ಹರಿಹರ, ನ. 10- ಜರ್ಮನಿ ಬ್ರಾವೋ ಕನ್ನಡ ಬಳಗದ ವತಿಯಿಂದ ಜರ್ಮನಿಯಲ್ಲಿರುವ ಕನ್ನಡಿಗರು ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿ, ಕನ್ನಡಾಂಬೆಗೆ ಗೌರವ ಸಮರ್ಪಣೆ ಮಾಡಿದರು. ಹರಿಹರದ ಧ.ರಾ.ಮ ಕಾಲೇಜಿನ ಕನ್ನಡ ಭಾಷಾ ಶಿಕ್ಷಕರಾದ ದಿ. ಅನುಪಮ ಅವರ ಮೊಮ್ಮಗಳು ಆಶ್ನಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಂತ್ರ ಪಠಣೆ, ಚಿಣ್ಣರ ಹಾಡು, ಕಪ್ಪೆ ಕರ ಕರ.. ಮುಂತಾದ ಪದ್ಯಗಳನ್ನು ಹೇಳುವ ಮೂಲಕ ತೀರ್ಪಗಾರರ ಪ್ರಶಂಸೆಗೆ ಪಾತ್ರಳಾದಳು.
December 26, 2024