ರಂಗಭೂಮಿಗಿರುವ ತಾಕತ್ತು ಯಾವುದರಲ್ಲೂ ಇಲ್ಲ

ರಂಗಭೂಮಿಗಿರುವ ತಾಕತ್ತು ಯಾವುದರಲ್ಲೂ ಇಲ್ಲ

ಹರಪನಹಳ್ಳಿ : `ಪದ್ಮಶ್ರೀ’ ಪ್ರಶಸ್ತಿ ವಿಜೇತೆ ಮಂಜಮ್ಮ ಜೋಗತಿ ಪ್ರತಿಪಾದನೆ

ಹರಪನಹಳ್ಳಿ, ನ. 13 – ತಾಲ್ಲೂಕಿನ ಅರಸೀಕೆರೆ ಗ್ರಾಮದ ಶ್ರೀ ಕೋಲಶಾಂತೇಶ್ವರ ಮಠದಲ್ಲಿ ಪೂಜಾರ್ ಚಂದ್ರಪ್ಪನವರ 75 ನೇ ವರ್ಷದ ಹುಟ್ಟುಹಬ್ಬದ ಅಮೃತ ಮಹೋತ್ಸವ, `ಬಣ್ಣ ಮತ್ತು ಬದುಕು’ ಅಭಿನಂದನಾ ಗ್ರಂಥ ಬಿಡುಗಡೆ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿಲ್ಪಿ ಟಿ. ಶಿವಶಂಕರ್ ಅವರಿಗೆ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತ ನಾಡಿದ ಮಂಜಮ್ಮ ಜೋಗತಿ, ರಂಗಭೂಮಿ ಯಲ್ಲಿ ಬರುವ ಪಾತ್ರಗಳಲ್ಲಿ ಗಟ್ಟಿತನ ಹಾಗೂ ತಾಕತ್ತು ಇರುತ್ತದೆ, ರಂಗಭೂಮಿಯಲ್ಲಿ ನಾವು ಎಲ್ಲಾ ಪಾತ್ರಗಳನ್ನು ಮಾಡಬಹುದು. ಇದರಲ್ಲಿ ನಾವು ಯಾವುದೇ ಪಾತ್ರಗಳನ್ನೇ ಆಗಲಿ ಸುಲಲಿತವಾಗಿ ಮಾಡಬಹುದು, ನಾವೆಲ್ಲರೂ ಒಂದೇ, ನಾವು ಎಲ್ಲರೂ ಸಮಾನರು, ರಂಗಭೂಮಿಯಿಂದ ಕಲೆ, ಸಾಹಿತ್ಯ, ಸಂಸ್ಕೃತಿ, ನಡೆ-ನುಡಿ ಹಾಗೂ ನೃತ್ಯ ಎಲ್ಲವೂ ಸಿಗುತ್ತದೆ, ಎಲ್ಲರಲ್ಲೂ ಸಮಾನತೆ ಇರಬೇಕು. ಹಿಂದಿನ ಕಾಲದಲ್ಲಿ ಎಲ್ಲರಲ್ಲೂ ಸಮಾನತೆಯಿತ್ತು, ಆದರೆ ಇಂದಿನ ಕಾಲದಲ್ಲಿ ಎಲ್ಲರಲ್ಲೂ ಸಮಾನತೆಯಿಲ್ಲ  ಎಂದು ಹೇಳಿದರು.

ನಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿ ಸಂಸ್ಕಾರವಂತರನ್ನಾಗಿ ಮಾಡಬೇಕು. ಮೊಬೈಲ್, ಧಾರಾವಾಹಿಗಳಿಂದ ದೂರವಿರ ಬೇಕು, ದಿನಾಲೂ ಪೇಪರ್, ಪುಸ್ತಕಗಳನ್ನು ಹೆಚ್ಚಾಗಿ ಓದಬೇಕು, ನಮ್ಮ ಮಕ್ಕಳಿಗೂ ತಾಯಂದಿರು ಟಿವಿ, ಮೊಬೈಲ್‌ನಿಂದ ದೂರ ವಿಡುವಂತಹ ಕೆಲಸವನ್ನು ಮಾಡಬೇಕು.

