾದಿ ಸಮುದಾಯಗಳು ಸೌಲಭ್ಯಗಳಿಗೆ ಪರಿಪೂರ್ಣವಾಗಿ ಹಂಚಿಕೆಯಾಗಿಲ್ಲ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಬಸವರಾಜ್ ಬೊಮ್ಮಾಯಿ ಸರ್ಕಾರ ಒಳ ಮೀಸಲಾತಿ ಸೌಲಭ್ಯ ನೀಡಲು ಮಾಧುಸ್ವಾಮಿ ನೇತೃತ್ವದಲ್ಲಿ ಸಂಪುಟ ಉಪಸಮಿತಿ ಸಭೆ ರಚನೆ ಮಾಡಲಾಗಿತ್ತು. ಆದರೆ ಕೇಂದ್ರಕ್ಕೆ ಆ ವರದಿ ಸಲ್ಲಿಕೆಯಾಗಿದೆಯೋ, ಇಲ್ಲವೋ ಎಂಬುದು ಗೊತ್ತಿಲ್ಲ.

ಧರ್ಮಸಿಂಗ್ ನೇತೃತ್ವದ ಸರ್ಕಾರ ನ್ಯಾ. ಎ.ಜೆ.ಸದಾಶಿವ ನೇತೃತ್ವದ ಆಯೋಗವನ್ನು ರಚನೆ ಮಾಡಿತ್ತು. ಸುಮಾರು 15 ವರ್ಷ ಕಳೆದರೂ ಪರಿಶಿಷ್ಟ ಜಾತಿಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಉದ್ಯೋಗದ ಸ್ಥಿತಿಗಳು ಈಗಲೂ ಹಾಗೇ ಇವೆ. ಎಡಗೈ ಸಮುದಾಯಕ್ಕೆ ಶೇ.6 ರಷ್ಟು ಮತ್ತು ಬಲಗೈ ಸಮುದಾಯಕ್ಕೆ ಶೇ.5, ಸ್ಪೃಶ್ಯ ಸಮುದಾಯಕ್ಕೆ ಶೇ.3 ಹಾಗೂ ಇತರೆ ಸಮುದಾಯಗಳಿಗೆ ಶೇ.1ರಷ್ಟು ಮೀಸಲು ನೀಡಲು ನ್ಯಾ.ಸದಾಶಿವ ವರದಿ ಯಲ್ಲಿ ಶಿಫಾರಸ್ಸು ಮಾಡಿತ್ತು. ಆದರೆ ಅದಕ್ಕೆ ಕೇಂದ್ರದಲ್ಲಿ ಅನುಮೋದನೆ ದೊರೆಯಬೇಕು. 

ತಕ್ಷಣವೇ ಷೆಡ್ಯೂಲ್ 9ರಲ್ಲಿ ಸೇರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇಂದ್ರ ಸರ್ಕಾರದ ಶಿಫಾರಸ್ಸಿಗೆ ಕಳುಹಿಸಬೇಕು. ನ್ಯಾ.ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೆ ಬರುವಂತೆ ಒತ್ತಡ ಹೇರಬೇಕು ಎಂದರು ಆಗ್ರಹಿಸಿದರು. 

ಇದೇ ದಿನಾಂಕ 18 ರಂದು ಶಾಸಕ ಬಿ.ದೇವೇಂದ್ರಪ್ಪ ಅವರಿಗೆ ಎಲ್ಲಾ ದಲಿತ ಮುಖಂಡರು ಸೇರಿ ನ್ಯಾ. ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಲು ಮನವಿ ನೀಡುತ್ತಿದ್ದೇವೆ. ಈ ಅಧಿವೇಶನದಲ್ಲಿ ವರದಿ ಜಾರಿಯಾಗದೇ ಇದ್ದರೆ ಶಾಸಕರ  ಮನೆಗೆ ಮುತ್ತಿಗೆ ಹಾಕುತ್ತೇವೆ ಎಂದು ಡಿಎಸ್‍ಎಸ್ ಮುಖಂಡ ಮಲೆಮಾಚಿಕೆರೆ ಸತೀಶ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ  ಸಿ.ತಿಪ್ಪೇಸ್ವಾಮಿ,  ಹಟ್ಟಿ ತಿಪ್ಪೇಸ್ವಾಮಿ, ಕಾಂಗ್ರೆಸ್ ಮುಖಂಡ ಬಿ.ಮಹೇಶ್ವರಪ್ಪ, ಗ್ಯಾಸ್ ಓಬಣ್ಣ, ರೇಣುಕೇಶ್ ಮುಂತಾದವರು ಇದ್ದರು. 

error: Content is protected !!