ದಾವಣಗೆರೆ, ನ.9- ಧಾರವಾಡದ ಆರ್. ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ಜರುಗಿದ ಕರ್ನಾಟಕ ಮುಕ್ತ ರಾಷ್ಟ್ರಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಜಿಲ್ಲೆಯ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡಿದ್ದಾರೆ.
45 ವರ್ಷ ಮೇಲ್ಪಟ್ಟ ಪುರುಷರ ವಿಭಾಗದಲ್ಲಿ ಮಾಜಿ ಯೋಧ ಮಹಮದ್ ರಫಿ 1.5 ಕಿ.ಮೀ ಓಟ ಮತ್ತು 400 ಮೀ ಹರ್ಡಲ್ಸ್ ಓಟದಲ್ಲಿ ಬೆಳ್ಳಿ ಪದಕ ಮತ್ತು 10 ಕಿ.ಮೀ ಓಟದಲ್ಲಿ ಕಂಚಿನ ಪದಕ ಪಡೆದಿರುತ್ತಾರೆ.
50 ವರ್ಷ ಮೇಲ್ಪಟ್ಟ ಪುರುಷರ ವಿಭಾಗದಲ್ಲಿ, ಕೆ.ಹೆಚ್.ಅಣ್ಣಪ್ಪ 400 ಮೀ ಹರ್ಡಲ್ಸ್ ಓಟದಲ್ಲಿ ಚಿನ್ನದ ಪದಕ, 5 ಮತ್ತು 10 ಕಿ.ಮೀ ಓಟದಲ್ಲಿ ಕಂಚಿನ ಪದಕ ಗಳಿಸಿದ್ದಾರೆ.
70 ವರ್ಷ ಮೇಲ್ಪಟ್ಟ ಪುರುಷ ವಿಭಾಗದಲ್ಲಿ ಲಕ್ಷ್ಮಣರಾವ್ ಸಾಳಂಕಿ ಅವರು 800 ಮೀ ಓಟದಲ್ಲಿ ಬೆಳ್ಳಿ ಪದಕ, 100ಮೀ ಓಟದಲ್ಲಿ ಕಂಚಿನ ಪದಕ, 5 ಮತ್ತು 10 ಕಿ.ಮೀ ಓಟದಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.
60 ವರ್ಷ ಮೇಲ್ಪಟ್ಟ ಮಹಿಳಾ ವಿಭಾಗದಲ್ಲಿ ವಿಷಾಲಾಕ್ಷಿ, 300 ಮೀ ಓಟ, 80 ಮೀ ಹರ್ಡಲ್ಸ್ ಓಟದಲ್ಲಿ ಚಿನ್ನ, 100 ಮತ್ತು 60 ಕಿ.ಮೀ ಓಟದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗಳಿಸಿದ್ದಾರೆ.
50 ವರ್ಷ ಮೇಲ್ಪಟ್ಟ ಪುರುಷ ವಿಭಾಗದಲ್ಲಿ ಎನ್.ಜಿ. ಶ್ರೀನಾಥ್ 200 ಮತ್ತು 400 ಮೀ ಓಟದಲ್ಲಿ ಬೆಳ್ಳಿ ಪದಕ, 800ಮೀ ಓಟದಲ್ಲಿ ಕಂಚಿನ ಪದಕ ಗಳಿಸಿದ್ದಾರೆ.
80 ವರ್ಷ ಮೇಲ್ಪಟ್ಟ ಪುರುಷ ವಿಭಾಗದಲ್ಲಿ ಗುರುಶಾಂತಪ್ಪ ತ್ರಿಪಲ್ ಜಂಪ್ ಚಿನ್ನದ ಪದಕ, ಲಾಂಗ್ ಜಂಪ್‌ನಲ್ಲಿ ಬೆಳ್ಳಿ ಮತ್ತು ಹ್ಯಾಮರ್ ಥ್ರೋ ಮತ್ತು 5 ಕಿ.ಮೀ ರೇಸ್ ವಾಕ್‌ನಲ್ಲಿ ಕಂಚಿನ ಪದಕ ಪಡೆದಿದ್ದಾರೆ.
40 ವರ್ಷ ಮೇಲ್ಪಟ್ಟ ಪುರುಷರ ವಿಭಾಗದಲ್ಲಿ ನಟರಾಜ್, 800 ಮೀ ಓಟ ಮತ್ತು 5 ಕಿ.ಮೀ ರೇಸ್ ವಾಕ್‌ನಲ್ಲಿ ಕಂಚಿನ ಪದಕ ಪಡೆದಿದ್ದಾರೆ.
ಮುಂಬರುವ ದಿನಗಳಲ್ಲಿ ಮಲೇಶಿಯಾದಲ್ಲಿ ನಡೆಯುವ ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸುವ ಅರ್ಹತೆಯನ್ನು ಈ ಕ್ರೀಡಾಪಟುಗಳು ಪಡೆದಿರುತ್ತಾರೆ.