ಸಂಸದ ವೈ. ದೇವೇಂದ್ರಪ್ಪ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ನೀವು ನಿಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿ, ಕಷ್ಟ ಪಟ್ಟು ಓದಿಸಿ ಬೆಳೆಸಿದರೆ ಮಕ್ಕಳು ತಂದೆ ತಾಯಿಗಳಿಗೆ ಕೀರ್ತಿ ತರುತ್ತಾರೆ, ನಮ್ಮ ಮುಪ್ಪಿನ ಕಾಲದಲ್ಲಿ ನಮ್ಮನ್ನು ಚನ್ನಾಗಿ ನೋಡಿಕೊಳ್ಳುತ್ತಾರೆ ಎಂದು ಹೇಳಿದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತ ನಾಡಿದ ಶ್ರೀ ಚನ್ನಬಸವ ಮಹಾಸ್ವಾಮೀಜಿ, ನೀಲಗುಂದ ಪೂಜಾರ್ ಚಂದ್ರಪ್ಪ ಸರಳ ಸಜ್ಜನ ವ್ಯಕ್ತಿ, ಯಾವುದೇ ದುರಭ್ಯಾಸಗಳಿಲ್ಲ, ತನ್ನ ಮಗ ನನ್ನು ಚೆನ್ನಾಗಿ ಓದಿಸಿ, ಒಳ್ಳೆಯ ಹುದ್ದೆಯನ್ನು ಕೊಡಿಸಿ, ಸಂಸ್ಕಾರವಂತರಾಗಿದ್ದಾರೆ ಎಂದರು.

ಶ್ರೀ ಶಾಂತಲಿಂಗ ದೇಶೀಕೇಂದ್ರ ಮಹಾ ಸ್ವಾಮೀಜಿ ಮಾತನಾಡಿ,  ಪೂಜಾರ್ ಚಂದ್ರಪ್ಪ ಶರಣರ ಆದರ್ಶ ವ್ಯಕ್ತಿಯಾಗಿದ್ದಾರೆ, ಇವರು ಬಾಲ್ಯದಲ್ಲಿ ಕಡು ಬಡತನವನ್ನು ಅನುಭವಿಸಿ ದ್ದಾರೆ, ಅಂತಹ ಬಡತನದಲ್ಲಿಯೇ ನಾಟಕ ಪ್ರದರ್ಶನ ಮಾಡುತ್ತಾ ಮಕ್ಕಳನ್ನು ವಿದ್ಯಾವಂತ ರನ್ನಾಗಿ ಮಾಡಿ ಒಳ್ಳೆಯ ಹುದ್ದೆಯನ್ನು ಕೊಡಿಸಿ ದ್ದಾರೆ, ಶಿವಶಂಕರ್ ಶಿಲ್ಪಿಯವರು 400 ಕ್ಕೂ ಹೆಚ್ಚು ಗೋಪುರಗಳನ್ನು ನಿರ್ಮಿಸಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಜೊತೆಗೆ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ವೈ. ಡಿ. ಅಣ್ಣಪ್ಪ, ಕೆ. ಪಿ. ಪಾಲಯ್ಯ, ಪ್ರಶಾಂತ್ ಪಾಟೀಲ್, ಸಾಹಿತಿ ಗಳಾದ ರಾಮನ ಮಲಿ, ಇಸ್ಮಾಯಿಲ್ ಎಲಿ ಗಾರ್, ಬಿ. ಪರಶುರಾಮ್ ಸಮಸ್ತರು, ಸೋಮ ಶೇಖರ್ ಕಿಚಡಿ, ಪೂಜಾರ್ ಮರಿಯಪ್ಪ, ಉಪನ್ಯಾಸಕ ಪಿ. ದುರುಗೇಶ್, ಹಾದಿಮನಿ ರಮೇಶ್, ಡಗ್ಗಿ ಬಸಾಪುರದ ಅಣ್ಣಪ್ಪ, ಬಿ. ರಾಮಪ್ಪ, ಜಿ.ವಿ. ವೆಂಕಟೇಶ್ ಶೆಟ್ರು, ಎ.ಹೆಚ್. ಪಂಪಣ್ಣ, ಹೆಚ್. ನಾಗರಾಜಪ್ಪ, ಶೆಡ್ಡೇರ್ ಆನಂದಪ್ಪ, ಆದಮ್ ಸಾಬ್, ಗೊಂದಳಿ ಗೋಪಾಲ  ಹಾಗೂ ಇತರರು ಹಾಜರಿದ್ದರು.

error: Content is protected !!