ಜೈನ್ ಕಾಲೇಜಿನಲ್ಲಿ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮ

ಜೈನ್ ಕಾಲೇಜಿನಲ್ಲಿ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮ

ದಾವಣಗೆರೆ, ನ. 12 – ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮತ್ತು ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜುಕೇಶನ್ (ನವದೆಹಲಿ) ಪ್ರಾಯೋಜಿತ 5 ದಿನಗಳ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮ- ಎಬಿಲಿಟಿ ಎನ್‍ಹಾನ್ಸ್ಮೆಂಟ್ ಕೋರ್ಸ್: ಐಓಟಿ ಲ್ಯಾಬ್ ಅನ್ನು ಜೈನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದಿಂದ ಮಣಿಪಾಲ್ ಸ್ಕೂಲ್ ಆಫ್ ಇನ್ಫಾರ್ಮೇ ಷನ್ ಸೈನ್ಸಸ್‍ನ ಸಹಯೋಗದೊಂದಿಗೆ ನಡೆಯಿತು.

ಯು.ಬಿ.ಡಿ.ಟಿ ಇಸಿಇ ವಿಭಾಗದ ಪ್ರಾಚಾರ್ಯ ಡಾ.ಎಸ್.ಕೆ.ಶ್ರೀಧರಮೂರ್ತಿ ಗೌರವ ಅತಿಥಿಗಳಾಗಿ ಆಗಮಿಸಿದ್ದರು. ಜೈನ್ ಕಾಲೇಜಿನ ಪ್ರಾಂಶುಪಾಲರು ಹಾಗೂ ನಿರ್ದೇಶಕ ಡಾ. ಡಿ. ಬಿ. ಗಣೇಶ್, ಇಸಿಇ ವಿಭಾಗದ ಮುಖ್ಯಸ್ಥ ಡಾ. ಸಂತೋಷ್ ಹೆರೂರ್ ಮಾತನಾಡಿದರು.

ಸಂಪನ್ಮೂಲ ವ್ಯಕ್ತಿಗಳಾದ ಡಾ. ಎನ್. ಪೃಥ್ವಿರಾಜ್, ಪ್ರೊ. ಜಿ.ಪಿ. ರಘುದತ್ತೇಶ್ ಪ್ರೊ. ಬಿ. ರವಿತೇಜ ಮತ್ತು ಕಾರ್ಯಕ್ರಮ ಸಂಯೋಜಕ ಡಾ. ರಾಜೇಂದ್ರ ಸೊಲೋನಿ, ಪ್ರೊ. ಶರಣಬಸವೇಶ್ವರ ಹೆಚ್.ಬಿ ಹಾಗೂ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!