ಶೋಷಿತ ಸಮಾಜಗಳ ಸಂವಿಧಾನಿಕ ಹಕ್ಕುಗಳಿಗಾಗಿ ಹೋರಾಟ ಮಾಡುವ ಅನಿವಾರ್ಯತೆ ನಿರ್ಮಾಣ

ಶೋಷಿತ ಸಮಾಜಗಳ ಸಂವಿಧಾನಿಕ ಹಕ್ಕುಗಳಿಗಾಗಿ ಹೋರಾಟ ಮಾಡುವ ಅನಿವಾರ್ಯತೆ ನಿರ್ಮಾಣ

ಹರಿಹರ : ಬಿರ್ಸಾ ಮುಂಡಾ ಜನ್ಮ ದಿನಾಚರಣೆ, ವಾಲ್ಮೀಕಿ ಜಾತ್ರೆಯ ಸಭೆಯಲ್ಲಿ ರಾಜನಹಳ್ಳಿ ಶ್ರೀಗಳ ಹೇಳಿಕೆ

ಹರಿಹರ, ನ. 15 – ಸಂವಿಧಾನಿಕ ಹಕ್ಕುಗಳಿಗಾಗಿ ಎಲ್ಲಾ ಶೋಷಿತ ಸಮಾಜಗಳು ಜಾಗೃತರಾಗಿ ಹೋರಾಟ ಮಾ ಡುವ ಅನಿವಾರ್ಯತೆ ಎದು ರಾಗಿದೆ ಎಂದು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.

ನಗರದ ಕಾಳಿದಾಸ ಬಡಾ ವಣೆಯಲ್ಲಿರುವ ಸಾರ್ವಜನಿಕ ನಾಯಕ ವಿದ್ಯಾರ್ಥಿ ನಿಲಯ ದಲ್ಲಿ ಇಂದು ಕರೆದಿದ್ದ 6ನೇ ವರ್ಷದ ವಾಲ್ಮೀಕಿ ಜಾತ್ರೆಯ ಪೂರ್ವಭಾವಿ ಸಭೆಯ ದಿವ್ಯ ಸಾನ್ನಿಧ್ಯ  ವಹಿಸಿ ಶ್ರೀಗಳು ಮಾತನಾಡಿದರು.

ವಾಲ್ಮೀಕಿ ಜಾತ್ರೆ ಸಮಾಜಕ್ಕೆ ಹೊಸ ದಿಕ್ಸೂಚಿಯಾದರೆ, ಸರ್ಕಾರಕ್ಕೆ ಸಂದೇಶ ರವಾನಿಸುತ್ತದೆ ಎಂದ ಸ್ವಾಮೀಜಿ,  ಬರುವ ಡಿಸೆಂಬರ್ 21ರಂದು ಬೆಂಗಳೂರಿನಲ್ಲಿ ವಾಲ್ಮೀಕಿ ಜಾತ್ರಾ ಸಮಿತಿ ಅಧ್ಯಕ್ಷರಾಗಿರುವ ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಅವರ ಅಧ್ಯಕ್ಷತೆಯಲ್ಲಿ ವಾಲ್ಮೀಕಿ ಜಾತ್ರೆಯ ರಾಜ್ಯಮಟ್ಟದ 2ನೇ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ ಎಂದರು.

ಈ ದಿನ ಬುಡಕಟ್ಟು ಜನಾಂಗದ ಅಪ್ರತಿಮ ಹೋರಾ ಟಗಾರ ಬಿರ್ಸಾ ಮುಂಡ ಅವರ ಜನ್ಮ ದಿನಾಚರಣೆಯನ್ನು ದೇ ಶದಲ್ಲೆಡೆ ಆಚರಿಸಲಾಗುತ್ತಿದ್ದು, ನಾಮಾ ಕೂಡಾ ಇಂದಿಲ್ಲಿ ಆಚರಣೆ ಮಾಡಿದ್ದೇವೆ.

