ಮಲೇಬೆನ್ನೂರು, ನ. 9 – ಬುಧವಾರ ಸುರಿದ ಮಳೆಯಿಂದಾಗಿ ಮಲೇಬೆನ್ನೂರು ಹೋಬಳಿಯಲ್ಲಿ ನೂರಾರು ಎಕರೆ ಭತ್ತದ ಬೆಳೆ ನೆಲಕಚ್ಚಿದೆ. ಕಂಭತ್ತನ ಹಳ್ಳಿಯಲ್ಲಿ 30 ಎಕರೆ, ಹುಲುಗಿನ ಹೊಳೆಯಲ್ಲಿ 15 ಎಕರೆ, ಎಳೆ ಹೊಳೆಯಲ್ಲಿ 20 ಎಕರೆ, ಧೂಳೆಯಲ್ಲಿ 30 ಎಕರೆ, ಇಂಗಳ ಗೊಂದಿಯಲ್ಲಿ 20 ಎಕರೆ, ವಾಸನದಲ್ಲಿ 25 ಎಕರೆ, ಉಕ್ಕಡಗಾತ್ರಿಯಲ್ಲಿ 15 ಎಕರೆ ಮತ್ತು ಕುಣೆಬೆಳಕೆರೆಯಲ್ಲಿ 30 ಎಕರೆ ಭತ್ತದ ಬೆಳೆ ನೆಲಕಚ್ಚಿದೆ ಎಂದು ವರದಿಯಾಗಿದೆ. ಮಳೆಯಿಂದ ಭತ್ತದ ಬೆಳೆಗೆ ಹಾನಿಯಾಗಿರುವ ಸ್ಥಳಗಳಿಗೆ ಭೇಟಿ ನೀಡಿ ವರದಿ ನೀಡುವಂತೆ ಗ್ರಾಮ ಲೆಕ್ಕಾಧಿಕಾರಿಗಳಿಗೆ ಸೂಚನೆ ನೀಡಿದ್ದು, ಆ ಪ್ರಕಾರ ಅವರುಗಳು ಈಗಾಗಲೇ ಬೆಳೆ ಹಾನಿ ಸ್ಥಳ ಪರಿಶೀಲನೆ ಮಾಡಿದ್ದಾರೆ ಎಂದು ಉಪ ತಹಶೀಲ್ದಾರ್ ಆರ್. ರವಿ `ಜನತಾವಾಣಿ’ಗೆ ತಿಳಿಸಿದರು. ಮನೆಗಳಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ
January 11, 2025