ಹರಪನಹಳ್ಳಿ, ನ.9- ವೀರಶೈವ ವಿದ್ಯಾವರ್ಧಕ ಸಂಘದ ಆಡಳಿತಕ್ಕೊಳಪಟ್ಟ ಹರಪನಹಳ್ಳಿಯ ಎ.ಡಿ.ಬಿ.ಪ್ರಥಮ ದರ್ಜೆ ಕಾಲೇಜಿಗೆ ನ್ಯಾಕ್ ಸಮಿತಿ ಭೇಟಿ ನೀಡಿ ಪರಿಶೀಲನೆ ನಡೆಸಿತು. ಇದರಿಂದ ಎ.ಡಿ.ಬಿ ಮಹಾವಿದ್ಯಾಲಯಕ್ಕೆ ಬಿ ಪ್ಲಸ್ ಮಾನ್ಯತೆ ಲಭಿಸಿದೆ. ಉತ್ತರಾ ಖಂಡ ರಾಜ್ಯದ ಸೂರಜ್ಮಲ್ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕಿ ಡಾ.ರೇಣು ಜತನ್, ಮಹಾರಾಷ್ಟ್ರದ ಶಿವಾಜಿ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜಿನ ಪ್ರಾರ್ಚಾಯ ಡಾ.ಸ್ಮೀತ ದೇಶಮುಖ್ ಈ ಸಮಿತಿಯಲ್ಲಿದ್ದು ಪರಿಶೀಲನೆ ನಡೆಸಿದ್ದರು. ಕಾಲೇಜಿನ ಸಾಧನೆಗೆ ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳು, ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಕೋರಿ ವಿರೂಪಾಕ್ಷಪ್ಪ, ಕಾಲೇಜು ಆಡಳಿತ ಮಂಡಳಿಯ ಅಮೃತ ಮಂಜುನಾಥ, ಪಿ.ಜಿ ದೊಡ್ಡಬಸಪ್ಪ, ಕಾಲೇಜು ಪ್ರಾಂಶುಪಾಲ ಡಾ.ಎಸ್.ಎಂ.ಸಿದ್ದಲಿಂಗಮೂರ್ತಿ, ಐ.ಕ್ಯೂ.ಎ.ಸಿ ಎಚ್.ಆಶಾ ಸೇರಿದಂತೆ ಇತರರು ಅಭಿನಂದಿಸಿದ್ದಾರೆ.
January 1, 2025