ಬಿರ್ಸಾ ಮುಂಡಾ ಅವರು ಬ್ರಿಟಿಷರ ವಿರುದ್ಧ ಹೋರಾಟ ಮಾಡಿ, ಬುಡಕಟ್ಟು ಜನರಿಗೆ ಅಂದೇ ಸಾಮಾಜಿಕ ನ್ಯಾಯ ಕಲ್ಪಿಸಿ ಕೊಟ್ಟ ಮಹಾನ್‌ ನಾಯ ಕನಾಗಿ ಹೊರ ಹೊಮ್ಮಿದ್ದರು. ಅವರ ಹೋರಾಟ ಹಾಗೂ ಆದರ್ಶದ ಬದುಕು ನಮಗೆ ಮಾದರಿಯಾಗಿದೆ ಎಂದು ಸ್ವಾಮೀಜಿ ಹೇಳಿದರು.

ಈ ವೇಳೆ ವಾಲ್ಮೀಕಿ ಜಾತ್ರಾ ಸಮಿತಿಗೆ ಹರಿಹರ ತಾ. ಗ್ರಾಮಾಂತರ ಅಧ್ಯಕ್ಷರನ್ನಾಗಿ ಕೊಕ್ಕನೂರಿನ ದಾಸರ ಸೋಮಶೇಖರ್‌ ಮತ್ತು ಹರಿಹರ ಅಧ್ಯಕ್ಷರನ್ನಾಗಿ ರಮೇಶ್‌ ಅವರನ್ನು ಆಯ್ಕೆ ಮಾಡಲಾಯಿತು.

ಜೊತೆಗೆ ವಾಲ್ಮೀಕಿ ಜಾತ್ರೆಯ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಯಿತು.

ಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ನಿವತ್ತ ಶಿಕ್ಷಕ ಭಾನುವಳ್ಳಿ ಪುಟ್ಟಪ್ಪ, ಹರಿಹರ ತಾ. ಗ್ರಾಮಾಂತರ ನಾಯಕ ಸಮಾಜದ ಅಧ್ಯಕ್ಷ ಜಿಗಳಿ ರಂಗಪ್ಪ, ಹರಿಹರ ನಗರ ನಾಯಕ ಸಮಾಜದ ಅಧ್ಯಕ್ಷ ಮೆಣಿಸಿನಹಾಳ್‌ ಬಸವರಾಜ್‌ ಅವರುಗಳು ಮಾತನಾಡಿದರು. 

ಮಠದ ಧರ್ಮದರ್ಶಿ ಕೆ.ಬಿ. ಮಂಜುನಾಥ್‌, ಮಠದ ವ್ಯವಸ್ಥಾಪಕ ರಾಜನಹಳ್ಳಿ ಭೀಮಣ್ಣ, ಶಿಕ್ಷಕ ವಾಸನ ಮಹಾಂತೇಶ್, ನಗರಸಭೆ ಸದಸ್ಯ ದಿನೇಶ್‌ ಬಾಬು, ಮುಖಂಡರಾದ ಕೆ.ಬೇವಿನಹಳ್ಳಿ ನಾಗೇಂ ದ್ರಪ್ಪ, ದೇವರಬೆಳಕರೆ ಮಹೇಶ್ವರಪ್ಪ, ಹಂಚಿನಮನಿ ದೇವೇಂದ್ರಪ್ಪ, ಮಕರಿ ಪಾಲಾ ಕ್ಷಪ್ಪ, ಗಂಗಾಧರ್‌ ಹನುಮಂತ ಹನಗವಾಡಿ ಹನುಮಂತಪ್ಪ ನಿವೃತ್ತ ಸೈನಿಕ ಪರಶುರಾಮ್‌, ಮಲೇಬೆನ್ನೂರಿನ ಪಾಳೇಗಾರ್‌ ನಾಗರಾಜ್‌, ವೇರ್‌ಹೌಸ್‌ ಬಸವರಾಜ್‌, ದೊಡೇನಿ ಬಸವರಾಜ್‌, ಜಿಗಳಿ ಕೆ.ಜಿ. ಬಸವರಾಜ್‌, ಬೆಣ್ಣೇರ್‌ ನಂದ್ಯಪ್ಪ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು. 

ಪತ್ರಕರ್ತ ಜಿಗಳಿ ಪ್ರಕಾಶ್‌ ಸ್ವಾಗತಿಸಿದರು. ಸಮಾಜದ ಹರಿಹರ ನಗರ ಅಧ್ಯಕ್ಷ ಬಸವರಾಜ್‌ ವಂದಿಸಿದರು.

error: Content is protected !!